ನವದೆಹಲಿ: ಭಾರತೀಯ ಒಲಂಪಿಕ್ ಸಂಸ್ಥೆ(ಐಒಎ)ಯ ನೂತನ ಅಧ್ಯಕ್ಷರಾಗಿ ಅಥ್ಲೀಟ್ ಪಿ ಟಿ ಉಷಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಒಲಂಪಿಕ್ ಸಂಸ್ಥೆಗೆ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಿಟಿ ಉಷಾ ಅವರಿ ಲಭಿಸಿದೆ.
ಡಿಸೆಂಬರ್ 10ರಂದು ನಡೆಯಲಿರುವ ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿ ಕಣಕ್ಕೆ ರಾಜ್ಯಸಭಾ ಸದಸ್ಯರೂ ಆಗಿರುವ “ಭಾರತದ ಓಟದ ರಾಣಿ” ಪಿ.ಟಿ.ಉಷಾ ಒಬ್ಬರೇ ನಾಮಪತ್ರ ಸಲ್ಲಿಸಿದರು. ಹಾಗಾಗಿ ಭಾರತೀಯ ಒಲಂಪಿಕ್ ಸಂಸ್ಥೆಗೆ ಅವರು ಅಧ್ಯಕ್ಷರಾಗಲಿದ್ದಾರೆ.
58ರ ಹರೆಯದ ಉಷಾ, ಅನೇಕ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರು ಮತ್ತು 1984ರ ಒಲಂಪಿಕ್ಸ್ 400 ಮೀಟರ್ ಹರ್ಡಲ್ಸ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದವರು, ತಮ್ಮ ತಂಡದ 14 ಜನರೊಂದಿಗೆ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದರು.
ಪಿ.ಟಿ.ಉಷಾ ಅವರು, 95 ವರ್ಷಗಳ ಇತಿಹಾಸದ ಭಾರತೀಯ ಒಲಂಪಿಕ್ ಸಂಸ್ಥೆಗೆ ಮುಖ್ಯಸ್ಥರಾಗಿರುವ ಮೊದಲ ಒಲಿಂಪಿಯನ್ ಮತ್ತು ಮೊದಲ ಅಂತಾರಾಷ್ಟ್ರೀಯ ಪದಕ ವಿಜೇತರಾಗುತ್ತಾರೆ. 2000 ರಲ್ಲಿ ಹಲವು ಪದಕಗಳೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿವೃತ್ತರಾಗುವ ಮೊದಲು ಎರಡು ದಶಕಗಳ ಕಾಲ ಭಾರತೀಯ ಮತ್ತು ಏಷ್ಯನ್ ಅಥ್ಲೆಟಿಕ್ಸ್‌ನಲ್ಲಿ ಪ್ರಾಬಲ್ಯ ಸಾಧಿಸಿದ್ದರು.
ಉಷಾ ಅವರು 1934ರಲ್ಲಿ ಟೆಸ್ಟ್ ಪಂದ್ಯಗಳ ಸರದಾರ ಮಹಾರಾಜ ಯಾದವೀಂದ್ರ ಸಿಂಗ್ ನಂತರ ಒಲಂಪಿಕ್ ಸಂಸ್ಥೆಯ ಮುಖ್ಯಸ್ಥರಾಗಿ ದೇಶವನ್ನು ಪ್ರತಿನಿಧಿಸುವ ಮೊದಲ ಕ್ರೀಡಾಪಟುವಾಗಿದ್ದಾರೆ. ಸಿಂಗ್ ಅವರು 1938 ರಿಂದ 1960 ರವರೆಗೆ ಅಧಿಕಾರದಲ್ಲಿದ್ದ ಮೂರನೇ ಅಧ್ಯಕ್ಷರಾಗಿದ್ದರು.
24 ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ನಾಮಪತ್ರ ಸಲ್ಲಿಕೆ:
ಪಿ.ಟಿ. ಉಷಾ, ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಉನ್ನತ ಓಟಗಾರ್ತಿ, ಭಾರತೀಯ ಒಲಂಪಿಕ್ ಸಂಸ್ಥೆಯ ಅಥ್ಲೀಟ್‌ಗಳ ಆಯೋಗದಿಂದ ಅತ್ಯುತ್ತಮ ಅರ್ಹತೆಯ (ಎಸ್‌ಓಎಂ) ಎಂಟು ಕ್ರೀಡಾ ಪಟುಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ ಮತ್ತು ಅವರನ್ನು ಚುನಾವಣಾ ಕಾಲೇಜು ಸದಸ್ಯರನ್ನಾಗಿ ಮಾಡಿದ್ದಾರೆ.
ಉಪಾಧ್ಯಕ್ಷ (ಮಹಿಳೆ), ಜಂಟಿ ಕಾರ್ಯದರ್ಶಿ (ಮಹಿಳೆ) ಒಂದು ಹುದ್ದೆಗೆ ಸ್ಪರ್ಧೆ ನಡೆಯಲಿದೆ. ನಾಲ್ಕು ಕಾರ್ಯಕಾರಿ ಮಂಡಳಿ ಸದಸ್ಯರ ಸ್ಥಾನಗಳಿಗೆ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾದ (ಎನ್‌ಆರ್‌ಎಐ) ಅಜಯ್ ಪಟೇಲ್ ಅವರು ಹಿರಿಯ ಉಪಾಧ್ಯಕ್ಷರಾಗಲಿದ್ದಾರೆ ಈ ಸ್ಥಾನಕ್ಕೆ ಅವರು ಏಕೈಕ ಅಭ್ಯರ್ಥಿಯಾಗಿದ್ದಾರೆ.
ಒಲಂಪಿಕ್ ಪದಕ ವಿಜೇತ ಶೂಟರ್ ಗಗನ್ ನಾರಂಗ್ ಒಬ್ಬ ಪುರುಷ ಉಪಾಧ್ಯಕ್ಷ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿದ್ದಾರೆ. ಇಬ್ಬರು ಅಭ್ಯರ್ಥಿಗಳು – ರಾಜಲಕ್ಷ್ಮಿ ಸಿಂಗ್ ಡಿಯೋ, ಅಲಕಾನಂದ ಅಶೋಕ್ ಮಹಿಳಾ ಉಪಾಧ್ಯಕ್ಷರ ಏಕೈಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಶನ್ ಅಧ್ಯಕ್ಷ ಸಹದೇವ್ ಯಾದವ್ ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಕಲ್ಯಾಣ್ ಚೌಬೆ ಪುರುಷ ಜಂಟಿ ಕಾರ್ಯದರ್ಶಿಯಾಗಿರುತ್ತಾರೆ ಮತ್ತು ಏಕೈಕ ಮಹಿಳಾ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಅಲಕಾನಂದ ಅಶೋಕ್, ಶಾಲಿನಿ ಠಾಕೂರ್ ಚಾವ್ಲಾ ಮತ್ತು ಸುಮನ್ ಕೌಶಿಕ್ ಎಂಬ ಮೂವರು ಅಭ್ಯರ್ಥಿಗಳಿದ್ದಾರೆ.
ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್ ಮತ್ತು ಬಿಲ್ಲುಗಾರ ಡೋಲಾ ಬ್ಯಾನರ್ಜಿ ಅವರು ಕಾರ್ಯಕಾರಿ ಮಂಡಳಿಯಲ್ಲಿ ಎಂಟು ಎಸ್‌ಒಎಂಗಳ ಪುರುಷ ಮತ್ತು ಮಹಿಳಾ ಪ್ರತಿನಿಧಿಯಾಗಿರುತ್ತಾರೆ.
ಉಳಿದ ನಾಲ್ಕು ಕಾರ್ಯಕಾರಿ ಮಂಡಳಿ ಸದಸ್ಯರಿಗೆ ಹನ್ನೆರಡು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಚಳಿಗಾಲದ ಒಲಿಂಪಿಯನ್ ಶಿವ ಕೇಶವನ್, ಸೈರಸ್ ಪೊಂಚಾ, ಲೆಫ್ಟಿನೆಂಟ್ ಜನರಲ್ ಹರ್ಪಾಲ್ ಸಿಂಗ್, ಭೂಪೇಂದರ್ ಸಿಂಗ್ ಬಜ್ವಾ, ರೋಹಿತ್ ರಾಜ್‌ಪಾಲ್, ಅಮಿತಾಬ್ ಶರ್ಮಾ, ಶಾಲಿನಿ ಠಾಕೂರ್ ಚಾವ್ಲಾ, ಪ್ರಶಾಂತ್ ಖುಷ್ವಾಹಾ, ವಿಟ್ಠಲ್ ಶಿರ್ಗಾಂವ್ಕರ್, ಪರ್ಮಿಂದರ್ ಸಿಂಗ್ ಧಿಂಡ್ಸಾ, ದಿಗ್ವಿಜಯ್ ಸಿಂಗ್ ಚೌತಾಲಾ ಮತ್ತು ಹರ್ಜಿಂದರ್ ಸಿಂಗ್.
ಮಂಗಳವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮರುದಿನ ನಾಮನಿರ್ದೇಶಿತ ಪಟ್ಟಿಯನ್ನು ಪ್ರಕಟಿಸಲಾಗುವುದು. ಡಿಸೆಂಬರ್ 1-3 ರವರೆಗೆ ಉಮೇದುವಾರಿಕೆ ಹಿಂಪಡೆಯಲು ಅವಕಾಶವಿದ್ದು, ಡಿಸೆಂಬರ್ 4 ರಂದು ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.