ಬೆಂಗಳೂರು: ಚಿತ್ರ ನಟಿ ರನ್ಯಾಳಿಂದ ಅಕ್ರಮ ಚಿನ್ನ ಸ್ಮಗ್ಲಿಂಗ್ ಪ್ರಕರಣ ಸಂಬಂಧ ಡಿಜಿಪಿ ರಾಮಚಂದ್ರ ರಾವ್ ಗೆ ಮಗಳಿಂದ ಸಂಕಷ್ಟ ಶುರುವಾಗಿದೆ. ನಟಿ
ಐಎಎಸ್ ಅಧಿಕಾರಿ ಗೌರವ್ ಗುಪ್ತ ನೇತೃತ್ವದಲ್ಲಿ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಮಚಂದ್ರರಾವ್ ಗೆ ಕೊಟ್ಟಿದ್ದ ಪ್ರೋಟೋಕಾಲ್ ಗಳನ್ನು ದುರುಪಯೋಗ ಪಡಿಸಿಕೊಂಡು ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳ ಕಣ್ತಪ್ಪಿಸಿಕೊಂಡು ಅಕ್ರಮ ಅಪರಾಧ ಎಸಗಿರುವ ಆರೋಪ ಇದೆ.
ಇದನ್ನು ಓದಿ :-ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ವೈದ್ಯರ ಕಡ್ಡಾಯ ಸೇವೆ: ಡಾ. ಶರಣಪ್ರಕಾಶ್ ಪಾಟೀಲ್
ಸದ್ಯ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಾಮಚಂದ್ರರಾವ್ ರವರನ್ನು ತನೆಖೆ ನಡೆಸುವುದು ಅಗತ್ಯವೆಂದು ಸರ್ಕಾರ ಪರಿಗಣಿಸಿದೆ.
ತನಿಖೆಗೆ ಅಗತ್ಯವಿರುವ ದಾಖಲೆಗಳನ್ನು ಮತ್ತು ನೆರವನ್ನು ನೀಡಲು ಡಿಐಜಿಪಿಗೆ ಅಲೋಕ್ ಮೋಹನ್ ಗೆ ಸೂಚನೆ ನೀಡಲಾಗಿದ್ದು, ತನಿಖೆ ನಡೆಸಿ ಒಂದು ವಾರದಲ್ಲಿ ವರದಿ ಸರ್ಕಾರಕ್ಕೆ ಸಲ್ಲಿಸಲು ಖಡಕ್ ಸೂಚನೆ ನೀಡಲಾಗಿದೆ. ಇದಲ್ಲದೆ ಪೊಲೀಸ್ ಸಿಬ್ಬಂಧಿಗಳು ಪ್ರೊಟೊಕಾಲ್ ಉಲ್ಲಂಘನೆಯಲ್ಲಿ ಭಾಗಿಯಾಗಿರೊ ಬಗ್ಗೆ ಸಿಐಡಿ ತನಿಖೆ ನಡೆಸುವಂತೆ ಸಹ ಆದೇಶ ನೀಡಲಾಗಿದೆ.