ಇಂಡಿ: ಅಫೇಡಾ ಸಂಸ್ಥೆಯ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಕೊಳೂರಗಿ ಗ್ರಾಮದ ಯುವ ರೈತ ಚಂದ್ರಕಾಂತ ಮೇಡೆಗಾರ ಅವರು ಇಂಡಿ ಲಿಂಬೆಯನ್ನು ಇತ್ತೀಚೆಗೆ ಯುಎಇ ಸೇರಿದಂತೆ ಐರೋಪ್ಯ ರಾಷ್ಟ್ರಗಳಿಗೆ ರಫ್ತು ಮಾಡಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಮಾರುಕಟ್ಟೆಗೂ ಇಂಡಿ ಲಿಂಬೆ ಪ್ರಥಮ ಬಾರಿಗೆ ರಫ್ತಾಗಿದೆ. ಇಂಡಿ
‘ಕುಲವೇದಾ’ ಗ್ರೀನ್ಟೆಕ್ ಪ್ರೈವೆಟ್ ಲಿಮಿಟೆಡ್ ಮೂಲಕ ನೇರವಾಗಿ ಅಥರ್ಗಾ ಗ್ರಾಮದ ಗೋದಾಮಿನಲ್ಲಿ ನಿಂಬೆ ಹಣ್ಣು ಸಂಗ್ರಹಿಸಿ, ಅಲ್ಲಿಂದಲೇ ಪ್ಯಾಕ್ ಮಾಡಿ, 3 ಮೆಟ್ರಿಕ್ ಟನ್ ನಿಂಬೆಯನ್ನು ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ಯುಎಇಗೆ ರಫ್ತು ಮಾಡಿದ್ದಾರೆ. ಇಂಡಿ
ಇದನ್ನೂ ಓದಿ: ಕಲಬುರಗಿ | ಗುಲ್ಬರ್ಗಾ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಡಾ.ಶಶಿಕಾಂತ ಎಸ್.ಉಡಿಕೇರಿ ನೇಮಕ
ಇಂಡಿ ನಿಂಬೆ ಇಂದು ಅರಬ್ ರಾಷ್ಟ್ರಗಳವರೆಗೆ ತಲುಪಿದೆ ಎಂದರೆ ಅದರ ಹಿಂದೆ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಶ್ರಮ ಬಹಳಷ್ಟಿದೆ. ಇಂಡಿ
ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತಿತರ ಪ್ರಮುಖ ನಗರಗಳಿಗೆ ಇಲ್ಲಿನ ನಿಂಬೆ ಹಣ್ಣು ಹೋಗುತ್ತಿತ್ತು. ಇಂದು ಐರೋಪ್ಯ ರಾಷ್ಟ್ರಗಳಿಗೂ ರಫ್ತಾಗುತ್ತಿದೆ.
ಐರೋಪ್ಯ ರಾಷ್ಟ್ರಗಳಿಗೆ ರಫ್ತಾಗಿದ್ದು ಅಲ್ಲದೆ, ಉತ್ತಮ ಬೆಲೆಯೂ ದೊರೆತಿದೆ. ಈ ಹಿಂದೆ ಪ್ರತಿವರ್ಷ ₹350 ರಿಂದ ₹500 ಕೋಟಿ ವರೆಗೆ ವಹಿವಾಟು ನಡೆಯುತ್ತಿದ್ದ ನಿಂಬೆ ಇಂದು ₹ 600 ರಿಂದ ₹ 800 ಕೋಟಿ ವಹಿವಾಟು ನಡೆಯುತ್ತಿದೆ ಎಂದು ನಿಂಬೆ ಅಭಿವೃದ್ಧಿ ಮಂಡಳಿ ಲೆಕ್ಕ ನೀಡಿದೆ.
ನಿಂಬೆ ಹಣ್ಣಿನ ಜೊತೆಗೆ ಇದೀಗ ಇಂಡಿ ತಾಲ್ಲೂಕಿನಲ್ಲಿ ರೈತರು ಬೆಳೆಯುತ್ತಿರುವ ನಿಂಬೆ ಸಸಿಗಳಿಗೂ ಕೂಡಾ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹೊರ ರಾಜ್ಯಗಳಿಂದ ರೈತರು ಇಂಡಿ ತಾಲ್ಲೂಕಿನ ರೈತರ ನಿಂಬೆ ಸಸಿಗಳನ್ನು ಕೊಳ್ಳುತ್ತಿದ್ದಾರೆ. ಒಂದು ಗಿಡಕ್ಕೆ ₹20 ಇದ್ದ ದರ ಇದೀಗ ₹100 ವರೆಗೆ ತಲುಪಿದೆ.
ಇದನ್ನೂ ನೋಡಿ : ಬಿಹಾರದಲ್ಲಿ ಸರ್ (SIR) ಸೃಷ್ಟಿಸಿದ ಸುಳ್ಳು ಕಥೆಗಳು – ವಿಶ್ಲೇಷಣೆ : ಗುರುರಾಜ ದೇಸಾಯಿ Janashakthi Media
