ಲಕ್ಷ್ಮೇಶ್ವರ: ‘ನ್ಯಾಯಮೂರ್ತಿ ನಾಗಮೋಹನ ದಾಸ ರ ಒಳ ಮೀಸಲಾತಿ ವರದಿ ಅನುಸಾರ ಮಾದಿಗ ಜನಾಂಗಕ್ಕೆ ಒಳ ಮೀಸಲಾತಿ ನೀಡಲು ಆಗ್ರಹಿಸಿ ಆಗಸ್ಟ್. 1ರಂದು ಪಟ್ಟಣದ ಸರ್ಕಾರಿ ಆಸ್ಪತ್ರೆಯಿಂದ ಬಸ್ ನಿಲ್ದಾಣ ವರೆಗೆ ರಾಜ್ಯ ಸರ್ಕಾರದ ಅಣಕು ಶವ ಯಾತ್ರೆ ನಡೆಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಜುಲೈ 30ರಂದು ಡಿಎಸ್‌ಎಸ್ ಸಂಚಾಲಕ ಮುಖಂಡ ಸುರೇಶ ನಂದೆಣ್ಣವರ ಮತ್ತು ಫಕ್ಕೀರೇಶ ಮ್ಯಾಟಣ್ಣವರ ಆಗ್ರಹಿಸಿದರು.
ಇಲ್ಲಿಯ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ಧೇಶಿಸಿ ಅವರು ಮಾತನಾಡಿದ ಅವರು, ‘ಒಳ ಮೀಸಲಾತಿ ಪರ ಮತ್ತು ವಿರೋಧ ವಾದಗಳನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿ ವರ್ಗೀಕರಣದ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಕಾರಣ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸದೇ ಒಳಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು.
ಇದನ್ನೂ ಓದಿ: ವಿಶ್ವವಿದ್ಯಾನಿಲಯವು ಕೇಸರಿ ತೋಟವಲ್ಲ
ದೇವಪ್ಪ ನಂದೆಣ್ಣವರ, ನಾಗೇಶ ಅಮರಾಪುರ, ಫಕ್ಕೀರೇಶ ಭಜಕ್ಕನವರ, ರಾಮು ಅಡಗಿಮನಿ, ಕರಿಯಪ್ಪ ಶಿರಹಟ್ಟಿ, ಹನಮಂತ ಹರಿಜನ, ಮನೋಹರ ಕರ್ಜಗಿ, ಜಗದೀಶ ಹುಲಿಗೆಮ್ಮನವರ, ಅಜಯ ಮಕರಬ್ಬಿ, ಅನಿಲ ನಂದೆಣ್ಣವರ, ಎಂ.ಬಿ. ಬಸವನಾಯಕರ, ಹನಮಂತ ದೊಡ್ಡಮನಿ, ಫಕ್ಕೀರೇಶ ಪೂಜಾರ, ರಜು ಕಮತದ, ಮಲ್ಲೇಶ ಮಣ್ಣಮ್ಮನವರ, ಮಲ್ಲೇಶ ಬಸವನಾಯಕರ, ಗುಡ್ಡಪ್ಪ ಮತ್ತೂರ ಇದ್ದರು.
ಇದನ್ನೂ ನೋಡಿ: ಬಲ್ಡೋಟಾ ಕಾರ್ಖಾನೆಯಿಂದ ಕೆರೆ ಒತ್ತುವರಿ; ಜಾನುವಾರು ಸಮೇತ ವಿಭಿನ್ನ ಪ್ರತಿಭಟನೆ | Janashakthi Media
