ಮಧ್ಯಂತರ ಬಜೆಟ್ 2024 ಮುಖ್ಯಾಂಶಗಳು | ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದ ಹಣಕಾಸು ಮಂತ್ರಿ!

ನವದೆಹಲಿ: 2024-25 ರ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಮಂಡಿಸಿದರು. ಮುಂಬರುವ 2024-25ರ ಹಣಕಾಸು ವರ್ಷ ಮಧ್ಯಂತರ ಬಜೆಟ್ ಇದಾಗಿದ್ದು, ಈ ನಡುವೆ ಲೋಕಸಭೆ ಚುನಾವಣೆ ನಡೆಯುವುದರಿಂದ ಪೂರ್ಣ ಬಜೆಟ್ ಮಂಡಿಸದೆ ಮಧ್ಯಂತರ ಬಜೆಟ್ ಮಂಡಿಸುವುದು ಸಂಪ್ರದಾಯವಾಗಿದೆ.

ಮಂಡಿಸಲಾದ ಬಜೆಟ್‌ನಲ್ಲಿ ಯಾವುದೆ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆಗಳನ್ನು ಪರಿಚಯಿಸಲಾಗಿಲ್ಲ. 2024-25 ಕ್ಕಾಗಿ ವಿತ್ತೀಯ ಕೊರತೆ ಗುರಿ(ಸರ್ಕಾರದ ಆದಾಯ ಮತ್ತು ವೆಚ್ಚಗಳ ನಡುವಿನ ಅಂತರ)ಯನ್ನು ಒಟ್ಟು ದೇಶೀಯ ಉತ್ಪನ್ನದ (GDP) 5.1% ಗೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ವಿಪಕ್ಷಗಳ ಜೊತೆ ನಂಟಿದೆ ಎಂದು ಒಪ್ಪಲು ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ | ನ್ಯಾಯಾಲಯಕ್ಕೆ ತಿಳಿಸಿದ ಸಂಸತ್‌ ಭದ್ರತಾ ಲೋಪ ಪ್ರಕರಣದ ಆರೋಪಿಗಳು

ಲೋಕಸಭೆ ಚುನಾವಣೆಯ ನಂತರ ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದ ನಂತರ ಮುಂದಿನ ‘ಪೂರ್ಣ ಬಜೆಟ್’ ಅನ್ನು ಜುಲೈನಲ್ಲಿ ಮಂಡಿಸಲಾಗುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಕೇಂದ್ರ ಬಜೆಟ್‌ನ ಪ್ರಮುಖ ಮುಖ್ಯಾಂಶಗಳು ಕೆಳಗಿನಂತಿವೆ;

🔴 ಪರಿಷ್ಕೃತ ವಿತ್ತೀಯ ಕೊರತೆ (ಸರ್ಕಾರದ ಆದಾಯ ಮತ್ತು ವೆಚ್ಚಗಳ ನಡುವಿನ ಅಂತರ) 2023-24 (2024 ಹಣಕಾಸು ವರ್ಷ) ಗಾಗಿ ಜಿಡಿಪಿಯ 5.8% ರಷ್ಟಿದೆ. 2025 ರಲ್ಲಿ ಈ ಹಣಕಾಸಿನ ಕೊರತೆಯು ಜಿಡಿಪಿಯ 5.1% ಎಂದು ನಿರೀಕ್ಷಿಸಲಾಗಿದೆ. 2025-26 (2026 ಹಣಕಾಸು ವರ್ಷದಲ್ಲಿ) ರಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ 4.5% ಕ್ಕಿಂತ ಕಡಿಮೆಗೊಳಿಸುವುದು ಗುರಿಯಾಗಿದೆ.

🔴 ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ.

🔴 ತೆರಿಗೆ ಸಲ್ಲಿಸುವವರ ಸಂಖ್ಯೆ 2.4 ಪಟ್ಟು ಹೆಚ್ಚಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ. ನೇರ ತೆರಿಗೆ ಸಂಗ್ರಹವು 2014 ರಿಂದ ಮೂರು ಪಟ್ಟು ಹೆಚ್ಚಾಗಿದ್ದು, 2024-25 ರಲ್ಲಿ ತೆರಿಗೆ ಸ್ವೀಕೃತಿಗಳು 26.02 ಲಕ್ಷ ಕೋಟಿ ರೂ. ಆಗಿದೆ ಎಂದು ಹೇಳಿದ್ದಾರೆ.

🔴 ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (PAMAY-G) ಅಡಿಯಲ್ಲಿ ಹಣಕಾಸು ಸಚಿವರು 2 ಕೋಟಿ ಹೆಚ್ಚು ಮನೆಗಳನ್ನು ಘೋಷಿಸಿದ್ದಾರೆ.

🔴 “ನಮ್ಮ ತಂತ್ರಜ್ಞಾನಿ ಬುದ್ಧಿವಂತ ಯುವಕರಿಗೆ, ಇದು ಸುವರ್ಣ ಯುಗವಾಗಿದೆ. 50 ವರ್ಷಗಳ ಬಡ್ಡಿ ರಹಿತ ಸಾಲದೊಂದಿಗೆ 1 ಲಕ್ಷ ಕೋಟಿ ರೂಪಾಯಿಗಳ ಕಾರ್ಪಸ್ ಸ್ಥಾಪಿಸಲಾಗುವುದು. ಕಾರ್ಪಸ್ ದೀರ್ಘಾವಧಿಯ ಹಣಕಾಸು ಮತ್ತು ಪೂರಕ ಹಣಕಾಸುಗಳನ್ನು ಕಡಿಮೆ ಅಥವಾ ಶೂನ್ಯ ಬಡ್ಡಿದರಗಳಲ್ಲಿ ದೀರ್ಘಾವಧಿಯೊಂದಿಗೆ ಒದಗಿಸುತ್ತದೆ. ಇದು ಉದಯೋನ್ಮುಕ ಡೊಮೇನ್‌ಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಗಣನೀಯವಾಗಿ ಹೆಚ್ಚಿಸಲು ಖಾಸಗಿ ವಲಯವನ್ನು ಉತ್ತೇಜಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 16 ನೇ ಹಣಕಾಸು ಆಯೋಗಕ್ಕೆ 4 ಸದಸ್ಯರನ್ನು ನೇಮಿಸಿದ ಕೇಂದ್ರ ಸರ್ಕಾರ

🔴 “ನಮ್ಮ ಯುವಕರು ಮತ್ತು ತಂತ್ರಜ್ಞಾನದ ಶಕ್ತಿಗಳನ್ನು ಸಂಯೋಜಿಸುವ ಕಾರ್ಯಕ್ರಮಗಳನ್ನು ನಾವು ಹೊಂದಿರಬೇಕು. ರಕ್ಷಣಾ ಉದ್ದೇಶಗಳಿಗಾಗಿ  ತಂತ್ರಜ್ಞಾನವನ್ನು ಬಲಪಡಿಸಲು ಮತ್ತು ಆತ್ಮ ನಿರ್ಭರ್ತವನ್ನು ತ್ವರಿತಗೊಳಿಸಲು ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು” ಎಂದು ಸೀತಾರಾಮನ್ ಹೇಳಿದ್ದಾರೆ.

🔴 “ವಿವಿಧ ಇಲಾಖೆಗಳ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಆಸ್ಪತ್ರೆ ಮೂಲಸೌಕರ್ಯ” ಗಳ ಬಳಕೆಯ ಮೂಲಕ ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಯೋಜನೆಯನ್ನು ಸೀತಾರಾಮನ್ ಅವರು ಪ್ರಕಟಿಸಿದ್ದಾರೆ. “ಈ ಉದ್ದೇಶಕ್ಕಾಗಿ ಸಮಿತಿಯೊಂದನ್ನು ಸಮಸ್ಯೆಗಳನ್ನು ಪರಿಶೀಲಿಸಲು ಮತ್ತು ಸಂಬಂಧಿತ ಶಿಫಾರಸುಗಳನ್ನು ಮಾಡಲು ಸ್ಥಾಪಿಸಲಾಗುವುದು” ಎಂದು ಅವರು ಹೇಳಿದ್ದಾರೆ.

🔴 “ತ್ರಿವಳಿ ತಲಾಖ್ ಅನ್ನು ಕಾನೂನುಬಾಹಿರಗೊಳಿಸುವುದು, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 1/3 ಸ್ಥಾನಗಳನ್ನು ಮೀಸಲಿಡುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 70% ದಷ್ಟು ಮನೆಗಳನ್ನು ಮಹಿಳೆಯರಿಗೆ ನೀಡುವುದು ಅವರ ಘನತೆಯನ್ನು ಹೆಚ್ಚಿಸಿದೆ” ಎಂದು ಸೀತಾರಾಮನ್ ಹೇಳಿದ್ದಾರೆ.

🔴 “ರೂಫ್-ಟಾಪ್ ಸೌರೀಕರಣದ ಮೂಲಕ, 1 ಕೋಟಿ ಕುಟುಂಬಗಳು ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯಲು ಸಕ್ರಿಯಗೊಳಿಸಲಾಗುತ್ತದೆ. ಈ ಯೋಜನೆಯು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಐತಿಹಾಸಿಕ ದಿನದಂದು ಪ್ರಧಾನ ಮಂತ್ರಿ ಮಾಡಿದ ಸಂಕಲ್ಪವನ್ನು ಅನುಸರಿಸಿ ಮಾಡಲಾಗುತ್ತದೆ.

ಇದನ್ನೂ ಓದಿ: ನ್ಯೂಸ್‌ಕ್ಲಿಕ್ ಪ್ರಕರಣ | ಸಂಸ್ಥಾಪಕ & ಮಾನವ ಸಂಪನ್ಮೂಲ ಮುಖ್ಯಸ್ಥರ ಕಸ್ಟಡಿ ಫೆಬ್ರವರಿ 17 ರವರೆಗೆ ವಿಸ್ತರಣೆ

🔴 2070 ರ ವೇಳೆಗೆ ‘ನಿವ್ವಳ ಶೂನ್ಯ’ ಸಾಧಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅವರು ಹೇಳಿದ್ದಾರೆ.

🔴 ಉಡಾನ್ ಯೋಜನೆಯಡಿಯಲ್ಲಿ 517 ಹೊಸ ಮಾರ್ಗಗಳನ್ನು ಪ್ರಾರಂಭಿಸಲಾಗುವುದು

🔴 ಪ್ರವಾಸೋದ್ಯಮಕ್ಕೆ ಉತ್ತೇಜನಕ್ಕಾಗಿ, “ಅಭಿವೃದ್ಧಿಯನ್ನು ಉತ್ತೇಜಿಸಲು ರಾಜ್ಯಗಳಿಗೆ ದೀರ್ಘಾವಧಿಯ ಬಡ್ಡಿ ರಹಿತ ಸಾಲಗಳನ್ನು ಒದಗಿಸಲಾಗುವುದು. ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ.

🔴 ಕಳೆದ 10 ವರ್ಷಗಳಲ್ಲಿ ಭಾರತೀಯ ಆರ್ಥಿಕತೆಯು ಸಕಾರಾತ್ಮಕ ಪರಿವರ್ತನೆಯನ್ನು ಕಂಡಿದೆ ಎಂದು ತನ್ನ ಭಾಷಣವನ್ನು ಪ್ರಾರಂಭಿಸುತ್ತಾ ಸೀತಾರಾಮನ್ ಹೇಳಿದ್ದಾರೆ.

🔴 “ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಅಗತ್ಯಗಳು ಹಾಗೂ ಅವರ ಆಕಾಂಕ್ಷೆಗಳು ದೇಶದ ಬೆಳವಣಿಗೆಗೆ ಮಾರ್ಗದರ್ಶನ ನೀಡುತ್ತವೆ” ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.

🔴 “ಸರ್ಕಾರವು 2047 ರ ವೇಳೆಗೆ ಭಾರತವನ್ನು ‘ವಿಕ್ಷಿತ್ ಭಾರತ್’ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು… ನಮ್ಮ ಗಮನವು ಸಬ್ಕಾ ಸಾಥ್, ಸಬ್ಕಾ ವಿಕಾಸ್” ಎಂದು ಸೀತಾರಾಮನ್ ಹೇಳಿದ್ದಾರೆ.

🔴 “ಸರ್ಕಾರವು (GDP – Governance, Development and Performance) ಆಡಳಿತ, ಅಭಿವೃದ್ಧಿ ಮತ್ತು ಕಾರ್ಯಕ್ಷಮತೆಯ ಮೇಲೆ ಸಮಾನವಾಗಿ ಗಮನಹರಿಸಿದೆ.” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಚಂಡೀಗಢ | ಬಹುಮತವಿದ್ದರೂ ಕೈ ತಪ್ಪಿದ ಮೇಯರ್‌ ಸ್ಥಾನ – ಕೋರ್ಟ್ ಕದ ತಟ್ಟಿದ ಕಾಂಗ್ರೆಸ್ & ಎಎಪಿ

🔴 ಸಾಮಾಜಿಕ ನ್ಯಾಯದ ಕುರಿತು ಮಾತನಾಡಿದ ಹಣಕಾಸು ಸಚಿವೆ, “ನಮ್ಮ ಸರ್ಕಾರವು ಸರ್ವತೋಮುಖ, ಸರ್ವವ್ಯಾಪಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ವಿಧಾನದೊಂದಿಗೆ ಕೆಲಸ ಮಾಡುತ್ತಿದೆ” ಎಂದು ತಿಳಿಸಿದರು.

🔴 ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಪಿಎಂ ಗತಿ ಶಕ್ತಿ ಅಡಿಯಲ್ಲಿ ಮೂರು ಪ್ರಮುಖ ಆರ್ಥಿಕ ರೈಲ್ವೆ ಕಾರಿಡಾರ್‌ಗಳ ನಿರ್ಮಾಣ.

🔴 ಶಕ್ತಿ, ಖನಿಜ ಮತ್ತು ಸಿಮೆಂಟ್ ಕಾರಿಡಾರ್‌ಗಳ ನಿರ್ಮಾಣ. ಬಂದರು ಸಂಪರ್ಕ ಕಾರಿಡಾರ್‌ಗಳ ನಿರ್ಮಾಣ. ಹೈ ಟ್ರಾಫಿಕ್ ಡೆನ್ಸಿಟಿ ಕಾರಿಡಾರ್‌ಗಳನ್ನು ಕಡಿಮೆ ಮಾಡುವುದು. ಮೆಟ್ರೋ ರೈಲು ಮತ್ತು ನಮೋ ಭಾರತ್ ಮೂಲಕ ನಗರದ ಪರಿವರ್ತನೆ. 40,000 ಸಾಮಾನ್ಯ ರೈಲು ಬೋಗಿಗಳನ್ನು ಹೈಸ್ಪೀಡ್ ವಂದೇ ಭಾರತ್ ಆಗಿ ಪರಿವರ್ತಿಸುವುದು.

🔴 ಖಾಸಗಿ ಮತ್ತು ಸಾರ್ವಜನಿಕ ವಲಯದ ಬೆಂಬಲದಿಂದ ಸುಗ್ಗಿಯ ನಂತರದ ಚಟುವಟಿಕೆಯಲ್ಲಿ ಹೂಡಿಕೆಗೆ ಉತ್ತೇಜನ. ಹೈನುಗಾರರಿಗೆ ಹೆಚ್ಚಿನ ಪ್ರೋತ್ಸಾಹ. ಕಾಲು ಮತ್ತು ಬಾಯಿ ರೋಗವನ್ನು ನಿಯಂತ್ರಿಸಲು ಹೆಚ್ಚಿನ ಪ್ರಯತ್ನ. ಎಲ್ಲಾ ಕೃಷಿಗಳನ್ನು ಹವಾಮಾನ ವಲಯಗಳಲ್ಲಿ ವಿಸ್ತರಿಸಲು ನ್ಯಾನೊ-ಡಿಎಪಿ ಅಪ್ಲಿಕೇಶನ್.

🔴 ಪಿಎಂ ಫಸಲ್ ಬಿಮಾ ಯೋಜನೆಯಡಿ 4 ಕೋಟಿ ರೈತರಿಗೆ ಬೆಳೆ ವಿಮೆ. ಐದು ಇಂಟಿಗ್ರೇಟೆಡ್ ಆಕ್ವಾ ಪಾರ್ಕ್ ಸ್ಥಾಪನೆ. ಜಲಕೃಷಿ ಉತ್ತೇಜನಕ್ಕೆ ಬ್ಲೂ ಎಕಾನಮಿ 2.0 ಅನ್ನು ಪ್ರಾರಂಭ. PM-KISAN ಅಡಿಯಲ್ಲಿ 11.8 ಕೋಟಿ ರೈತರಿಗೆ ನೇರ ಆರ್ಥಿಕ ನೆರವು.

🔴 ಆಯುಷ್ಮಾನ್ ಭಾರತ್ ಅಡಿಯಲ್ಲಿ ಆರೋಗ್ಯ ಸೌಲಭ್ಯಗಳನ್ನು ಎಲ್ಲಾ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ವಿಸ್ತರಿಸುವುದು. ಎಲ್ಲಾ ಜಿಲ್ಲೆಗಳಲ್ಲಿ ಆಸ್ಪತ್ರೆಗಳನ್ನು ಸ್ಥಾಪನೆ. ಗರ್ಭಕಂಠದ ಕ್ಯಾನ್ಸರ್‌ ವಿರುದ್ಧ 9-14 ವರ್ಷ ವಯಸ್ಸಿನ ಹುಡುಗಿಯರಿಗೆ ಲಸಿಕೆ. ಸಕ್ಷಮ್ ಅಂಗನವಾಡಿ ಮತ್ತು ಪೋಷಣೆ 2.0 ಮೂಲಕ ಸುಧಾರಿತ ಪೌಷ್ಟಿಕಾಂಶ ವಿತರಣೆ, ಬಾಲ್ಯದ ಆರೈಕೆ ಮತ್ತು ಅಭಿವೃದ್ಧಿ ತ್ವರಿತ ಮಾಡುವುದು.

ಇದನ್ನೂ ಓದಿ: ಗ್ಯಾರಂಟಿ ಯೋಜನೆ ಬಡವರ ಕಾರ್ಯಕ್ರಮ; ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ – ಸಿಎಂ ಸಿದ್ದರಾಮಯ್ಯ

🔴 ಮಧ್ಯಮ ವರ್ಗದವರಿಗೆ ಹೊಸ ವಸತಿ ಯೋಜನೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2 ಕೋಟಿ ಮನೆಗಳನ್ನು ನಿರ್ಮಿಸುವುದು. ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) 3 ಕೋಟಿ ಮನೆಗಳ ಗುರಿಯನ್ನು ಸಾಧಿಸುವ ಸಮೀಪದಲ್ಲಿದ್ದು, ಮುಂದಿನ 5 ವರ್ಷಗಳಲ್ಲಿ ಹೆಚ್ಚುವರಿ 2 ಕೋಟಿ ಗುರಿ.

🔴 ಮಧ್ಯಂತರ ಬಜೆಟ್‌ಗೆ ಮುನ್ನಾ ವರದಿಯಲ್ಲಿ ಹಣಕಾಸು ಸಚಿವಾಲಯವು ಮುಂಬರುವ ವರ್ಷಗಳಲ್ಲಿ ಭಾರತೀಯ ಆರ್ಥಿಕತೆಯು 7% ಕ್ಕಿಂತ ಹೆಚ್ಚು ಬೆಳವಣಿಗೆಯಾಗುವ ಸಾಧ್ಯತೆಯಿದ್ದು, ಮುಂದಿನ ಮೂರು ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆರಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ನಿರೀಕ್ಷೆಯಿದೆ ಎಂದು ಅಂದಾಜಿಸಿದೆ.

ವಿಡಿಯೊ ನೋಡಿ: ಗದ್ದರ್‌ ನೆನಪು : ದೇಹದೊಳಗಿನ ರಕ್ತ ಒಂದೇ… ದುಡಿವ ಜನರ ಬಾಧೆ ಒಂದೇ… Janashakthi Media

Donate Janashakthi Media

Leave a Reply

Your email address will not be published. Required fields are marked *