ತೀವ್ರತೆ ಪಡೆದ ಮುಂಗಾರು

ಬೆಂಗಳೂರು: ರಾಜ್ಯದ‌ ಕೆಲವೆಡೆ ಅಲ್ಲಲ್ಲಿ ತುಂತುರು,ಇನ್ನೂ ಕೆಲವೆಡೆ ಸ್ವಲ್ಪ ಜೋರು, ಮತ್ತೊಂದೆಡೆ ಗುಡುಗುಸಹಿತ ಮಳೆಯಾಗುತ್ತಿದ್ದು, ಮುಂಗಾರು ತೀವ್ರತೆ ಪಡೆದುಕೊಂಡಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಮೂಲಕ ನೈಋತ್ಯ ಮಾನ್ಸೂನ್ ಕೇರಳಕ್ಕೆ ಪ್ರವೇಶಿಸಿದ್ದು, ದೇಶದಲ್ಲಿ ಮುಂಗಾರು ಆರಂಭಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ

ಇನ್ನುಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮೇ.22ರವರೆಗೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಸಮುದ್ರದಲ್ಲಿ ಹೆಚ್ಚಿನ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ, ಕರ್ನಾಟಕದ ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಚಂಡಮಾರುತದ ಪರಿಣಾಮ ಆರಂಭಿಕ 2-3 ದಿನಗಳ ಕಾಲ ನೈಋತ್ಯ ಮಾರುತಗಳ ಚಲನೆ ಕೊಂಚ ನಿಧಾನಗತಿಯಲ್ಲಿರಲಿದ್ದು, ಕ್ರಮೇಣ ತೀವ್ರತೆಯನ್ನು ಕಂಡುಕೊಳ್ಳಲಿದೆ ಎಂದು ಇಲಾಖೆ ತಿಳಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯ ಹಲವು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಮಳೆಯಾಗಲಿದೆ.

ಇದನ್ನೂ ನೋಡಿ: ಪ್ರಭುದ್ದಳ ಸಾವಿಗೆ ನ್ಯಾಯ ಸಿಗಬೇಕು – ಸಂಘಟನೆಗಳ ಆಕ್ರೋಶJanashakthi Media

Donate Janashakthi Media

Leave a Reply

Your email address will not be published. Required fields are marked *