ಉಡುಪಿ: ಇನ್ಸ್ಟಾಗ್ರಾಂ ಲಿಂಕ್ ಒತ್ತಿ ಹೂಡಿಕೆ ಮಾಡಿ 12,46,000 ರೂ. ಹಣ ಕಳೆದುಕೊಂಡ ಯುವತಿ

ಉಡುಪಿ: ಇನ್ಸ್ಟಾಗ್ರಾಂ ನಲ್ಲಿ ವರ್ಕ್ ಪ್ರಮ್ ಹೋಮ್ ಎಂದು ಬಂದಿದ್ದ ಲಿಂಕ್ ಒತ್ತಿ  ಯುವತಿಯೊಬ್ಬಳು 12.46 ಲಕ್ಷ ರೂ. ಹಣ ಕಳೆದುಕೊಂಡ ಘಟನೆ ನಡೆದಿದೆ.

ಶಿವಳ್ಳಿ ಗ್ರಾಮದ ಸಪ್ನ (28) ಇವರ ಇನ್‌ಸ್ಟಾಗ್ರಾಂ ಲಿಂಕ್ ಬಳಸಿ, ಹಣ ಕಳೆದುಕೊಂಡ ಯುವತಿ. ಇನ್ಸ್ಟಾಗ್ರಾಂ ಖಾತೆಗೆ ವರ್ಕ್ ಪ್ರಮ್ ಹೋಮ್ ಎಂದು ಲಿಂಕ್ ಬಂದಿದ್ದು, ಅದನ್ನು ಅವರು ಓಪನ್ ಮಾಡಿದಾಗ ಅದರ ಪ್ಲಾಟ್‌ ಫಾರ್ಮ್ನಲ್ಲಿ ಆರಂಭದಲ್ಲಿ 200 ರೂ. ಹೋಡಿಕೆ ಮಾಡಲು ಹೇಳಿದ್ದರು.

ಇದನ್ನೂ ಓದಿ : ಎಲ್‌ಐಸಿ ಪಾಲಿಸಿ ಕಮಿಷನ್ ಕೊಡಿಸುವುದಾಗಿ ನಂಬಿಸಿ 1.61 ಕೋಟಿ ರೂ. ವಂಚಿನೆ

ಅದಕ್ಕೆ 50ರೂ. ಕಮಿಷನ್ ದೊರಕಿದೆ. ಇದನ್ನು ನಂಬಿದ ಯುವತಿ ಹೆಚ್ಚಿನ ಕಮಿಷನ್ ಬರುವುದಾಗಿ ನಂಬಿ ಡಿ.9ರಿಂದ ಡಿ.28ರ ನಡುವಿನ ಅವಧಿಯಲ್ಲಿ ಅಪರಿಚಿತರು ತಿಳಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಫೋಪ್ ಪೇ, ಪೇಟಿಎಂ ಹಾಗೂ ಕ್ಯಾಶ್ ಡೆಪಾಸಿಟ್ ಮೂಲಕ ಒಟ್ಟು 12,46,000 ರೂ. ಹಣವನ್ನು ಹೂಡಿಕೆ ಮಾಡಿದ್ದಾರೆ.

ನಂತರದಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆ ಬರದೆ, ಹಣ ವಾಪಸ್ ಸಿಗದೆ ಮೋಸ ಹೋಗಿದ್ದಾರೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳನ್ನು ನಿಜವೋ ಇಲ್ಲವೋ ಎಂದು ಪರಿಶೀಲಿಸಿ. ತಿಳಿಯದೆ ನಂಬುವ ಮೊದಲು ಒಮ್ಮೆ ಯೋಚಿಸಿ.

ಇದನ್ನೂ ನೋಡಿ : ಸೈಬರ್‌ ಕಳ್ಳರ ಬಗ್ಗೆ ಎಚ್ಚರವಿರಲಿ Janashakthi Media #Cybercrime #Cyberfraud #CyberPolice

Donate Janashakthi Media

Leave a Reply

Your email address will not be published. Required fields are marked *