ಇಂದು ಕೇಂದ್ರ ಬಜೆಟ್ ಮಂಡನೆ

 

ಕೊವೀಡ್ ಕಾರಣದಿಂದಾಗಿ ಮುದ್ರಿತಗೊಳ್ಳದೆ ಮಂಡನೆಯಾಗುತ್ತಿರುವ ಬಜೆಟ್ 

ನವದೆಹಲಿ ಫೆ 01 : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2021ರ ಬಜೆಟ್ ಮಂಡಿಸಲಿದ್ದಾರೆ. ಕರೋನದಿಂದ ಆಗಿರುವ ಆರ್ಥಿಕ ಹಿನ್ನಡೆಯಿಂದ ದೇಶದ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತೂಗಿಸುವುದಕ್ಕೆ ಕೇಂದ್ರ ಸರ್ಕಾರ ಏನೆಲ್ಲ ಮಾಡಲಿದೆ ಎನ್ನುವುದಕ್ಕೆ ಇಂದು ಉತ್ತರ ಸಿಗಲಿದೆ.

ಈ ವರ್ಷ 2021-22ರ ಕೇಂದ್ರ ಬಜೆಟ್ ಮೊದಲ ಬಾರಿಗೆ ಕೊವೀಡ್ ಕಾರಣದಿಂದಾಗಿ ಕಾಗದರಹಿತ ಮಾದರಿಯಲ್ಲಿ ಸಿಗಲಿದೆ. ಸಂಸತ್ ಸದಸ್ಯರಿಗೆ ಡಿಜಿಟಲ್ ಪ್ರತಿಯಲ್ಲಿ ಸಿಗಲಿದೆ.

ಕೊರೊನಾ ದಿಂದ ಉಂಟಾದ ಸಂಕಷ್ಟ, ಆರ್ಥಿಕತೆ ಕುಸಿತ, ನಿರುದ್ಯೋಗ, ಬಡತನ, ಹೆಣ್ಣುಮಕ್ಕಳ ಸುರಕ್ಷತೆಯ ವೈಫಲ್ಯದಂತಹ ಹತ್ತಾರು ಸಮಸ್ಯೆಗಳು ಭಾರತವನ್ನು ಕಾಡುತ್ತಿವೆ. ಈ ಹಿನ್ನಲೆಯಲ್ಲಿ ಈ ಬಾರಿ ಬಜೆಟ್ ನಿಂದ ಸಾಕಷ್ಟು ನಿರೀಕ್ಷೆಗಳಿವೆ ಕೂಡ. ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್ ನಲ್ಲಿ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತದೆ.

ಕಳೆದ ಬಾರಿ ಮಧ್ಯಂತರ ಬಜೆಟ್ ಮಂಡಿಸಿದಾಗ ಆತ್ಮನಿರ್ಭರ್ ಹೆಸರಲ್ಲಿ ಬಿ.ಎಸ್.ಎನ್.ಎಲ್. ವಿಮಾ, ರೈಲ್ವೆ, ವಿಮಾನದಂತಹ ಮಹತ್ವದ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡಲಾಗಿತ್ತು. ಕೊರೊನಾ ನಿಯಮದಲ್ಲಿ ಬಡವರಿಗೊಂದು, ಶ್ರೀಮಂತರಿಗೊಂದು ಎಂಬ ನೀತಿ ಅನುಸರಿಸಲಾಗಿತ್ತು, ಹಾಗಾಗಿ ಈ ಬಾರಿಯ ಬಜೆಟ್ ಕೂಡಾ ಉಳ್ಳವರ ಪರ ವಿರುತ್ತದೆ. ಬಡ ಜನರ ಪರ ಇರಲು ಸಾಧ್ಯವಿಲ್ಲ ಎಂಬ ಚರ್ಚೆಗಳು ಕೂಡಾ ಕೇಳಿ ಬರುತ್ತಿವೆ.

Donate Janashakthi Media

Leave a Reply

Your email address will not be published. Required fields are marked *