RSS ಕುರಿತು ಪರೋಕ್ಷ ಹೇಳಿಕೆ : ರಾಹುಲ್‌ ಗಾಂಧಿ ವಿರುದ್ಧ ಮತ್ತೊಂದು ಮಾನನಷ್ಟ ಪ್ರಕರಣ ದಾಖಲು

ಹೊಸದಿಲ್ಲಿ: ಜನವರಿಯಲ್ಲಿ ನಡೆದ ಭಾರತ್‌ ಜೋಡೋ ಯಾತ್ರೆಯ ವೇಳೆ ಆರೆಸ್ಸೆಸ್‌ (RSS) ಅನ್ನು ಪರೋಕ್ಷವಾಗಿ ಉಲ್ಲೇಖಿಸಿ ಅವರು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು  ವಿರುದ್ಧ ಮತ್ತೊಮದು ಮಾನನಷ್ಟ ಪ್ರಕರಣ ದಾಖಲಾಗಿದೆ.

ಜನವರಿ 9 ರಂದು ಹರ್ಯಾಣದ ಅಂಬಾಲದಲ್ಲಿ ನಡೆದ ಸಭೆಯೊಂದರಲ್ಲಿ ರಾಹುಲ್‌ ಅವರು ಆರೆಸ್ಸೆಸ್‌ ಸದಸ್ಯರನ್ನು ಪರೋಕ್ಷವಾಗಿ ’21ನೇ ಶತಮಾನದ ಕೌರವರು’ ಎಂದು ಹೇಳಿದ್ದರು. ಈ ಕುರಿತು ಆರೆಸ್ಸೆಸ್‌ ಕಾರ್ಯಕರ್ತ ಕಮಲ್‌ ಭಡೌರಿಯಾ ಎಂಬವರು ಉತ್ತರಾಖಂಡದ ಹರಿದ್ವಾರ ನ್ಯಾಯಾಲಯದಲ್ಲಿ ತಮ್ಮ ವಕೀಲರು ಮೂಲಕ ಪ್ರಕರಣ ದಾಖಲಿಸಿದ್ದಾರೆ.

“ಕೌರವರು ಯಾರು? ನಾನು ನಿಮಗೆ ಮೊದಲು 21ನೇ ಶತಮಾನದ ಕೌರವರ ಬಗ್ಗೆ ಹೇಳುತ್ತೇನೆ, ಅವರು ಖಾಕಿ ಹಾಫ್‌ ಪ್ಯಾಂಟ್‌ ಧರಿಸುತ್ತಾರೆ, ಕೈಯಲ್ಲಿ ಲಾಠಿ ಹಿಡಿಯುತ್ತಾರೆ ಮತ್ತು ಶಾಖಾಗಳನ್ನು ನಡೆಸುತ್ತಾರೆ: ಭಾರತದ 2-3 ಬಿಲಿಯಾಧಿಪತಿಗಳು ಕೌರವರ ಜೊತೆ ನಿಂತಿದ್ದಾರೆ,” ಎಂದು ಆರೆಸ್ಸೆಸ್‌ ಅನ್ನು ಪರೋಕ್ಷವಾಗಿ ಉಲ್ಲೇಖಿಸಿ ರಾಹುಲ್‌ ಹೇಳಿದ್ದರು. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ :  ಬಿಜೆಪಿ-ಆರ್‌ಎಸ್‌ಎಸ್‌ ಅನ್ನು ಸೈದ್ಧಾಂತಿಕವಾಗಿ ಎದುರಿಸಬೇಕಿದೆ: ರಾಹುಲ್‌ ಗಾಂಧಿ

ಸದ್ಯ ಈ ಪ್ರಕರಣದ ವಿಚಾರಣೆಯು ಎಪ್ರಿಲ್‌ 12 ಕ್ಕೆ ನಿಗದಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *