ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ‘ಇಂದಿರಾ ಆಹಾರ ಕಿಟ್’ ಎಂಬ ಹೊಸ ಯೋಜನೆ ಘೋಷಿಸಿದೆ. ಈ ಯೋಜನೆಯಡಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಿಂಗಳಿಗೆ 5 ಕೆಜಿ ಅಕ್ಕಿಯ ಜೊತೆಗೆ ತೊಗರಿ ಬೇಳೆ, ಉಪ್ಪು, ಸಕ್ಕರೆ ಮತ್ತು ಅಡುಗೆ ಎಣ್ಣೆ ಸೇರಿರುವ ಆಹಾರ ಕಿಟ್ ವಿತರಿಸಲಾಗುತ್ತದೆ. ಅನ್ನಭಾಗ್ಯ ಯೋಜನೆಯ ಪ್ರಾರಂಭದಲ್ಲಿ, ಕುಟುಂಬಕ್ಕೆ ತಲಾ 10 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಅಕ್ಕಿ ಸ್ಟಾಕ್ ಕೊರತೆಯಿಂದ ಪ್ರಾಥಮಿಕವಾಗಿ 5 ಕೆಜಿ ಅಕ್ಕಿ ಮಾತ್ರ ವಿತರಿಸಲಾಗುತ್ತಿತ್ತು, ಉಳಿದ 5 ಕೆಜಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿತ್ತು. ಅಕ್ಕಿ ಲಭ್ಯವಾದ ಬಳಿಕ ತಲಾ 10 ಕೆಜಿ ವಿತರಣೆ ಪುನಃ ಆರಂಭವಾಯಿತು. ಬೆಂಗಳೂರು
ಇದನ್ನೂ ಓದಿ : ಬಿಹಾರ ಚುನಾವಣೆ: ಮತದಾನ ಚಲಾಯಿಸಲಿರುವ 14 ಸಾವಿರ ಶತಾಯುಷಿಗಳು
ಆದರೆ ಅಕ್ಕಿಯ ದುರ್ಬಳಕೆ ಮತ್ತು ಸುಸೂತ್ರ ವಿತರಣೆಯ ಬಗ್ಗೆ ಆತಂಕಗಳು ವ್ಯಕ್ತವಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರವು ಇಂದಿರಾ ಆಹಾರ ಕಿಟ್ ಯೋಜನೆಯನ್ನು ರೂಪಿಸಿದೆ.
ಪ್ರತಿ ಕಿಟ್‌ನಲ್ಲಿ ಹೀಗಿರುತ್ತದೆ: 5 ಕೆಜಿ ಅಕ್ಕಿ, 1 ಕೆಜಿ ತೊಗರಿಬೇಳೆ, 1 ಕೆಜಿ ಹೆಸರು ಕಾಳು, 1 ಲೀಟರ್ ಅಡುಗೆ ಎಣ್ಣೆ, 1 ಕೆಜಿ ಉಪ್ಪು, 1 ಕೆಜಿ ಸಕ್ಕರೆ ಇರಲಿವೆ
ಈ ಯೋಜನೆಯ ವಾರ್ಷಿಕ ವೆಚ್ಚ ಸುಮಾರು 6,119.52 ಕೋಟಿ ರೂಪಾಯಿ ಎಂದು ರಾಜ್ಯ ಸರ್ಕಾರದ ಸಚಿವ ಸಂಪುಟವು ಅನುಮೋದಿಸಿದೆ. ಯೋಜನೆ ಎಲ್ಲಾ ಜಿಲ್ಲೆಗಳಲ್ಲಿ ಶೀಘ್ರವೇ ಜಾರಿಗೆ ಬರುವಂತೆ ತಯಾರಿ ಮಾಡಲಾಗಿದೆ.
ಅಕ್ಕಿಯ ದುರ್ಬಳಕೆಯನ್ನು ತಡೆಯುವುದು ಹಾಗೂ ಕುಟುಂಬಗಳಿಗೆ ಪೋಷಣಾತ್ಮಕ ಆಹಾರ ನೀಡುವುದು ಮತ್ತು ಯೋಜನೆಯ ವಿತರಣೆಯನ್ನು ಸುಸೂತ್ರವಾಗಿ ನಿರ್ವಹಿಸುವುದು. ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಯ ಅನುಮೋದನೆಯು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿತರಣೆ ಆರಂಭಿಸಲು ಸಿದ್ಧತೆ ನಡೆಯುತ್ತಿದೆ.
ಇದನ್ನೂ ನೋಡಿ : ನಮಗೆ 10 ಸಾವಿರ ಪಿಂಚಣಿ ನೀಡಿ – ವಿಕಲಚೇತನರ ಆಗ್ರಹ Janashakthi Media
