ಇಂದಿನಿಂದ ಮೂರು ದಿನಗಳ ಕಾಲ‌ ವೈಮಾನಿಕ ಪ್ರದರ್ಶನ

ಬೆಂಗಳೂರು ಫೆ 3: ಯಲಹಂಕದ ಭಾರತೀಯ ವಾಯುನೆಲೆಯಲ್ಲಿ ಫೆಬ್ರವರಿ 3 ರಿಂದ 5 ರವರೆಗೆ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ – 2021 ನಡೆಯಲಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಈ ಬಾರಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದಲ್ಲಿ ಹೈಬ್ರೀಡ್ ಮಾದರಿ ಅನುಸರಿಸಲಾಗಿದೆ. ವರ್ಚುವಲ್ ಮತ್ತು ಪ್ರತ್ಯಕ್ಷವಾಗಿ ಶೋ ನಡೆಯಲಿದೆ.

ಏರೋ ಇಂಡಿಯಾ 2021 ಆಪ್ ಡೌನ್ಲೋಡ್ ಮಾಡಿಕೊಂಡು ನೋಂದಣಿ ಮಾಡಿಸಿಕೊಂಡಲ್ಲಿ ಉಚಿತವಾಗಿ ಪ್ರದರ್ಶನ ನೋಡಬಹುದಾಗಿದೆ. ಭಾರತ ಸೇರಿದಂತೆ ಅನೇಕ ದೇಶಗಳ 63 ಏರ್ ಕ್ರಾಫ್ಟ್, ಕಾಪ್ಟರ್ ಪ್ರದರ್ಶನಗೊಳ್ಳಲಿವೆ. 42 ವಿಮಾನಗಳು ದಿನದಲ್ಲಿ ಎರಡು ಸಲ ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನೀಡಲಿವೆ. ರಫೆಲ್, ಸುಖೋಯ್, ಜಾಗ್ವಾರ್ ಸೇರಿದಂತೆ ಅನೇಕ ಫೈಟರ್ ಜೆಟ್ ಏರ್ ಕ್ರಾಫ್ಟ್ ಹೆಲಿಕಾಪ್ಟರ್ ಗಳಿಂದ ಪ್ರದರ್ಶನ ನಡೆಯಲಿದೆ.
ಇದೇ ಮೊದಲ ಬಾರಿಗೆ ಸೂರ್ಯಕಿರಣ್ ಮತ್ತು ಸಾರಂಗ್ ವೈಮಾನಿಕ ಪ್ರದರ್ಶನ ತಂಡಗಳು ಜಂಟಿಯಾಗಿ ಪ್ರದರ್ಶನ ನೀಡಲಿದ್ದು, 601 ಪ್ರದರ್ಶನ ಮಳಿಗೆಗಳು, 248 ವರ್ಚುವಲ್ ಮಳಿಗೆಗಳು, 523 ದೇಸಿ ಮಳಿಗೆಗಳು ಇರಲಿವೆ.

Donate Janashakthi Media

Leave a Reply

Your email address will not be published. Required fields are marked *