ಬೆಂಗಳೂರು: ಡಿಸೆಂಬರ್ 31, 2019ರಲ್ಲಿ ಚೀನಾ ದೇಶದ ವುಹಾನ್ ಪ್ರದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಸಾಂಕ್ರಾಮಿಕ ರೋಗದಿಂದ ಇಂದಿಗೂ ಸಹ ಇಡೀ ವಿಶ್ವವನ್ನೇ ತಲ್ಲಣಗೊಳಿಸುತ್ತಿದೆ. ಭಾರತದಲ್ಲಿ ಮೊಟ್ಟ ಮೊದಲ ಪ್ರಕರಣ 2020ರ ಜನವರಿ 30ರಂದು ಕೇರಳದಲ್ಲಿ ಪತ್ತೆಯಾಯಿತು.
ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಮೊಹಮ್ಮದ್ ಹುಸೇನ್ ಸಿದ್ಧಿಕಿ ಅವರು ನಿಧನರಾಗಿ ಇಂದಿಗೆ ಒಂದು ವರ್ಷವಾಗಿದೆ. 76 ವರ್ಷ ವಯಸ್ಸಾಗಿದ್ದ ಸಿದ್ಧಿಕಿ ಅವರು ಸೌದಿ ಅರೇಬಿಯಾ ಪ್ರವಾಸವನ್ನು ಮುಗಿಸಿ ಭಾರತಕ್ಕೆ ವಾಪಸ್ಸಾಗಿದ್ದ ಅವರು 2020ರ ಮಾರ್ಚ್ 05ರಂದು ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಗಂಟಲು ದ್ರವ ಸಂಗ್ರಹಿಸಿ ಕೊರೊನಾ ಸೋಂಕು ಮಾದರಿ ವರದಿ ಕುರಿತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ವೈದ್ಯರು ರವಾನಿಸಿದರು.
ಸಿದ್ಧಿಕಿ ಅವರ ಆರೋಗ್ಯ ಮತ್ತಷ್ಟು ಗಂಭೀರಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಾರ್ಚ್ 10, 2020ರಂದು ಹೈದ್ರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಅಂದು ನಿಧನರಾದರು.
ಈ ಪ್ರಕರಣದಿಂದಾಗಿ ಭಾರತದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರ ಮೊಟ್ಟ ಮೊದಲ ಪ್ರಕರಣವಾಗಿದೆ.
ಸಿದ್ಧಿಕಿ ಸಂಪರ್ಕದಲ್ಲಿದ್ದ ಕುಟುಂಬ ಸೇರಿದಂತೆ ಸುಮಾರು 71 ಜನರನ್ನು ಆಗ ನಿಗಾವಹಿಸಿಲಾಗಿತ್ತು. ಅವರು ವಾಸಿಸುವ ಇಡೀ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿತ್ತು.
ಸಿದ್ಧಿಕಿ ಅವರ ನಿಧನದ ಒಂದು ವರ್ಷದ ಸಂದರ್ಭದಲ್ಲೇ ಸಿದ್ಧಿಕಿ ಅವರಿಗೆ ಕೊರೊನಾ ದೃಢಪಟ್ಟಿದೆ ಎಂಬ ವರದಿಯು ಕುಟುಂಬದವರಿಗೆ ಇನ್ನೂ ಸೇರಿಲ್ಲ. ಎಂಬ ವಿವರಗಳೂ ಸಹ ಬಹಿರಂಗಗೊಂಡಿವೆ. ಸಿದ್ಧಿಕಿ ಅವರ ಮಗ ಖಾಜಿ ಹಾಮೀದ್ ಫೈಸಲ್ ಸಿದ್ಧಿಕಿ ʻʻಹಲವು ತಿಂಗಳು ಕಾಲ ಇವರ ಕುಟುಂಬದವರಿಗೆ ಯಾರು ಸಹಾಯಕ್ಕೆ ಬರಲಿಲ್ಲ. ಸಾಕಷ್ಟು ನೋವನ್ನು ಅನುಭವಿಸಬೇಕಾಗಿ ಬಂದಿತು ಹಾಗೂ ಅಂಗಡಿಯ ಸಾಮಾನುಗಳನ್ನು ಕೊಳ್ಳಲು ಸಾಧ್ಯವಾಗುತ್ತಿರಲ್ಲʼʼ ಎಂದು ನೋವನ್ನು ತೋಡಿಕೊಂಡರು.
ನಂತರ ಲಾಕ್‌ಡೌನ್ ಪರಿಣಾಮ ಮತ್ತು ವಿವಿಧ ಪ್ರದೇಶಗಳಲ್ಲಿ ಹೇರಿದ ಸೀಲ್‌ಡೌನ್ ಮತ್ತು ಸಂಚಾರ ನಿರ್ಭಂಧಗಳಿಂದಾಗಿ ಇವರ ಕುಟುಂಬಕ್ಕೆ ಇಂದಿಗೂ ವರದಿ ಕೈಗೆ ಬಂದಿಲ್ಲ ಎಂಬ ಮಾಹಿತಿ ದಾಖಲಾಗಿವೆ.
ವಿಶ್ವದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಪ್ರಕರಣ ಬೆಳಕಿಗೆ ಬಂದು ಇಂದಿಗೆ 435 ದಿನಗಳಾಗಿದೆ.
ಕೋವಿಡ್-19 ಪ್ರಕರಣಗಳಲ್ಲಿ ಅಮೇರಿಕಾ ಮೊದಲ ಸ್ಥಾನದಲ್ಲಿದೆ. ಭಾರತ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿ.
ವಿಶ್ವದ ಕೋವಿಡ್ ವಿವರಗಳನ್ನು ಗಮನಿಸಿದಾಗ (https://www.worldometers.info/coronavirus/) ವೆಬ್ ಪ್ರಕಾರ
(ಮಾರ್ಚ್ 10, 2021ರ ಮಧ್ಯಾಹ್ನ 03.20ರ ಹೊತ್ತಿಗೆ)
ಕೊರೊನಾ ಪ್ರಕರಣ ವಿಶ್ವದಲ್ಲಿ
- ಒಟ್ಟು ಪ್ರಕರಣ: 11,82,09,329
- ನಿಧನ : 26,23,409 (ಶೇ.03)
- ಗುಣಮುಖ : 9,38,97,579 (ಶೇ.97)
- ಸಕ್ರಿಯ ಪ್ರಕರಣ : 2,16,84,927
ಕೊರೊನಾ ಪ್ರಕರಣ ಭಾರತದಲ್ಲಿ
- ಒಟ್ಟು ಪ್ರಕರಣ: 1,12,62,707
- ನಿಧನ : 1,58,079
- ಗುಣಮುಖ : 1,09,20,046
- ಸಕ್ರಿಯ ಪ್ರಕರಣ : 1,84,582
ಕೊರೊನಾ ಪ್ರಕರಣ ಕರ್ನಾಟಕದಲ್ಲಿ (09.03.2021ರ ರಾತ್ರಿಹೊತ್ತಿಗೆ)
- ಒಟ್ಟು ಪ್ರಕರಣ: 9,56,041
- ನಿಧನ : 12,373
- ಗುಣಮುಖ : 9,36,616
- ಸಕ್ರಿಯ ಪ್ರಕರಣ : 7,033
ವಿನೋದ ಶ್ರೀರಾಮಪುರ