ಅಮೆರಿಕಗೆ ನುಸುಳುವ ಸಂದರ್ಭದಲ್ಲಿ ಪಟ್ಟ ಕರಾಳ ಅನುಭವ ಬಿಚ್ಚಿಟ್ಟ ಭಾರತೀಯರು

ವದೆಹಲಿ: ನಿನ್ನೆ ಗುರುವಾರದಂದು, 104 ಭಾರತೀಯ ವಲಸಿಗರನ್ನು ಅಮೆರಿಕದಿಂದ ಹೊತ್ತ ವಿಮಾನ ಅಮೃತಸರಕ್ಕೆ ಬಂದಿಳಿದಿದೆ. ಅವರಲ್ಲಿ ಹೆಚ್ಚಿನವರು ಉದ್ಯೋಗ ವಂಚನೆಗೆ ಒಳಗಾಗಿ ಅಕ್ರಮವಾಗಿ ಅಮೆರಿಕ ತೆರಳಿರುವವರು ಎಂಬುದು ತಿಳಿದುಬಂದಿದೆ. ಹಲವು ದೇಶಗಳನ್ನು ಸುತ್ತಿ, ಅಮೆರಿಕವನ್ನು ನುಸುಳುವ ಸಂದರ್ಭದಲ್ಲಿ ತಾವು ಪಟ್ಟ ಕರಾಳ ಅನುಭವವನ್ನು ಅವರು ವಿವರಿಸಿದ್ದಾರೆ.

ಈ ಕುರಿತು ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ತಾಹ್ಲಿ ಗ್ರಾಮದ ಹರ್ವಿಂದರ್ ಸಿಂಗ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನನಗೆ ಉದ್ಯೋಗ ವೀಸಾ ಕೊಡಿಸುವುದಾಗಿ ನಂಬಿಸಿ ಏಜೆಂಟ್‌ ಒಬ್ಬರು 42 ಲಕ್ಷ ರೂ. ವಂಚಿಸಿದರು. ಆದರೆ ಅವರು ವೀಸಾ ಸಿಗಲ್ಲ ಎಂದು ಕೋನೇ ಕ್ಷಣದಲ್ಲಿ ನಮಗೆ ಹೇಳಿದರು.

ಅವರು ನಮ್ಮನ್ನು ದೆಹಲಿಯಿಂದ ಕತಾರ್ ಮತ್ತು ನಂತರ ಬ್ರೆಜಿಲ್‌ಗೆ ವಿಮಾನದಲ್ಲಿ ಕಳುಹಿಸಿದರು. ಬ್ರೆಜಿಲ್‌ನ ಪೆರುವಿನಿಂದ ಅಮೆರಿಕಕ್ಕೆ ಫ್ಲೈಟ್‌ನಲ್ಲಿ ಕಳುಹಿಸಲಾಗುವುದು ಎಂದು ಏಜೆಂಟ್ ನಮಗೆ ಭರವಸೆ ನೀಡಿದರು. ಆದರೆ ಅವರು ನಮಗೆ ಆ ಪ್ರಯಾಣಕ್ಕೆ ಯಾವುದೇ ಟಿಕೆಟ್ ನೀಡಲಿಲ್ಲ. ಬದಲಿಗೆ ನಮ್ಮನ್ನು ಟ್ಯಾಕ್ಸಿಯಲ್ಲಿ ಕೊಲಂಬಿಯಾಗೆ ಕರೆದೊಯ್ದರು. ಎರಡು ದಿನ ಕಾದರೂ ಹಡಗು ಬರಲಿಲ್ಲ ಎಂದರು.

ಇದನ್ನೂ ಓದಿ: 2025ರ ವಿಶ್ವದ ಪ್ರಬಲ ರಾಷ್ಟ್ರಗಳ ಟಾಪ್ 10 ಪಟ್ಟಿಯಲ್ಲಿ ಭಾರತಕ್ಕಿಲ್ಲ ಸ್ಥಾನ

ನಂತರ ನಮಗೆ ಪರ್ವತದ ಹಾದಿಯಲ್ಲಿ ಕಿಲೋಮೀಟರ್‌ಗಟ್ಟಲೆ ನಡೆಯಲು ಒತ್ತಾಯಿಸಿದರು. ಪನಾಮ ಕಾಡಿನಲ್ಲಿ ನಡೆಯುತ್ತಿದ್ದಾಗ, ನಮ್ಮ ಜೊತೆಗಿದ್ದ ಪ್ರಯಾಣಿಕರೊಬ್ಬರು ಸಾವನ್ನಪ್ಪಿದರು. ಅವರ ಮೃತದೇಹವನ್ನು ಅಲ್ಲಿಯೇ ಬಿಟ್ಟು, ನಂತರ ನಮ್ಮನ್ನು ಚಿಕ್ಕ ದೋಣಿಯಲ್ಲಿ ಮೆಕ್ಸಿಕೋ ಗಡಿಯ ಕಡೆಗೆ ಕಳುಹಿಸಿದರು.

ಇದು ನಾಲ್ಕು ಗಂಟೆಗಳ ಸುದೀರ್ಘ ಸಮುದ್ರ ಪ್ರಯಾಣವಾಗಿತ್ತು. ಈ ವೇಳೆ ದೋಣಿ ಮಗುಚಿ ಬಿದ್ದಿದ್ದು, ನಮ್ಮೊಂದಿಗೆ ಪ್ರಯಾಣಿಸುತ್ತಿದ್ದ ಮತ್ತೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು. ನಾವು ಸ್ವಲ್ಪವೇ ಆಹಾರದೊಂದಿಗೆ ಬದುಕುಳಿದೆವು ಎಂದು ಹರ್ವಿಂದರ್ ಸಿಂಗ್ ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.

ದಾರಾಪುರ ಗ್ರಾಮದ ಸುಖಪಾಲ್ ಸಿಂಗ್ ಎಂಬವರು ಕೂಡಾ ಇದೇ ರೀತಿಯ ಸಂಕಷ್ಟವನ್ನು ಎದುರಿಸಿದ್ದನ್ನು ವಿವರಿಸಿದ್ದಾರೆ. ನಾವು ದೋಣಿಯಲ್ಲಿ 15 ಗಂಟೆಗಳ ಕಾಲ ಸಮುದ್ರದಲ್ಲಿ ಪ್ರಯಾಣಿಸಿದೆವು. ನಂತರ ನಾವು ಪರ್ವತಗಳಿಂದ ಸುತ್ತುವರಿದ ಕಣಿವೆಗಳಲ್ಲಿ 40-45 ಕಿ.ಮೀ ನಡೆದಿದ್ದೇವೆ.

ದಾರಿಯಲ್ಲಿ ಯಾರಾದರೂ ಗಾಯಗೊಂಡರೆ, ಅವರನ್ನು ಅಲ್ಲಿಯೇ ಸಾಯಲು ಬಿಡದೆ ಬೇರೆ ದಾರಿಯೇ ಇರಲಿಲ್ಲ. ಹೀಗೆ ಮಾರ್ಗದುದ್ದಕ್ಕೂ ನಾವು ಅನೇಕ ಮೃತ ದೇಹಗಳನ್ನು ನೋಡಿದ್ದೇವೆ. ನಂತರ ನಾವು ಅಕ್ರಮ ಮಾರ್ಗಗಳ ಮೂಲಕ ಯುಎಸ್ ಗಡಿಯನ್ನು ದಾಟಲು ಪ್ರಯತ್ನಿಸಿದಾಗ ನಮ್ಮನ್ನು ಕತ್ತಲೆಯ ಸೆಲ್‌ನಲ್ಲಿ ಇರಿಸಲಾಗಿತ್ತು. ನಾವು ಸೂರ್ಯನ ಕಿರಣಗಳನ್ನು ಕೂಡಾ ನೋಡಲು ಸಾಧ್ಯವಾಗುತ್ತಿರಲಿಲ್ಲ. ನಮ್ಮಂತೆಯೇ ಸಾವಿರಾರು ಕುಟುಂಬಗಳು ಇದನ್ನು ಎದುರಿಸಿವೆ. ದಯವಿಟ್ಟು ಯಾರು ಕೂಡಾ ಅಕ್ರಮವಾಗಿ ವಿದೇಶಕ್ಕೆ ಹೋಗಲು ಪ್ರಯತ್ನಿಸಬೇಡಿ ಎಂದು ಬೇಡಿಕೊಳ್ಳುತ್ತೇನೆ ಎಂದು ಸುಖಪಾಲ್ ಸಿಂಗ್ ಹೇಳಿದ್ದಾರೆ.

ಇದನ್ನೂ ನೋಡಿ: ಕೇಂದ್ರ ಬಜೆಟ್‌ 2025 : ಬಡವರಿಗೆ ಏನೂ ಇಲ್ಲ! ಶ್ರೀಮಂತರಿಗಾಗಿ ಮಂಡಿಸಿದ ಬಜೆಟ್‌ Janashakthi Media

Donate Janashakthi Media

Leave a Reply

Your email address will not be published. Required fields are marked *