ನವದೆಹಲಿ: ಶನಿವಾರ ನಡೆದ ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಭಾರತದ ಶೂಟರ್ ಮನು ಭಾಕರ್ ಅದ್ಭುತ ಪ್ರದರ್ಶನ ನೀಡಿ ಒಲಂಪಿಕ್ಸ್ ಫೈನಲ್ಸ್‌ಗೆ ಪ್ರವೇಶಿಸಿದ್ದಾರೆ. 45 ಅಥ್ಲೀಟ್ಗಳ ವಿಭಾಗದಲ್ಲಿ ಮನು 580-27 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಒಲಂಪಿಕ್ಸ್
ಮೂರು ವರ್ಷಗಳ ಹಿಂದೆ ಪಿಸ್ತೂಲ್ ದೋಷದಿಂದಾಗಿ ಫೈನಲ್‌ಗೆ ಪ್ರವೇಶಿಸಲು ವಿಫಲರಾಗಿದ್ದ ಮನು, ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರ ನಡೆದ ಅರ್ಹತಾ ಸುತ್ತಿನಲ್ಲಿ 580 ಅಂಕ ಪಡೆದ ಮನು, ಮೂರನೇಯವರಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಆ ಮೂಲಕ ಪದಕದ ನಿರೀಕ್ಷೆ ಮೂಡಿಸಿದ್ದಾರೆ.
ಇದನ್ನು ಓದಿ : 2024 ರ ಲೋಕಸಭಾ ಚುನಾವಣೆಯಲ್ಲಿ ಮತ ಕುಶಲತೆ; ಮಹಾರಾಷ್ಟ್ರದ 11 ಸ್ಥಾನಗಳಲ್ಲಿ ಬಿಜೆಪಿ-ಎನ್‌ಡಿಎಗೆ ಲಾಭ: ವರದಿ
ಹಂಗೇರಿಯ ವೆರೊನಿಕಾ ಮೇಜರು 582 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಫೈನಲ್‌ಗೆ ಲಗ್ಗೆ ಇಟ್ಟರು. ಭಾರತೀಯ ಕಾಲಮಾನ ಭಾನುವಾರ ಸಂಜೆ 3.30ಕ್ಕೆ ಫೈನಲ್ ನಡೆಯಲಿದೆ. ಈಗ ನೀಡಿರುವುದಕ್ಕೆ ಸಮಾನವಾದ ಪ್ರದರ್ಶನ ನೀಡುವಲ್ಲಿ ಸಾಧ್ಯವಾದರೆ ಮನು ಅವರಿಗೆ ಪದಕ ಗೆಲ್ಲಲು ಸಾಧ್ಯವಾಗಲಿದೆ.
ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ರಿದಮ್ ಸಾಂಗ್ವಾನ್, ಅಂತಿಮ ಸುತ್ತಿಗೆ ಪ್ರವೇಶಿಸುವಲ್ಲಿ ವಿಫಲರಾದರು. 573 ಅಂಕಗಳೊಂದಿಗೆ 15ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಇದನ್ನು ನೋಡಿ : ಕೇಂದ್ರ ಬಜೆಟ್ 2024-25 : ಬಡ ವಿದ್ಯಾರ್ಥಿಗಳ ಶಿಕ್ಷಣ ಕಸಿಯುವ ಬಜೆಟ್Janashakthi Media