ನವದೆಹಲಿ | ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಗೆ ಕ್ಯೂಎಸ್‌ ರ‍್ಯಾಂಕ್ ನಲ್ಲಿ ಸ್ಥಾನ

ನವದೆಹಲಿ: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸೇರಿ  ಹಲವು ಸಂಸ್ಥೆಗಳು  ಲಂಡನ್‌ ಮೂಲದ ಕ್ಯೂಎಸ್‌ ಮಂಗಳವಾರ ಬಿಡುಗಡೆ ಮಾಡಿರುವ ಏಷ್ಯಾದ 100 ಅಗ್ರ ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ,  ಸ್ಥಾನ ಪಡೆದಿವೆ.  ನವದೆಹಲಿ

ಇದನ್ನೂ ಓದಿ : ಬಿಸಿಎಮ್ ಇಲಾಖೆಯ 62 ನೂತನ ಹಾಸ್ಟೆಲ್ ಮಂಜೂರು: ಎಸ್ಎಫ್ಐ ಸಂಘಟನೆಯ ಹೋರಾಟಕ್ಕೆ ಸಂದ ಜಯ

ಕ್ಯೂಎಸ್‌ ವರ್ಲ್ಡ್ ಯುನಿವರ್ಸಿಟಿ ಏಷ್ಯಾ ರ‍್ಯಾಂಕಿಂಗ್‌ನ 100 ಅಗ್ರ ಸಂಸ್ಥೆಗಳಲ್ಲಿ ಭಾರತದ ಏಳು ಸಂಸ್ಥೆಗಳು ಸ್ಥಾನ ಪಡೆದಿವೆ. 200 ಅಗ್ರ ಸಂಸ್ಥೆಗಳ ಪಟ್ಟಿಯಲ್ಲಿ 20, 500 ಅಗ್ರ ಸಂಸ್ಥೆಗಳ ಪಟ್ಟಿಯಲ್ಲಿ 66 ಉನ್ನತ ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿವೆ’ ಎಂದು ಕ್ಯೂಎಸ್ ಪ್ರಕಟಣೆಯಲ್ಲಿ ತಿಳಿಸಿವೆ.

ಐಐಟಿ–ದೆಹಲಿ, ಐಐಟಿ–ಮದ್ರಾಸ್‌, ಐಐಟಿ–ಬಾಂಬೆ, ಐಐಟಿ–ಕಾನ್ಪುರ ಹಾಗೂ ಐಐಟಿ–ಖರಗಪುರ 100 ಅಗ್ರ ಸಂಸ್ಥೆಗಳಲ್ಲಿ ಸ್ಥಾನ ಪಡೆದಿವೆ.

ಐಐಟಿ–ದೆಹಲಿ 59ನೇ ಸ್ಥಾನ ಪಡೆದಿದ್ದು, ಸತತ ಐದನೇ ವರ್ಷವೂ ಭಾರತದ ಅತ್ಯುತ್ತಮ ಇನ್ಸ್‌ಟಿಟ್ಯೂಟ್‌ ಎಂದು ಘೋಷಿಸಲಾಗಿದೆ.

ಇದನ್ನೂ ನೋಡಿ : ಜನಸ್ನೇಹಿ ಸಂತೆ – ರಾಗಿಕಣ ಸಂತೆ | ಪ್ರತಿ ಭಾನುವಾರ | ಉಚಿತ ಪ್ರವೇಶ

Donate Janashakthi Media

Leave a Reply

Your email address will not be published. Required fields are marked *