ಅದಾನಿ ರಿಯಲ್‌ ಎಸ್ಟೇಲ್‌ ಒಡೆತನಕ್ಕೆ ಧಾರಾವಿ ಸ್ಲಂ ಅಭಿವೃದ್ಧಿ; ರೂ.5 ಸಾವಿರ ಕೋಟಿ ಬಿಡ್‌ ಸಲ್ಲಿಕೆ

ಮುಂಬೈ: ಅಂದಾಜು ಸುಮಾರು 7 ರಿಂದ 10 ಲಕ್ಷದಷ್ಟು ಜನರು ವಾಸವಾಗಿರುವ ಏಷ್ಯಾದಲ್ಲಿಯೇ ಅತಿದೊಡ್ಡ ಸ್ಲಂ 557 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಪ್ರದೇಶವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈಗಾಗಲೇ ಹಲವು ಭಾಗಿ ಬಿಡ್‌ ಕರೆಯಲಾಗಿತ್ತು. ಇದೀಗ, ಉದ್ಯಮಿ ಗೌತಮ್ ಅದಾನಿ ಒಡೆತನದ ರಿಯಲ್‌ ಎಸ್ಟೇಟ್‌ ಘಟಕಕ್ಕೆ  ಧಾರಾವಿ ಕೊಳಗೇರಿ ಪುನರಾಭಿವೃದ್ಧಿ ಯೋಜನೆಗೆ ಗರಿಷ್ಠ ರೂ.5 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದಷ್ಟು ಬಿಡ್ ಸಲ್ಲಿಸಿದೆ ಎಂದು ತಿಳಿದು ಬಂದಿದೆ.

ʻಬಿಡ್‌ ಸಲ್ಲಿಕೆ ವಿಚಾರವಾಗಿ ಇನ್ನೂ ಎರಡು ಕಂಪನಿಗಳು ಭಾಗವಹಿಸಿದ್ದವು. ನಮನ್ ಗ್ರೂಪ್ 1,700 ಕೋಟಿ ರೂಪಾಯಿಗಳಿಗೆ ಮತ್ತು ಡಿಎಲ್​ಎಫ್​ ಸಮೂಹವು 2,025 ಕೋಟಿ ರೂಪಾಯಿಗಳಿಗೆ ಬಿಡ್ ಸಲ್ಲಿಸಿದ್ದವು. ಅದಾನಿ ಸಮೂಹವು ಈ ಯೋಜನೆಗೆ ರೂ 5069 ಕೋಟಿಗಳನ್ನು ಉಲ್ಲೇಖಿಸಿದೆ ಎಂದು ಧಾರವಿ ಪುನರಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ವಿಆರ್ ಶ್ರೀನಿವಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಏಷ್ಯಾದ ಅತಿದೊಡ್ಡ ಕೊಳೆಗೇರಿ ಎನ್ನಲಾಗುವ ಧಾರಾವಿ ಪ್ರದೇಶವು ಭಾರತದ ಆರ್ಥಿಕ ರಾಜಧಾನಿ ಮುಂಬೈನ ಮಧ್ಯಭಾಗದಲ್ಲಿರುವ ಇಕ್ಕಟ್ಟಾದ ಕಟ್ಟಡಗಳಲ್ಲಿ ಸಾವಿರಾರು ಬಡ ಕುಟುಂಬಗಳು ವಾಸವಾಗಿರುವ ಜನನಿಬಿಡ ಪ್ರದೇಶವಾಗಿದೆ.

1980ರ ದಶಕದಲ್ಲಿ ಧಾರಾವಿ ಪ್ರದೇಶದಲ್ಲಿ ವಾಸಿಸುವವರಿಗೆ ಸರಿಯಾದ ವಸತಿ ಒದಗಿಸುವ ಮೂಲಕ ವಸತಿ ಸಮುಚ್ಚಯಗಳನ್ನು ಅಭಿವೃದ್ಧಿಪಡಿಸಬೇಕೆಂಬ ಮಾರ್ಗವಾಗಿ ಪುನರಾಭಿವೃದ್ಧಿ ಯೋಜನೆಗೆ ಮಾರ್ಗಸೂಚಿ ಸೂಚಿಸಲಾಗಿತ್ತು.

ಧಾರಾವಿ ಸ್ಲಂ ಪ್ರದೇಶವನ್ನು ಪುನರಾಭಿವೃದ್ಧಿಗೆ 2004, 2009, 2011 ಮತ್ತು 2016ರಲ್ಲಿ ಹಲವಾರು ಬಾರಿ ಬಿಡ್‌ ಗಳನ್ನು ಕರೆಯಲಾಗಿತ್ತು. ಆದರೆ ಆ ಸಮಯದಲ್ಲಿ ಯಾವುದೇ ದೊಡ್ಡದೊಡ್ಡ ಕೈಗಾರಿಕಾ ಸಮೂಹಗಳು ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲ. 2018ರಲ್ಲಿ, ದುಬೈ ಮೂಲದ ಸೆಕಿಲಿಂಕ್ ಕಂಪನಿಯು ಅತಿ ಹೆಚ್ಚು ಬಿಡ್ ಸಲ್ಲಿಸುವ ಮೂಲಕ ತಮ್ಮದಾಗಿಸಿಕೊಂಡರು. ಇದು, ಜಾಗತಿಕ ಮಟ್ಟದಲ್ಲಿ ಧಾರಾವಿ ಪುನರಾಭಿವೃದ್ಧಿ ಯೋಜನೆಗಾಗಿ ಮತ್ತೊಮ್ಮೆ ಟೆಂಡರ್‌ಗಳನ್ನು ಆಹ್ವಾನಿಸಲಾಯಿತು. ಆದಾಗ್ಯೂ, ಅಡ್ವೊಕೇಟ್ ಜನರಲ್ ಅವರ ಶಿಫಾರಸಿನಂತೆ ಅಂದಿನ ಸರ್ಕಾರವು ಅಕ್ಟೋಬರ್ 2020 ರಲ್ಲಿ ಬಿಡ್ ಅನ್ನು ರದ್ದುಗೊಳಿಸಿತು.

ವಸತಿ ಮತ್ತು ವಾಣಿಜ್ಯ ಬಳಕೆಯ ಭೂಮಿಯೊಂದಿಗೆ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಸ್ಲಂ ಅನ್ನು ಅನ್ನು ಟೌನ್‌ಶಿಪ್ ಆಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಎಂದು ವರದಿಯಾಗಿದೆ. ಧಾರಾವಿಯನ್ನು ಅದಾನಿ ಗ್ರೂಪ್‌ನ ರಿಯಲ್ ಎಸ್ಟೇಟ್ ಅಂಗವಾದ ಅದಾನಿ ರಿಯಾಲ್ಟಿ ಸಂಸ್ಥೆಯು ಪುನರಾಭಿವೃದ್ಧಿ ಮಾಡಲಿದೆ.

ಧಾರಾವಿಯ ಪುನರಾಭಿವೃದ್ಧಿಯು ಮುಂಬೈನಲ್ಲಿ ಅದಾನಿ ರಿಯಾಲ್ಟಿ ಸಂಸ್ಥೆ ಕೈಗೊಂಡಿರುವ ನಾಲ್ಕನೇ ಯೋಜನೆಯಾಗಿದೆ ಮತ್ತು ನಾಲ್ಕು ನಗರಗಳಲ್ಲಿ 24ನೇ ಯೋಜನೆಯಾಗಿದೆ ಎಂದು ಎಂದು ವರದಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *