ನವದೆಹಲಿ: ಐದು ಎಡ ಪಕ್ಷಗಳಾದ ಸಿಪಿಐ(ಎಂ), ಸಿಪಿಐ, ಸಿಪಿಐ (ಎಂಎಲ್) ಲಿಬರೇಶನ್, ಎಐಎಫ್‍ಬಿ ಮತ್ತು ಆರ್‌ಎಸ್‍ಪಿ ‘ಗಾಜಾ ಶಾಂತಿ ಯೋಜನೆ’ಯನ್ನು ಕಾರ್ಯಗತಗೊಳಿಸಲೆಂಬ ಆಶಯದ ತಥಾಕಥಿತ ‘ಶಾಂತಿ ಮಂಡಳಿ’ಯಲ್ಲಿ ಯುಎಸ್ ನೀಡಬಯಸುವ ಸ್ಥಾನವನ್ನು ಒಪ್ಪಿಕೊಳ್ಳಬಾರದು ಎಂದು ಭಾರತ ಸರ್ಕಾರವನ್ನು ಬಲವಾಗಿ ಆಗ್ರಹಿಸಿವೆ. ಗಾಜಾ
ಪ್ಯಾಲೆಸ್ಟೀನಿಯನ್ ಹಕ್ಕುಗಳನ್ನು ಗೌರವಿಸದ ಅಂತಹ ಮಂಡಳಿಯಲ್ಲಿ ಭಾರತದ ಭಾಗವಹಿಸುವಿಕೆಯು ಪ್ಯಾಲೆಸ್ಟೀನಿಯನ್ ಉದ್ದೇಶಕ್ಕೆ ಮಾಡುವ ಗಂಭೀರ ವಿಶ್ವಾಸಘಾತವಾಗುತ್ತದೆ ಎಂದು ಅವು ಜಂಟಿ ಹೇಳಿಕೆಯೊಂದರಲ್ಲಿ ಹೇಳಿವೆ.
ಇದನ್ನೂ ಓದಿ: ಪ್ರಚೋದನಕಾರಿ ಭಾಷಣ ಆರೋಪ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲು
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿರುವ ಈ ಮಂಡಳಿಯು ವಿಶ್ವಸಂಸ್ಥೆಯನ್ನು ಉದ್ದೇಶಪೂರ್ವಕವಾಗಿ ಬದಿಗೊತ್ತಿ, ಯುಎಸ್‍ನ ನಿಯಂತ್ರಣಕ್ಕೆ ಒಳಪಡುವ ಒಂದು ಹೊಸ ಅಂತರರಾಷ್ಟ್ರೀಯ ರಚನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ.
ಅಸ್ತಿತ್ವದಲ್ಲಿರುವ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಅತಿಕ್ರಮಿಸುವ ಯುಎಸ್ ಪ್ರಯತ್ನವನ್ನು ದೃಢವಾಗಿ ವಿರೋಧಿಸಬೇಕು. ಭಾರತ ಸರ್ಕಾರ ಇಂತಹ ಪ್ರಸ್ತಾಪಗಳಿಂದ ದೂರವಿರಬೇಕು ಮತ್ತು ಅಮೆರಿಕದ ಸಾಮ್ರಾಜ್ಯಶಾಹಿ ಮಹತ್ವಾಕಾಂಕ್ಷೆಗಳಿಂದ ಬೆದರಿಕೆಗೆ ಒಳಗಾಗಿರುವ ಪ್ಯಾಲೆಸ್ಟೈನ್ ಮತ್ತು ಜಾಗತಿಕ ದಕ್ಷಿಣದ ಇತರ ದೇಶಗಳ ರಕ್ಷಣೆಗೆ ದೃಢನಿರ್ಧಾರದಿಂದ ನಿಲ್ಲಬೇಕು ಎಂದು ಎಡಪಕ್ಷಗಳು ಆಗ್ರಹಿಸಿವೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂಎ ಬೇಬಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ, ಸಿಪಿಐ(ಎಂಎಲ್)-ಲಿಬರೇಷನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಎಐಎಫ್‌ಬಿ ಪ್ರಧಾನ ಕಾರ್ಯದರ್ಶಿ ಜಿ ದೇವರಾಜನ್ ಮತ್ತು ಆರ್‌ಎಸ್‌ಪಿ ಪ್ರಧಾನ ಕಾರ್ಯದರ್ಶಿ ಮನೋಜ್ ಭಟ್ಟಾಚಾರ್ಯ ಈ ಜಂಟಿ ಹೇಳಿಕೆಯನ್ನು ನೀಡಿದ್ದಾರೆ.
ಇದನ್ನೂ ನೋಡಿ: “ದುಡಿಯುವ ವರ್ಗದ ಆಕ್ರೋಶ: ಫೆಬ್ರವರಿ 12ಕ್ಕೆ ಸಾರ್ವತ್ರಿಕ ಮುಷ್ಕರ ಘೋಷಣೆ” Janashakthi Media
