ಆಸ್ಟ್ರೇಲಿಯಾ ಪಡೆಗೆ 265 ರನ್‌ಗಳ ಗುರಿ ನೀಡಿದ ಭಾರತ ತಂಡ

ಅಡಿಲೇಡ್‌: ಭಾರತ ಕ್ರಿಕೆಟ್ ತಂಡವು ಮಾಜಿ ನಾಯಕ ರೋಹಿತ್‌ ಶರ್ಮಾ ಮತ್ತು ಉಪನಾಯಕ ಶ್ರೇಯಸ್‌ ಅಯ್ಯರ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ಬಲದಿಂದ ಆಸ್ಟ್ರೇಲಿಯಾ ಪಡೆಗೆ 265 ರನ್‌ಗಳ ಗುರಿ ನೀಡಿದೆ. ಪಂದ್ಯ

ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಆತಿಥೇಯ ತಂಡದ ನಾಯಕ ಮಿಚೇಲ್‌ ಮಾರ್ಷ್‌, ಬೌಲಿಂಗ್‌ ಆಯ್ದುಕೊಂಡರು. ಅದರಂತೆ ಕ್ರೀಸ್‌ಗಿಳಿದ ಟೀಂ ಇಂಡಿಯಾಗೆ ನಿರೀಕ್ಷಿತ ಆರಂಭ ಸಿಗಲಿಲ್ಲ.

ನಾಯಕ ಶುಭಮನ್ ಗಿಲ್‌ (9) ಹಾಗೂ ವಿರಾಟ್‌ ಕೊಹ್ಲಿ (0) ಒಂದೇ ಓವರ್‌ನಲ್ಲಿ ಔಟಾಗುವುದೊಂದಿಗೆ ಆರಂಭಿಕ ಆಘಾತ ಎದುರಾಯಿತು.

ಇದನ್ನೂ ಓದಿ: ಸಂಡೂರು | ಶಿಕ್ಷಕರ ಕೋರತೆಯಿಂದ ಉಪಯೋಗಕ್ಕೆ ಬಾರದ ಕಂಪ್ಯೂಟರ್ ಗಳು

ಈ ಹೊತ್ತಿನಲ್ಲಿ ಜೊತೆಯಾದ ರೋಹಿತ್‌ ಮತ್ತು ಶ್ರೇಯಸ್‌, ಇನಿಂಗ್ಸ್‌ಗೆ ಬಲತುಂಬಿದರು. ಆರಂಭದಲ್ಲಿ ತಿಣುಕಾಡುತ್ತಿದ್ದ ರೋಹಿತ್‌ ನಿಧಾನವಾಗಿ ಆಟಕ್ಕೆ ಕುದುರಿಕೊಂಡರು. ಈ ಜೋಡಿ 3ನೇ ವಿಕೆಟ್ ಪಾಲುದಾರಿಕೆಯಲ್ಲಿ 118 ರನ್ ಕಲೆಹಾಕುವುದರೊಂದಿಗೆ ವಿಕೆಟ್‌ ಕುಸಿತಕ್ಕೆ ತಡೆಯೊಡ್ಡಿತು.

97 ಎಸೆತಗಳನ್ನು ಎದುರಿಸಿದ ರೋಹಿತ್, 7 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 73 ರನ್‌ ಗಳಿಸಿ ಔಟಾದರೆ, ಅಯ್ಯರ್‌ ಆಟ 61 ರನ್‌ಗೆ ಕೊನೆಯಾಯಿತು. ಮಧ್ಯಮ ಕ್ರಮಾಂಕದಲ್ಲಿ ಭರವಸೆ ಮೂಡಿಸಿದ ಅಕ್ಷರ್ ಪಟೇಲ್‌, 44 ರನ್‌ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ಹರ್ಷಿತ್‌ ರಾಣ (24) ಅವರೂ ಉಪಯುಕ್ತ ಆಟವಾಡಿದರು. ಹೀಗಾಗಿ, ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 264 ರನ್‌ ಕಲೆಹಾಕಲು ಸಾಧ್ಯವಾಯಿತು.

ಆಸಿಸ್‌ ಪರ ಸ್ಪಿನ್ನರ್‌ ಆ್ಯಡಂ ಜಂಪಾ ನಾಲ್ಕು ವಿಕೆಟ್ ಪಡೆದರೆ, ಷೇವಿಯರ್‌ ಬರ್ಟ್ಲೆಟ್‌ ಎರಡು ವಿಕೆಟ್‌ ಉರುಳಿಸಿದರು. ಮಿಚೇಲ್‌ ಸ್ಟಾರ್ಕ್‌ ಎರಡು ವಿಕೆಟ್‌ ಕಿತ್ತರು.

ಇದನ್ನೂ ನೋಡಿ: ಧರ್ಮಸ್ಥಳ ನಿಗೂಢಗಳು |ಭೂ ಮಾಫಿಯಾ ವಿರುದ್ಧ ಹೋರಾಟ ಬಲಗೊಳ್ಳಲಿದೆ Janashakthi Media

Donate Janashakthi Media

Leave a Reply

Your email address will not be published. Required fields are marked *