ರವಿವಾರವೂ ಕಡಿಮೆಯಾಗಿಲ್ಲ ಕೋವಿಡ್‌ ಪ್ರಕರಣ

ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳು ಅತಿಹೆಚ್ಚಾಗಿ ದಾಖಲಾಗುತ್ತಲೇ ಇವೆ. ನೆನ್ನೆ ಒಟ್ಟಾರೆಯಾಗಿ ಭಾರತದಲ್ಲಿ 2,73,810 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಅಲ್ಲದೆ, 1,619 ಮಂದಿ ಸಾವೀಗೀಡಾಗಿದ್ದಾರೆ.

ಪ್ರಮುಖ ಹತ್ತು ರಾಜ್ಯಗಳಲ್ಲಿ ದಿನದ ಹೊಸ ಪ್ರಕರಣಗಳು: ಮಹಾರಾಷ್ಟ್ರ-68,631, ಕೇರಳ-18,257 (ನಿಧನ), ಕರ್ನಾಟಕ-19,067, ತಮಿಳುನಾಡು-10.723, ಆಂಧ್ರಪ್ರದೇಶ-6,582, ದೆಹಲಿ-25,462, ಉತ್ತರ ಪ್ರದೇಶ-30,566, ಪಶ್ಷಿಮ ಬಂಗಾಳ-8,419, ಛತ್ತೀಸ್‌ಗಡ-12,345, ರಾಜಸ್ಥಾನ-10,262.

ಇದನ್ನು ಓದಿ: ಕರೋನಾ ವಾರಿಯರ್ಸ್ಗೆ ಹೊಸ ವಿಮೆ

ಇದುವರೆಗೆ ದೇಶದಲ್ಲಿ ಒಟ್ಟು 1,50,61,919 ಒಟ್ಟು ಪ್ರಕರಣಗಳು ದಾಖಲಾಗಿದೆ. ಒಟ್ಟಾರೆ ಕೋವಿಡ್‌ ಪ್ರಕರಣದಲ್ಲಿ 1,29,53,821 (ಶೇ.86ರಷ್ಟು) ಮಂದಿ ಗುಣಮುಖರಾಗಿದ್ದಾರೆ.  ಸದ್ಯ 19,29,329 (ಶೇ.12,81ರಷ್ಟು) ಪ್ರಕರಣಗಳಿಂದ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ. ಒಟ್ಟಾರೆ ಕೋವಿಡ್‌ ಪ್ರಕರಣಗಳಲ್ಲಿ 1,78,769 (ಶೇ.1.19ರಷ್ಟು) ಮಂದಿ ನಿಧನ ಹೊಂದಿದ್ದಾರೆ.

ಒಟ್ಟಾರೆಯಾಗಿ ಇದುವರೆಗೆ 12,38,52,566 ಜನರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದನ್ನು ಓದಿ: ಕೋವಿಡ್ನಿಂದ ಮೃತಪಟ್ಟವರ ಪ್ರತಿಯೊಬ್ಬರ ಸಾವಿಗೆ ಸರಕಾರ ಹೊಣೆ – ನಿರ್ದೇಶಕ ಗುರುಪ್ರಸಾದ್ ಆರೋಪ

ರಾಜ್ಯದಲ್ಲಿ ನೆನ್ನೆ ಒಂದೇ ದಿನ 19,067 ಪ್ರಕರಣಗಳು ದಾಖಲಾಗಿದೆ. 81 ಮಂದಿ ನಿಧನ ಹೊಂದಿದ್ದಾರೆ. ರಾಜ್ಯದಲ್ಲಿ ಒಟ್ಟಾರೆಯಾಗಿ 11,61,065 ಪ್ರಕರಣಗಳು ದಾಖಲಾಗಿವೆ ಮತ್ತು 10,14,152 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ನೆನ್ನೆ 4,603 ಮಂದಿ ಗುಣಮುಖರಾಗಿ ಬಿಡುಗಡೆಗಡೆ ಹೊಂದಿರುತ್ತಾರೆ. ಇದುವರೆಗೆ ಒಟ್ಟು 13,351 ಮಂದಿ ಕೋವಿಡ್‌ನಿಂದಾಗಿ ಸಾವಿಗೀಡಾಗಿದ್ದಾರೆ. ಸದ್ಯ 1,33,543 ಪ್ರಕರಣಗಳು ಸಕ್ರಿಯವಾಗಿವೆ ಮತ್ತು ಐಸಿಯುನಲ್ಲಿ 620 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು: ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ 12,793 ಕೋವಿಡ್‌-19ರ ಹೊಸ ಪ್ರಕರಣಗಳು ದೃಢಪಟ್ಟಿವೆ. ಒಟ್ಟಾರೆ 5,46,635 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು 5,123 ಮಂದಿ ನಿಧನಹೊಂದಿದ್ದಾರೆ. 4.43.614 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಈಗ 97,897 ಕೋವಿಡ್-19‌ ಪ್ರಕರಣಗಳು ಸಕ್ರಿಯವಾಗಿವೆ.

Donate Janashakthi Media

Leave a Reply

Your email address will not be published. Required fields are marked *