ನವದೆಹಲಿ :ನೆತನ್ಯಾಹು ಸರ್ಕಾರದಲ್ಲಿ ಪ್ಯಾಲೆಸ್ಟೀನಿಯನ್ ಜನರನ್ನು ಬಲವಂತವಾಗಿ ಸ್ಥಳಾಂತರಿಸಿ ಗಾಜಾ ಪಟ್ಟಿಯನ್ನು ಆಕ್ರಮಿಸಿಕೊಳ್ಳಬೇಕು ಎಂಬ ನಿಲುವಿನ ಪ್ರಮುಖ ಪ್ರತಿಪಾದಕ ಮತ್ತು ಆಕ್ರಮಿತ ಪಶ್ಚಿಮ ದಂಡೆಯನ್ನು ಇಸ್ರೇಲ್‌ಗೆ ಸೇರಿಸುವ ಪ್ರಸ್ತಾಪಗಳ ಪ್ರಮುಖ ಪ್ರೇರಕನಾದ ಹಾಗೂ ಯುರೋಪಿನ ಹಲವು ದೇಶಗಳು ಬಹಿಷ್ಕರಿಸಿರುವ ಇಸ್ರೇಲಿನ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಮೋದಿ ಸರಕಾರ ಅವರಿಗೆ ಆತಿಥ್ಯ ನೀಡಿದೆ ಮತ್ತು ಇಸ್ರೇಲ್ ಸರ್ಕಾರದೊಂದಿಗೆ ಒಂದು ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡಿಸಿದೆ. ಜನಾಂಗದ್ವೇಷಿ
ಸ್ಮೋಟ್ರಿಚ್ ತೀವ್ರ ಬಲಪಂಥೀಯ ಜನಾಂಗವಾದೀ ಪಕ್ಷಕ್ಕೆ ಸೇರಿದವರಾಗಿದ್ದು, ಪ್ಯಾಲೆಸ್ಟೀನಿಯನ್ನರ ಜನಾಂಗೀಯ ನಿರ್ನಾಮವನ್ನು ಒಳಗೊಂಡ ಅವರ ವಿಸ್ತರಣಾವಾದಿ ನೀತಿಗಳ ಪರಿಣಾಮವಾಗಿ, ಹಲವಾರು ದೇಶಗಳು ತಮ್ಮ ದೇಶದೊಳಕ್ಕೆ ಅವರ ಪ್ರವೇಶವನ್ನು ನಿಷೇಧಿಸಿವೆ ಮತ್ತು ಅವುಗಳಲ್ಲಿ ಕೆಲವು ಇತರ ನಿರ್ಬಂಧಗಳನ್ನು ಸಹ ವಿಧಿಸಿವೆ. ಈ ದೇಶಗಳಲ್ಲಿ ಯುನೈಟೆಡ್ ಕಿಂಗ್‌ಡಮ್, ಕೆನಡಾ, ಆಸ್ಟ್ರೇಲಿಯಾ, ನಾರ್ವೆ, ನೆದರ್‌ಲ್ಯಾಂಡ್ಸ್, ಸ್ಲೊವೇನಿಯಾ ಮತ್ತು ನ್ಯೂಜಿಲೆಂಡ್ ಸೇರಿವೆ.
ಇದನ್ನೂ ಓದಿ : ಬಿಹಾರ| ಎಸ್‍ಐಆರ್ ನಲ್ಲಿ 12 ನೇ ದಸ್ತಾವೇಜಾಗಿ ಆಧಾರ್ ಕಾರ್ಡ್ ಚುನಾವಣಾ ಆಯೋಗಕ್ಕೆ ಸುಪ್ರಿಂ ಕೋರ್ಟ್ ನಿರ್ದೇಶನ ಜನಾಂಗದ್ವೇಷಿ
ಪ್ರತಿದಿನ ಗಾಜಾದ ಜನರ ಹತ್ಯಾಕಾಂಡ ನಡೆಯುತ್ತಿರುವ ಸಮಯದಲ್ಲಿ ಮೋದಿ ಸರ್ಕಾರವು ಅಂತಹ ವ್ಯಕ್ತಿಗೆ ಆತಿಥ್ಯ ನೀಡಿ ಇಸ್ರೇಲ್ ಸರ್ಕಾರದೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿರುವುದು ಅದು ನೆತನ್ಯಾಹು ಸರ್ಕಾರದೊಂದಿಗೆ ಆಳವಾದ, ಬೇರೂರಿದ ಸಂಬಂಧಗಳನ್ನು ಬೆಸೆದಿರುವುದನ್ನು ಮತ್ತು ಗಾಜಾದಲ್ಲಿ ನಡೆಯುತ್ತಿರುವ ಭೀಕರ ನರಮೇಧದಲ್ಲಿ ಅದರ ಶಾಮೀಲನ್ನು ಎತ್ತಿ ತೋರಿಸುತ್ತದೆ ಎಂದು ಸಿಪಿಐ(ಎಂ) ಹೇಳಿದೆ.
ಇಸ್ರೇಲ್ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡು ಪ್ಯಾಲೆಸ್ಟೀನಿಯನ್ ಪ್ರಶ್ನೆಗೆ ನ್ಯಾಯಯುತ ಮತ್ತು ಶಾಂತಿಯುತ ಇತ್ಯರ್ಥಕ್ಕಾಗಿ ಕೆಲಸ ಮಾಡುವ ವರೆಗೆ, ಭಾರತ ಸರ್ಕಾರವು ಇಸ್ರೇಲ್‌ನೊಂದಿಗಿನ ಎಲ್ಲಾ ಮಿಲಿಟರಿ, ಭದ್ರತಾ ಮತ್ತು ಆರ್ಥಿಕ ಸಹಯೋಗವನ್ನು ರದ್ದುಗೊಳಿಸಬೇಕೆಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಒತ್ತಾಯಿಸಿದೆ.
ಇದನ್ನೂ ನೋಡಿ : ಧರ್ಮಸ್ಥಳ ನಿಗೂಢಗಳು | ಕಣ್ಣಿಗೆ ಕಂಡದ್ದನ್ನು ಹೇಳದಾದರು!! ಕೇರಳ, ತಮಿಳುನಾಡು ಎಂದೆಲ್ಲ ಲಿಂಕ್ ಕೊಟ್ಟರು!!!
