ಇವಿಎಂ ದುರ್ಬಳಕೆ ಆರೋಪ: ಸುಪ್ರೀಂ ಕೋರ್ಟ್‌ ಮೆ‌ಟ್ಟಿಲೇರಲು ‘ಇಂಡಿಯಾ’ ನಿರ್ಧಾರ

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ದುರ್ಬಳಕೆ ಕುರಿತ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಇಂಡಿಯಾ ಮೈತ್ರಿಕೂಟ, ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ನಿರ್ಧರಿಸಿದೆ.

ಪುಣೆಯ ಹಡಪ್ಸರ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಎನ್‌ಸಿಪಿ ಶರದ್ ಪವಾರ್ ಬಣದ ನಾಯಕ ಪ್ರಶಾಂತ್ ಜಗತಾಪ್, ಈ ಕುರಿತ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಎನ್​ಸಿಪಿ-ಎಸ್​ಪಿ ಮುಖ್ಯಸ್ಥ ಶರದ್​ ಪವಾರ್​, ಎಎಪಿ ಸಂಚಾಲಕ, ದೆಹಲಿ ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ ಮತ್ತು ಖ್ಯಾತ ವಕೀಲ ಮತ್ತು ಕಾಂಗ್ರೆಸ್​ ನಾಯಕ ಅಭಿಷೇಕ್​ ಮನು ಸಿಂಘ್ವಿ ಅವರು ನಡೆಸಿದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ. ಪವಾರ್​ ಅವರು ವಿಧಾನಸಭೆಯಲ್ಲಿ ಸೋತ ತಮ್ಮ ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದಾರೆ.

ಇದನ್ನೂ ಓದಿ: ವಚನ ಭ್ರಷ್ಟ ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ನೋಯ್ಡಾ ರೈತರ ಆಕ್ರೋಶ; ಬೆತ್ತಲಾದ ಡಬಲ್ ಇಂಜಿನ್ ಸರ್ಕಾರ

ಬಿಜೆಪಿ ನೇತೃತ್ವ ಮಹಾಯುತಿ ಮೈತ್ರಿಯು ಇವಿಎಂ ದುರ್ಬಳಕೆ ಮಾಡಿಕೊಂಡಿದೆ. ಇದರಿಂದಲೇ ಚುನಾವಣೆಯಲ್ಲಿ ಸೋಲು ಉಂಟಾಗಿದೆ ಎಂದು ಇಂಡಿಯಾ ಬ್ಲಾಕ್​ ಒಕ್ಕೂಟ ಆರೋಪಿಸಿದೆ.

ಕಳೆದ ತಿಂಗಳು ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ 288 ಕ್ಷೇತ್ರದಲ್ಲಿ 235 ಸ್ಥಾನಗಳನ್ನು ಗೆದ್ದಿತ್ತು. ಇನ್ನು ಪ್ರತಿಪಕ್ಷ ಮಹಾ ವಿಕಾಸ್​ ಅಘಾಡಿ ಮೈತ್ರಿ ಕೇವಲ 46 ಕ್ಷೇತ್ರದಲ್ಲಿ ಗೆಲುವು ಸಾಧಿಸಿತು.

ಈ ಸಭೆಯಲ್ಲಿ ಭಾಗಿಯಾಗಿದ್ದ ಕೇಜ್ರಿವಾಲ್​ ಮುಂಬರಲಿರುವ ದೆಹಲಿ ಚುನಾವಣೆಯಲ್ಲಿ ಮತದಾರರ ಪಟ್ಟಿ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ನೋಡಿ: ಪಿಚ್ಚರ್ ಪಯಣ :153, ಚಿತ್ರ : ಆಲ್ ವಿ ಇಮ್ಯಾಜಿನ್ ಆಸ್ ಲೈಟ್ , ALL WE IMAGINE AS LIGHT

Donate Janashakthi Media

Leave a Reply

Your email address will not be published. Required fields are marked *