2025ರ ವಿಶ್ವದ ಪ್ರಬಲ ರಾಷ್ಟ್ರಗಳ ಟಾಪ್ 10 ಪಟ್ಟಿಯಲ್ಲಿ ಭಾರತಕ್ಕಿಲ್ಲ ಸ್ಥಾನ

ನವದೆಹಲಿ: ಜಿಡಿಪಿ, ಜನಸಂಖ್ಯೆ, ನಾಯಕತ್ವ, ಆರ್ಥಿಕ ಪ್ರಭಾವ, ರಾಜಕೀಯ ಶಕ್ತಿ, ಅಂತಾರಾಷ್ಟ್ರೀಯ ಮೈತ್ರಿಗಳು ಮತ್ತು ಸೇನಾ ಬಲ ಸೇರಿದಂತೆ ಹಲವು ಪ್ರಮುಖ ಮಾನದಂಡಗಳನ್ನು ಆಧರಿಸಿ ಫೋರ್ಬ್ಸ್ ದೇಶವು 2025ರ ವಿಶ್ವದ ಪ್ರಬಲ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ ಅಮೆರಿಕ 30.34 ಟ್ರಿಲಿಯನ್ ಡಾಲರ್ ಜಿಡಿಪಿ ಮತ್ತು 34.5 ಕೋಟಿ ಜನಸಂಖ್ಯೆಯೊಂದಿಗೆ ಮೊದಲ ಸ್ಥಾನದಲ್ಲಿದ್ದು, ಇಸ್ರೇಲ್ 550.91 ಬಿಲಿಯನ್ ಡಾಲರ್ ಜಿಡಿಪಿ ಮತ್ತು 9.38 ಕೋಟಿ ಜನಸಂಖ್ಯೆಯೊಂದಿಗೆ ಹತ್ತನೇ ಸ್ಥಾನದಲ್ಲಿದೆ.

ಭಾರತವು ವಿಶ್ವದ ಐದನೇ ಅತೀ ದೊಡ್ಡ ಆರ್ಥಿಕತೆ ಹಾಗೂ ಎರಡನೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಾದರೂ, ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಮತ್ತು ಭಾರತ 3.55 ಟ್ರಿಲಿಯನ್ ಡಾಲರ್ ಜಿಡಿಪಿ ಮತ್ತು 1.43 ಶತಕೋಟಿ ಜನಸಂಖ್ಯೆಯೊಂದಿಗೆ 12ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 4 ವಿಕೆಟ್ ಭರ್ಜರಿ ಜಯ

ಈ ಪಟ್ಟಿಯನ್ನು ಫೋರ್ಬ್ಸ್, ಯುಎಸ್ ನ್ಯೂಸ್ & ವರ್ಲ್ಡ್ ರಿಪೋಟ್ ಹಾಗೂ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಶಾಲೆಯ ಪ್ರಾಧ್ಯಾಪಕ ಡೇವಿಡ್ ರೀಬ್‌ಸ್ಟೈನ್ ಅವರ ನೇತೃತ್ವದ ಬಿಎವಿ ಗ್ರೂಪ್ ಸಂಶೋಧಕರು ಪಟ್ಟಿಯನ್ನು ಮಾಡಿದ್ದಾರೆ.

2025 ರ ಪ್ರಬಲ ರಾಷ್ಟ್ರಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿ ಇಸ್ರೇಲ್ ಇದೆ ಹಾಗೂ 12ನೇ ಸ್ಥಾನದಲ್ಲಿ ಭಾರತ ಇದೆ.

1. ಅಮೆರಿಕ – 30.34 ಟ್ರಿಲಿಯನ್ ಡಾಲರ್ ಜಿಡಿಪಿ, 34.5 ಕೋಟಿ ಜನಸಂಖ್ಯೆ

2. ಚೀನಾ – 19.53 ಟ್ರಿಲಿಯನ್ ಡಾಲರ್ ಜಿಡಿಪಿ, 1.419 ಶತಕೋಟಿ ಜನಸಂಖ್ಯೆ

3. ರಷ್ಯಾ – 2.2 ಟ್ರಿಲಿಯನ್ ಡಾಲರ್ ಜಿಡಿಪಿ, 14.38 ಕೋಟಿ ಜನಸಂಖ್ಯೆ

4. ಯುನೈಟೆಡ್ ಕಿಂಗ್‌ಡಮ್ (ಬ್ರಿಟನ್) – 3.73 ಟ್ರಿಲಿಯನ್ ಡಾಲರ್ ಜಿಡಿಪಿ, 6.9 ಕೋಟಿ ಜನಸಂಖ್ಯೆ

5. ಜರ್ಮನಿ – 4.92 ಟ್ರಿಲಿಯನ್ ಡಾಲರ್ ಜಿಡಿಪಿ, 8.54 ಕೋಟಿ ಜನಸಂಖ್ಯೆ

6. ದಕ್ಷಿಣ ಕೊರಿಯಾ – 1.95 ಟ್ರಿಲಿಯನ್ ಡಾಲರ್ ಜಿಡಿಪಿ, 5.17 ಕೋಟಿ ಜನಸಂಖ್ಯೆ

7. ಫ್ರಾನ್ಸ್ – 3.28 ಟ್ರಿಲಿಯನ್ ಡಾಲರ್ ಜಿಡಿಪಿ, 6.65 ಕೋಟಿ ಜನಸಂಖ್ಯೆ

8. ಜಪಾನ್ – 4.39 ಟ್ರಿಲಿಯನ್ ಡಾಲರ್ ಜಿಡಿಪಿ, 12.37 ಕೋಟಿ ಜನಸಂಖ್ಯೆ

9. ಸೌದಿ ಅರೇಬಿಯಾ – 1.14 ಟ್ರಿಲಿಯನ್ ಡಾಲರ್ ಜಿಡಿಪಿ, 3.39 ಕೋಟಿ ಜನಸಂಖ್ಯೆ

10. ಇಸ್ರೇಲ್ – 550.91 ಬಿಲಿಯನ್ ಡಾಲರ್ ಜಿಡಿಪಿ, 9.38 ಲಕ್ಷ ಜನಸಂಖ್ಯೆ

11. ಭಾರತ – 3.55 ಟ್ರಿಲಿಯನ್ ಡಾಲರ್ ಜಿಡಿಪಿ, 1.43 ಶತಕೋಟಿ ಜನಸಂಖ್ಯೆ (12ನೇ ಸ್ಥಾನ)

ಇದನ್ನೂ ನೋಡಿ: ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರಿಂದ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *