ನವದಹಲಿ: ಭಾರತವು ತನ್ನ ಅಂತರ್ಜಲ ಕುಸಿತದ ತುದಿಯನ್ನು (ಟಿಪ್ಪಿಂಗ್ ಪಾಯಿಂಟ್) ತಲುಪುವ ಸಮೀಪದಲ್ಲಿದೆ ಎಂದು ವಿಶ್ವಸಂಸ್ಥೆಯ ವಿಶ್ವವಿದ್ಯಾನಿಲಯದ, ಇನ್ಸ್ಟಿಟ್ಯೂಟ್ ಫಾರ್ ಎನ್ವಿರಾನ್ಮೆಂಟ್ ಅಂಡ್ ಹ್ಯೂಮನ್ ಸೆಕ್ಯುರಿಟಿ (UNU-EHS) ಪ್ರಕಟಿಸಿದ ಹೊಸ ವರದಿಯು ಎಚ್ಚರಿಸಿದೆ. ‘ಇಂಟರ್‌ಕನೆಕ್ಟೆಡ್ ಡಿಸಾಸ್ಟರ್ ರಿಸ್ಕ್ ರಿಪೋರ್ಟ್ 2023’ ಎಂಬ ವರದಿಯು ಭಾರತದ ಅಂತರ್ಜಲ ಕುಸಿಯುತ್ತಿರುವ ಬಗ್ಗೆ ಗಂಭೀರವಾಗಿ ಎಚ್ಚರಿಸಿದೆ.
ವೇಗವರ್ಧಿತ ಅಳಿವುಗಳು, ಅಂತರ್ಜಲ ಕುಸಿತ, ಪರ್ವತ ಹಿಮನದಿ ಕರಗುವಿಕೆ, ಬಾಹ್ಯಾಕಾಶ ಅವಶೇಷಗಳು, ಅಸಹನೀಯ ಶಾಖ ಮತ್ತು ಯಾವುದೆ ರಕ್ಷಣೆಯಿಲ್ಲದ ಭವಿಷ್ಯ ಎಂಬ ಆರು ಪ್ರಮುಖ ವಿಷಯಗಳನ್ನು ವರದಿಯು ಅಂತರ್ಜಲ ಕುಸಿತದ ಟಿಪ್ಪಿಂಗ್ ಪಾಯಿಂಟ್ ಉಲ್ಲೇಖಿಸಿದೆ. ಈ ಆರು ಪರಿಸರದ ಟಿಪ್ಪಿಂಗ್ ಪಾಯಿಂಟ್‌ಗಳನ್ನು ಗಮನಿಸಿದಾಗ ವಿಶ್ವದ 31 ಪ್ರಮುಖ ಅಂತರ್ಜಲ ಸಂಗ್ರಾಹಕ(Aquifers)ದಲ್ಲಿ 27 ಮರುಪೂರಣಗೊಳ್ಳುವುದಕ್ಕಿಂತ ವೇಗವಾಗಿ ಕ್ಷೀಣಿಸುತ್ತಿವೆ ಎಂದು ವರದಿಯು ಹೇಳಿದೆ. ವಿಶ್ವಸಂಸ್ಥೆ
ಇದನ್ನೂ ಓದಿ: Nigama Mandali | ನಿಗಮ ಮಂಡಳಿ ಪಟ್ಟಿ ಫೈನಲ್; ಶಾಸಕರಿಗೇ ಮಣೆ, ಕಾರ್ಯಕರ್ತರಿಗಿಲ್ಲ ಅವಕಾಶ
ಪಂಜಾಬ್‌ನಲ್ಲಿನ 78% ಬಾವಿಗಳನ್ನು ಅತಿಯಾಗಿ ಬಳಸಲಾಗಿದೆ ಎಂದು ಎಂದು ವರದಿಯು ಉಲ್ಲೇಖಿಸಿದ್ದು, ಒಟ್ಟಾರೆಯಾಗಿ ವಾಯುವ್ಯ ಭಾರತದ ಪ್ರದೇಶವು 2025 ರ ವೇಳೆಗೆ ಕಡಿಮೆ ಅಂತರ್ಜಲ ಲಭ್ಯತೆಯನ್ನು ಅನುಭವಿಸುವ ನಿರೀಕ್ಷೆಯಿದೆ ಎಂದು ಎಚ್ಚರಿಸಿದೆ.
ಅಂತರ್ಜಲವು “ಅಕ್ವಿಫರ್ಸ್” ಎಂದು ಕರೆಯಲ್ಪಡುವ ಭೂಗತ ಜಲಾಶಯಗಳಲ್ಲಿ ಸಂಗ್ರಹವಾಗಿರುವ ಅತ್ಯಗತ್ಯ ಸಿಹಿನೀರಿನ ಸಂಪನ್ಮೂಲವಾಗಿದೆ. ವಿಶ್ವಸಂಸ್ಥೆ
“ಈ ಅಂತರ್ಜಲ ಸಂಗ್ರಾಹಕ (Aquifers) ಎರಡು ಶತಕೋಟಿ ಜನರಿಗೆ ಕುಡಿಯುವ ನೀರನ್ನು ಪೂರೈಸುತ್ತವೆ. ಇದರಲ್ಲಿ ಸುಮಾರು 70% ನಷ್ಟು ನೀರು ಕೃಷಿಗಾಗಿ ಬಳಸಲಾಗುತ್ತದೆ. ಆದಾಗ್ಯೂ, ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಪ್ರಮುಖ ಅಂತರ್ಜಲ ಸಂಗ್ರಾಹಕ(Aquifers) ನೈಸರ್ಗಿಕವಾಗಿ ಮರುಪೂರಣಗೊಳ್ಳುವುದಕ್ಕಿಂತ ವೇಗವಾಗಿ ಖಾಲಿಯಾಗುತ್ತಿವೆ. ಅಂತರ್ಜಲವು ಸಾವಿರಾರು ವರ್ಷಗಳಿಂದ ಸಂಗ್ರಹವಾಗುವುದರಿಂದ, ಇದು ಮೂಲಭೂತವಾಗಿ ನವೀಕರಿಸಲಾಗದ ಸಂಪನ್ಮೂಲವಾಗಿದೆ,” ಎಂದು ವರದಿ ಹೇಳಿದೆ.
ಇದನ್ನೂ ಓದಿ: ಪೆನ್ಡ್ರೈವ್ ಪ್ರದರ್ಶನ ವಿಚಾರ | ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ದೂರು ದಾಖಲು
ಅಸ್ತಿತ್ವದಲ್ಲಿರುವ ಬಾವಿಗಳು ಬತ್ತಿ ಹೋಗುತ್ತಿದೆ, ಇದರಿಂದ ರೈತರಿಗೆ ತಮ್ಮ ಬೆಳೆಗಳಿಗೆ ನೀರುಣಿಸಲು ಅಂತರ್ಜಲ ಲಭ್ಯವಾಗುವುದಿಲ್ಲ. “ಇದು ರೈತರಿಗೆ ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುವ ಅಪಾಯವನ್ನುಂಟುಮಾಡುತ್ತದೆ. ಅದರಿಂದಾಗಿ ಆಹಾರದ ಅಭದ್ರತೆ ಉಂಟಾಗಲಿದ್ದು, ಸಂಪೂರ್ಣ ಆಹಾರ ಉತ್ಪಾದನಾ ವ್ಯವಸ್ಥೆ ವೈಫಲ್ಯದ ಅಂಚಿಗೆ ಹೋಗುವ ಅಪಾಯವಿದೆ” ಎಂದು ವರದಿಯು ಹೇಳಿದೆ.
20 ನೇ ಶತಮಾನದ ಮಧ್ಯಭಾಗದಿಂದ ಪ್ರಪಂಚದಾದ್ಯಂತ ಅಂತರ್ಜಲ ಕುಸಿತದ ದರಗಳು ವೇಗಗೊಂಡಿವೆ ಎಂದು ವರದಿ ಹೇಳಿದೆ. “ಅಂತರ್ಜಲದ ನೀರನ್ನು ಅತಿಯಾಗಿ ಬಳಕೆ ಭೂಮಿಯ ಅಕ್ಷವು ವರ್ಷಕ್ಕೆ 4.36 ಸೆಂಟಿಮೀಟರ್‌ಗಳಷ್ಟು ಓರೆಯಾಗುವಂತೆ ಮಾಡಿದೆ. ಭಾರತ, ಈಶಾನ್ಯ ಚೀನಾ, ಪಶ್ಚಿಮ ಯುಎಸ್‌ಎ, ಮೆಕ್ಸಿಕೋ, ಇರಾನ್, ಸೌದಿ ಅರೇಬಿಯಾ ಮತ್ತು ಉತ್ತರ ಆಫ್ರಿಕಾದ ಕೆಲವು ಭಾಗಗಳು ಅಂತರ್ಜಲ ಕುಸಿತವು ಅತ್ಯಂತ ತೀವ್ರವಾಗಿರುವ ಪ್ರದೇಶಗಳನ್ನು ಒಳಗೊಂಡಿದೆ,” ಎಂದು ವರದಿ ಎಚ್ಚರಿಸಿದೆ.
“ಸೌದಿ ಅರೇಬಿಯಾದಂತಹ ಕೆಲವು ಪ್ರದೇಶಗಳು ಈಗಾಗಲೇ ಈ ಅಂತರ್ಜಲ ಅಪಾಯದ ಟಿಪ್ಪಿಂಗ್ ಪಾಯಿಂಟ್ ಅನ್ನು ಮೀರಿಸಿದೆ… ಭಾರತದಂತಹ ಇತರ ದೇಶಗಳು ಈ ಅಪಾಯದ ತುದಿಯನ್ನು ಸಮೀಪಿಸುವ ದಿನ ದೂರವಿಲ್ಲ,” ಎಂದು ವರದಿಯು ಹೇಳಿದೆ.
ವಿಡಿಯೊ ನೋಡಿ: ಪ್ಯಾಲಿಸ್ತೇನ್ ಪರ ಪ್ರತಿಭಟನೆ ಮಾಡುವುದು ಅಪರಾಧವೆ?