ಹಿಂದುತ್ವ ಶಕ್ತಿಗಳ ವಿರುದ್ದ ಹೋರಾಟದಿಂದ ಭಾರತ ಉಳಿಯಲು ಸಾಧ್ಯ: ಯು. ಬಸವರಾಜ

ಹಾಸನ: ಹಿಂದುತ್ವ ಮತ್ತು ಕಾರ್ಪೋರೆಟ್ ಶಕ್ತಿಗಳ ವಿರುದ್ದದ ಹೋರಾಟದಿಂದ ಮಾತ್ರ ಬಹುತ್ವ ಭಾರತ ಉಳಿಯಲು ಸಾಧ್ಯ. ಒಂದೆಡೆ ಜಾತ್ಯಾತೀತ ಪರಂಪರೆಯನ್ನು ಹೊಂದಿರುವ ಬಹು ಸಂಸ್ಕೃತಿಯ ದೇಶದ ಮೇಲೆ ಸನಾತನ ಹಿಂದುತ್ವದ ಏಕ ಸಂಸ್ಕೃತಿ ಹೇರಿಕೆಯ ಹುನ್ನಾರ ನಡೆಯುತ್ತಿದ್ದರೆ, ಮತ್ತೊಂದೆಡೆ ದೇಶದ ಸಂಪತ್ತನ್ನ ಲೂಟಿ‌ ಹೊಡೆದು, ದುಡಿಯುವ ಜನರ ಶ್ರಮವನ್ನು ಶೋಷಣೆ ಮಾಡಿ‌ ಕೆಲವೇ ಕೆಲವು ಕಾರ್ಪೋರೆಟ್ ಕಂಪನಿಗಳು ಅಗಾಧವಾದ ಸಂಪತ್ತನ್ನ ಒಡೆಯರಾಗುತ್ತಿದ್ದಾರೆ. ದೇಶವನ್ನು ಕಾಡುತ್ತಿರುವ ಈ ಎರಡೂ ಶಕ್ತಿಗಳ ವಿರುದ್ದ ಏಕಕಾಲದಲ್ಲಿ ಪ್ರಭಲ ಜನಚಳುವಳಿಯನ್ನು ಕಟ್ಟಿದರೆ ಮಾತ್ರ ಬಹುತ್ವ ಭಾರತವನ್ನು ಉಳಿಸಲು ಸಾಧ್ಯ ಎಂದು ಸಿಪಿಐಎಂ ಕೇಂದ್ರ ಸಮಿತಿ ಸದಸ್ಯರಾದ‌ ಯು. ಬಸವರಾಜ ಹೇಳಿದರು. ಹಿಂದುತ್ವ

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಹಾಸನ ಜಿಲ್ಲಾ ಸಮಿತಿ ನಗರದಲ್ಲಿ ಆಯೋಜಿಸಿದ್ದ ಸಿಪಿಐಎಂ 24 ನೇ ಮಹಾಧಿವೇಶನದ ಕರಡು ರಾಜಕೀಯ ನಿರ್ಣಯದ ಕನ್ನಡ ಅನುವಾದದ ಪುಸ್ತಕ ಬಿಡುಗಡೆ ಮತ್ತು ವರದಿ ಮಾಡಿ ಮಾತನಾಡುತ್ತಿದ್ದರು. ಕೇಂದ್ರದಲ್ಲಿ‌ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸತತವಾಗಿ ದೇಶದ ಸಂವಿಧಾನದ ಜಾತ್ಯಾತೀತ, ಸಮಾಜವಾದಿ, ಗಣತಂತ್ರದ ಮೂಲ ಆಶಯಗಳಿಗೆ ತಿಲಾಂಜಲಿ ಇಡುತ್ತಿದೆ. ಹಿಂದುತ್ವ

ಒಕ್ಕೂಟ ವ್ಯವಸ್ಥೆಯನ್ನು ಸಂಪೂರ್ಣ ಸರ್ವನಾಶ ಮಾಡಿ ಇಡೀ ಅಧಿಕಾರವನ್ನು ಕೇಂದ್ರೀಕರಿಸಿದೆ. ಇಷ್ಟು ಮಾತ್ರವಲ್ಲದೆ. ದೇಶದ ಬಹುಸಂಖ್ಯಾತ ದುಡಿಯುವ ಜನರ ಸಂಕಷ್ಟಗಳು ಹೆಚ್ಚಾಗುವಂತಹ ಆರ್ಥಿಕ ನೀತಿಗಳನ್ನು ಅನುಸರಿಸಿ ಆ ಮೂಲಕ ದೇಶದ ಸಂಪತ್ತನ್ನು ದೊಡ್ಡ ದೊಡ್ಡ ಕಾರ್ಪೋರೆಟ್ ಕಂಪನಿಗಳಿಗೆ ದಾರೆಯೆರೆಯುತ್ತಿದೆ.

ಇದನ್ನೂ ಓದಿ: ರಾಜ್ಯದ ಜನರಿಗೆ ಬಿಗ್ ಶಾಕ್, ಶೀಘ್ರವೇ ವಿದ್ಯುತ್ ದರ ಏರಿಕೆ-ಪ್ರಸ್ತಾವನೆ ಸಲ್ಲಿಕೆ

ಇಂತಹ ಅಪಾಯಕಾರಿ ಸನ್ನಿವೇಶದಲ್ಲಿ ಜನತೆ ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಮತ್ತು ದೇಶದ ಸಾರ್ವಭೌಮತ್ವ ಮತ್ತು ಜಾತ್ಯಾತೀತತೆಯನ್ನು ಉಳಿಸಲು ಸಂಘಟಿತ ಚಳುವಳಿಯನ್ನು‌ ನಡೆಸುವ ತುರ್ತು ಅನಿವಾರ್ಯತೆ ಇದೆ. ಈ ದೃಷ್ಟಿಯಲ್ಲಿ ಎಡ ಪರ್ಯಾಯ ರಾಜಕೀಯಕ್ಕಾಗಿ ಎಲ್ಲಾ ಜನಪರ ಚಳುವಳಿಗಳನ್ನು ಒಗ್ಗೂಡಿಸುವ ಪ್ರಯತ್ನವನ್ನು ಸಿಪಿಐಎಂ ಮಾಡುತ್ತಿದೆ.

ಈ ಎಲ್ಲ ವಿಷಯಗಳ ಕುರಿತು 2025 ಏಪ್ರಿಲ್ 2-6 ವರೆಗೆ ತಮಿಳುನಾಡಿನ ಮದುರೈನಲ್ಲಿ‌ ನಡೆಯಲಿರುವ ಸಿಪಿಐಎಂ ನ 24 ನೇ ಮಹಾಧಿವೇಶನದಲ್ಲಿ‌ ವಿವರವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.

ಆರಂಭದಲ್ಲಿ‌ ಮಾತನಾಡಿದ ಸಿಪಿಐಎಂ ಹಾಸನ‌ ಜಿಲ್ಲಾ ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್ ಕಮ್ಯೂನಿಸ್ಟ್ ಪಕ್ಷಗಳ ಬಗ್ಗೆ ಸಮಾಜದಲ್ಲಿ ವ್ಯವಸ್ಥಿತವಾದ ಅಪಪ್ರಚಾರಗಳನ್ನು ಆಳುವ ವರ್ಗಗಳು ನಿರಂತರವಾಗಿ ಮಾಡುತ್ತಾ ಬಂದಿವೆ. ಸಿಪಿಐಎಂ ನಂತಹ ಕಮ್ಯೂನಿಸ್ಟ್ ಪಕ್ಷದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯು ಉಳಿದ ಯಾವ ಬಂಡವಾಳಶಾಹಿ ಪಕ್ಷದಲ್ಲೂ ಇರಲು ಸಾಧ್ಯವಿಲ್ಲ.

ಪಕ್ಷದ ಮಹಾಧಿವೇಶದನ ಮೂರು ತಿಂಗಳ ಮುಂಚೆಯೇ ‘ಕರಡು ರಾಜಕೀಯ ನಿರ್ಣಯ’ವನ್ನು ಲಿಖಿತವಾಗಿ ಬಿಡುಗಡೆ ಮಾಡಿ ದೇಶಾಧ್ಯಂತ ಚರ್ಚಿಸಿ, ತಿದ್ದುಪಡಿ ಅಭಿಪ್ರಾಯಗಳನ್ನು‌ ಪಡೆದು ಮಹಾಧಿವೇಶನದಲ್ಲಿ‌ ಅಂಗೀಕರಿಸಲಾಗುವುದು. ಇದರ ಕುರಿತು ಪಕ್ಷದ ಸದಸ್ಯರುಗಳು ಮಾತ್ರವಲ್ಲದೆ ದೇಶದ ಎಲ್ಲಾ ಪ್ರಜೆಗಳು ಮುಕ್ತವಾಗಿ ತಿದ್ದುಪಡಿಗಳನ್ನು ಕಳುಹಿಸಬಹುದು. ಇಂತಹ ಒಂದು ಪ್ರಜಾಪ್ರಭುತ್ವೀಯ ವ್ಯವಸ್ಥೆ ಬೇರೆ ಯಾವ ಪಕ್ಷಗಳಲ್ಲೂ ಕಾಣಲು ಸಾಧ್ಯವಿಲ್ಲ‌ ಎಂದರು.

ಕಾರ್ಯಕ್ರಮದಲ್ಲಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಸ್.ವರಲಕ್ಷ್ಮಿ , ಜಿಲ್ಲಾ ಸಮಿತಿ ಸದಸ್ಯರಾದ ಎಚ್.ಎಸ್.ಮಂಜುನಾಥ್, ಸೌಮ್ಯ ಇದ್ದರು. ಜಿಲ್ಲಾ ಸಮಿತಿ ಸದಸ್ಯರಾದ ಧರ್ಮೇಶ್ ಅಧ್ಯಕ್ಷತೆ ವಹಿಸಿದ್ದರು, ಹಾಸನ ಸ್ಥಳೀಯ ಸಮಿತಿ‌ ಕಾರ್ಯದರ್ಶಿ ಎಂ.ಜಿ.ಪೃಥ್ವಿ ಸ್ವಾಗತಿಸಿದರು.

ಇದನ್ನೂ ನೋಡಿ: ಡಾ. ಬಂಜಗೆರೆ ಜಯಪ್ರಕಾಶ್‌ ಜೊತೆ ಸಂವಾದ Janashakthi Media

Donate Janashakthi Media

Leave a Reply

Your email address will not be published. Required fields are marked *