IMF ಮನೆಗೆ ಕಳಿಸಿದ ‘ಆರ್ಥಿಕ ಸಲಹೆಗಾರ’ನ ಹಗರಣ : ಯೂನಿಯನ್ ಬ್ಯಾಂಕ್ ನಿಂದ 7.5 ಕೋಟಿ ರೂ ಪುಸ್ತಕ ಖರೀದಿ !

ಭಾರತದ ನಾಮ ನಿರ್ದೇಶಿತ ನಿರ್ದೇಶಕರಾಗಿದ್ದ ಶ್ರೀ ಕೆ ವಿ ಸುಬ್ರಮಣಿಯನ್ ಅವರನ್ನು ಕೇಂದ್ರ ಸರಕಾರ ತೆಗೆದು ಹಾಕಿತ್ತು ಮತ್ತು ಅದರ ಕಾರಣ ಸರ್ಕಾರದ ಪ್ರಕಟಣೆಯಲ್ಲಿ ಇಲ್ಲ. ಕಳೆದ ಸುಮಾರು 80 ವರ್ಷಗಳ ಇತಿಹಾಸದಲ್ಲೇ ಇಂತಹದ್ದು ಮೊದಲ ಬಾರಿಗೆ ಆಗಿದೆ ಎಂದು ವಿಷಯ ಬಲ್ಲವರು ಹೇಳುತ್ತಾರೆ. ವಿವಿಧ ವರದಿ/ ಅನುಭವಗಳನ್ನು ಒಟ್ಟು ಸೇರಿಸಿ ನೋಡಿದರೆ ಒಂದು ಅಪ್ಯಾಯಮಾನವಲ್ಲದ ಕತೆ ರೂಪುಗೊಳ್ಳುತ್ತದೆ. ಅಯ್ಯೋ

ಹೈದರಾಬಾದಿನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ನ ಭೋದಕರಾಗಿದ್ದ ಶ್ರೀ ಕೆ ವಿ ಸುಬ್ರಮಣಿಯನ್ ಅವರು ಮುಖ್ಯ ಆರ್ಥಿಕ ಸಲಹೆಗಾರರಾಗಿ ಅರ್ಹತೆ ಇಲ್ಲದಿದ್ದರೂ, ಸಂದರ್ಶನದಲ್ಲಿ ಹಿಂದೆ ಇದ್ದರೂ ಮೋದಿ ಅವರ ಹೊಗಳು ಭಟ್ಟತನ ಮಾಡಿ ನೇಮಕಗೊಂಡರು. ಅರ್ಹತೆ ಇದ್ದ ಇನ್ನೊಬ್ಬ ಅಭ್ಯರ್ಥಿಯನ್ನು ಮೂಲೆಗೆ ತಳ್ಳಿದರು. ಹೊಗಳಿಕೆಯ ಮೂಲಕವೇ ಐ ಎಂ ಆಫ್ ನ ನಾಮ ನಿರ್ದೇಶಿತ ನಿರ್ದೇಶಕರಾಗಿಯೂ ನೇಮಕವಾದರು. “ನೂರರ ಹೊಸಿಲಲ್ಲಿ ಭಾರತ” (India @100) ಎಂಬ ಪುಸ್ತಕ ಬರೆದು ಅದರ ಮಾರಾಟದಲ್ಲಿ ಕೈಚಳಕ ಪ್ರಾರಂಭಿಸಿದರು. ಇದಕ್ಕಾಗಿ ಹಲವು ಸಾರಿ ಭಾರತಕ್ಕೆ ಐ ಎಂ ಎಫ್ ನ ಖರ್ಚಿನಲ್ಲಿ ಬಂದು ಹೋದರು.

ಐಎಂಎಫ್ ನ ಶಿಷ್ಟಾಚಾರಗಳನ್ನು ಬದಿಗೊತ್ತಿ ಅದಕ್ಕೆ ಮುಜುಗುರ ಆಗುವಂತೆ ಮಾಡಿದರು. ಇದರ ಪರಿಣಾಮವನ್ನು ನಾವು ಊಹಿಸಬೇಕು. ಐಎಂಎಫ್, ಭಾರತ ಸರ್ಕಾರವನ್ನು ಈತನನ್ನು ತೆಗೆಯಿರಿ ಎಂದು ಕೇಳಿರಬೇಕು. ಆದ್ದರಿಂದ ಸದ್ದಿಲ್ಲದೇ, ಕಾರಣ ನೀಡದೆ ಈತನನ್ನು ತೆಗೆಯಲಾಯಿತು. ಅಯ್ಯೋ

ಇದನ್ನೂ ನೋಡಿ: ರೈತರಿಗೆ ಮತ್ತೊಂದು ಸಿಹಿಸುದ್ದಿ: ಇ-ಪೌತಿ ಆಂದೋಲನ ಆರಂಭ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂಬ ಸರ್ಕಾರಿ ಸ್ವಾಮ್ಯದ ಬ್ಯಾಂಕು ಈತನ (ಮೇಲೆ ಕಾಣಿಸಿದ) ಪುಸ್ತಕದ ಎರಡು ಲಕ್ಷ ಪ್ರತಿಗಳನ್ನು ಕೊಳ್ಳಲು ತಯಾರಾಯಿತು. ಈ ವ್ಯವಹಾರದ ಒಟ್ಟು ಮೊತ್ತ 7.5 ಕೋಟಿ ರೂಪಾಯಿಗಳು!! ಒಟ್ಟು ಮೊತ್ತದ ಅರ್ಧದಷ್ಟನ್ನು ಆಗಲೇ ಬ್ಯಾಂಕು ಪಾವತಿ ಮಾಡಿ ಆಗಿದೆ. ಉಳಿದ ಅರ್ಧ ಭಾಗವನ್ನು ಆಯಾ ವಲಯ ಕಛೇರಿಗಳು ಪಾವತಿಸಬೇಕು ಎಂದು ನಿರ್ಧರಿಸಲಾಗಿತ್ತು. ಈಗ ಇಂತಹ ವಹಿವಾಟು ಹೊರಬಂದಿದೆ. ಈ ಒಪ್ಪಂದದ ಕರ್ತೃ ಜನರಲ್ ಮ್ಯಾನೇಜರ್ ಗಿರಿಜಾ ಮಿಶ್ರಾ ಅವರು ಅಮಾನತ್ತುಗೋಂಡಿದ್ದಾರೆ. ಬ್ಯಾಂಕು ಈ ವ್ಯವಹಾರದ ತನಿಖೆ ನಡೆಸುವ ಮಾತನ್ನಾಡಿದೆ. ಬಡ ಸಾಲಗಾರರಿಂದ
ಪ್ರತಿ ಪೈಸೆಯನ್ನೂ ವಸೂಲಿ ಮಾಡುವ, ಗ್ರಾಹಕರಿಗೆ ಹಿಗ್ಗಾ ಮುಗ್ಗಾ ಶುಲ್ಕ ವಿಧಿಸುವ, ಖಾತೆಯಲ್ಲಿ ಕನಿಷ್ಟ ಹಣ ಇರಲಿಲ್ಲವೆಂದು ದಂಡ ವಿಧಿಸುವ ಸರ್ಕಾರಿ ಬ್ಯಾಂಕು ಇಂತಹ ವಹಿವಾಟಿನಲ್ಲಿ ಹಣವನ್ನು ಪೋಲು ಮಾಡಬಹುದೇ? ಇದು ಜನರ ದುಡ್ಡಲ್ಲವೇ? ಇಂತಹ ಹಲವು ಪ್ರಶ್ನೆಗಳು ಏಳುತ್ತವೆ.

ಅದಕ್ಕಿಂತಲೂ ಮುಖ್ಯ ಮತ್ತು ಮೂಲಭೂತ ಪ್ರಶ್ನೆ ಬರೀ ಮೋದಿಯ ಹೋಗಳುಭಟ್ಟನೆಂಬ ಒಂದೇ ಕಾರಣಕ್ಕೆ ದೇಶದ ಮುಖ್ಯ ಆರ್ಥಿಕ ಸಲಹೆಗಾರನೆಂಬ ಹುದ್ದೆಗೆ ನೇಮಿಸಿ ನಂತರ ಅದೇ ಇಲ್ಲದ ಅರ್ಹತೆಯ ಮೇಲೆ ಐ ಎಂ ಎಫ್ ನ ನಿರ್ದೇಶಕನ ಸ್ಥಾನಕ್ಕೂ ನೇಮಕ ಮಾಡಿದರೆ ಆತ ದೇಶಕ್ಕೆ ಏನು ಒಳಿತು ಮಾಡಿಯಾನು?

ಇನ್ನೂ ಆಳದ ಪ್ರಶ್ನೆ ಇಂತಹ ಎಷ್ಟು ಹುಣ್ಣುಗಳು ಬರೀ ಹೊಗಳು ಭಟ್ಟತನ ಅಥವಾ ಭಟ್ಟಂಗಿತನ ಮಾಡಿ ಈ ದೇಶದ ಆಯಕಟ್ಟಿನ ಸ್ಥಾನಗಳಿಗೆ ನೇಮಕವಾಗಿರಬಹುದು? ಅಯ್ಯೋ ಭಾರತವೇ ಎನಿಸದಿರದೆ ?

ಇದನ್ನೂ ನೋಡಿ: ಪಿಚ್ಚರ್‌ ಪಯಣ 158|‌ ಹಲವು ಸಿನಿಮಾಗಳ ಪಕ್ಷಿನೋಟ |ಮ. ಶ್ರೀ. ಮುರಳಿಕೃಷ್ಣ Janashakthi Media

Donate Janashakthi Media

Leave a Reply

Your email address will not be published. Required fields are marked *