ಪಟ್ನಾ: ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ, ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಸನ್ನಿಹಿತವಾಗುತ್ತಿದ್ದಂತೆ ಭಾನುವಾರ ಸಭೆ ಸೇರಿದ್ದ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ನಾಯಕರು, ಸೀಟು ಹಂಚಿಕೆ ಸೂತ್ರವನ್ನು ಒಂದೆರಡು ದಿನಗಳಲ್ಲಿ ಬಹಿರಂಗಪಡಿಸುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ. ಪಟ್ನಾ
ಇದನ್ನೂ ಓದಿ : ಗ್ಯಾರಂಟಿ ಯೋಜನೆಗಳ ಯಶಸ್ವಿ ಬಿಜೆಪಿಗರನ್ನು ಆತಂಕಕ್ಕೆ ತಳ್ಳಿದೆ: ಸಿಎಂ ಸಿದ್ದರಾಮಯ್ಯ
ಬಹುಪಕ್ಷಗಳ ನಾಯಕರ ಸಭೆಯು, ಮುಂಬರುವ ಚುನಾವಣೆಗೆ ‘ಇಂಡಿಯಾ’ ಬಣದ ಸಹಕಾರ ಸಮಿತಿಯ ಮುಖ್ಯಸ್ಥರಾಗಿರುವ, ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರ ನಿವಾಸದಲ್ಲಿ ರಾತ್ರಿವರೆಗೂ ನಡೆದಿದೆ.
ಸಭೆ ನಂತರ ಮಾತನಾಡಿರುವ ‘ವಿಕಾಸಶೀಲ್ ಇನ್ಸಾನ್’ ಪಕ್ಷದ ಅಧ್ಯಕ್ಷ ಮುಕೇಶ್ ಸಾಹ್ನಿ, ‘ಎಲ್ಲ ವಿಚಾರಗಳನ್ನೂ ಅಂತಿಮಗೊಳಿಸಲಾಗಿದೆ. ಆದರೆ, ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ. ಅದಕ್ಕಾಗಿ ಕ್ಷಮಿಸಿ. ಮುಂದಿನ ಪತ್ರಿಕಾಗೋಷ್ಠಿಯಲ್ಲಿ ಎಲ್ಲವನ್ನೂ ಪ್ರಕಟಿಸುತ್ತೇವೆ’ ಎಂದು ತಿಳಿಸಿದ್ದಾರೆ.
ಆರ್‌ಜೆಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಲೋಕ್ ಮೆಹ್ತಾ ಅವರು ಸಭೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಎಚ್ಚರಿಕೆಯಿಂದ ಉತ್ತರಿಸಿದ್ದಾರೆ. 2020ರ ವಿಧಾನಸಭೆ ಚುನಾವಣೆಯಲ್ಲಿ ಸ್ವತಃ ಸೋಲು ಕಂಡಿದ್ದ ಸಾಹ್ನಿ, ಬಿಜೆಪಿ ನೇತೃತ್ವದ ಬಿಹಾರ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ, 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಎನ್‌ಡಿಎ ಜೊತೆಗಿನ ಮೈತ್ರಿ ಮುರಿದುಕೊಂಡು, ಕಾಂಗ್ರೆಸ್ ಒಳಗೊಂಡಂತೆ ಎಡಪಕ್ಷಗಳಿರುವ ‘ಇಂಡಿಯಾ’ ಬಣದೊಂದಿಗೆ ಕೈಜೋಡಿಸಿದ್ದಾರೆ.
ಇದನ್ನೂ ನೋಡಿ : ನಾಟಕ | “ಪ್ಲಾಸ್ಟಿಕ್ ಅಸುರ” Janashakthi Media
