ನವದೆಹಲಿ: ಭಾರತವು 122 ವರ್ಷಗಳ ಇತಿಹಾಸದಲ್ಲೆ ಎರಡನೇ ಅತಿ ಹೆಚ್ಚು ಸೆಕೆಯ ವರ್ಷವನ್ನು 2023ರಲ್ಲಿ ಅನುಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಸೋಮವಾರ ತಿಳಿಸಿದೆ. ಈ 122 ವರ್ಷಗಳ ಅವಧಿಯಲ್ಲಿ ದಾಖಲಾದ ಅತ್ಯಂತ ಹೆಚ್ಚಿನೆ ಸೆಕೆಯ ವರ್ಷ 2016 ಆಗಿತ್ತು ಎಂದು ಅದು ಹೇಳಿದೆ. ಕಳೆದ ವರ್ಷ ದೇಶಾದ್ಯಂತ ಸರಾಸರಿ ವಾರ್ಷಿಕ ಸರಾಸರಿ ಮೇಲ್ಮೈ ಗಾಳಿಯ ಉಷ್ಣತೆಯು 0.65 ಡಿಗ್ರಿ ಸೆಲ್ಸಿಯಸ್ (1981-2010 ಅವಧಿ) ಆಗಿದ್ದರೆ, 2016 ರಲ್ಲಿ 0.71 ಡಿಗ್ರಿ ಸೆಲ್ಸಿಯಸ್ ಆಗಿತ್ತು ಎಂದು IMD ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕವಾಗಿ 2023 ಹಿಂದಿನ ಎಲ್ಲಾ ತಾಪಮಾನ ದಾಖಲೆಗಳನ್ನು ಮುರಿದಿದೆ. 2023 ಎಲ್ ನಿನೊ ವರ್ಷವಾಗಿದ್ದು, ಇದು ಸಾಮಾನ್ಯ ತಾಪಮಾನ ಮತ್ತು ವಿಪರೀತ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನವಿರುತ್ತದೆ. ಫೆಬ್ರವರಿ, ಜುಲೈ, ಆಗಸ್ಟ್, ಸೆಪ್ಟೆಂಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳು ಋತುಗಳಿಗೆ ಸಂಬಂಧಿಸಿದಂತೆ ಗರಿಷ್ಠ ಅಥವಾ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು IMD ಹೇಳಿದೆ. ಇತಿಹಾಸ
ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ನಾಲ್ವರ ಗುಂಡಿಕ್ಕಿ ಹತ್ಯೆ, 5 ಜಿಲ್ಲೆಗಳಲ್ಲಿ ಕರ್ಫ್ಯೂ
ಉತ್ತರ ಮತ್ತು ವಾಯುವ್ಯ ಭಾರತದ ರಾಜ್ಯಗಳನ್ನು ಹೊರತುಪಡಿಸಿ ಮಳೆಗೆ ಸಂಬಂಧಿಸಿದಂತೆ, ಡಿಸೆಂಬರ್ ದೇಶದ ಅಸಾಧಾರಣವಾದ ಆರ್ದ್ರ ತಿಂಗಳಾಗಿದೆ. ದೇಶವು ಕಳೆದ ತಿಂಗಳು 25.5 ಮಿಮೀ ಮಳೆಯನ್ನು ಪಡೆದಿದೆ, ಇದು ಸಾಮಾನ್ಯಕ್ಕಿಂತ 60% ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಅಕ್ಟೋಬರ್‌ನಿಂದ ಡಿಸೆಂಬರ್ ವರೆಗೆ ಮಾನ್ಸೂನ್ ನಂತರದ ಅವಧಿಯಲ್ಲಿ, ದಕ್ಷಿಣ ಪರ್ಯಾಯದ್ವೀಪದ ಭಾರತವು 98.5ಮಿಮಿ ಮಳೆ ದಾಖಲಿಸಿದೆ. ಇದು 1901 ರಿಂದ ಹತ್ತನೇ ಅತ್ಯಧಿಕ ಮಳೆಯಾಗಿದೆ. ಇತಿಹಾಸ
“ಪೂರ್ವ, ಈಶಾನ್ಯ ಮತ್ತು ದಕ್ಷಿಣ ಪರ್ಯಾಯದ್ವೀಪದ ಭಾರತವು ಮುಖ್ಯವಾಗಿ ಮೈಚಾಂಗ್ ಚಂಡಮಾರುತದ ಕೊಡುಗೆಯಿಂದ ಉತ್ತಮ ಮಳೆಯನ್ನು ಪಡೆದಿದೆ” ಎಂದು IMD ಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ. ಕಳೆದ ಶತಮಾನದಲ್ಲಿ ದೇಶದ ಗರಿಷ್ಠ ತಾಪಮಾನವು 1.01 ಡಿಗ್ರಿ ಸೆಲ್ಸಿಯಸ್ ದರದಲ್ಲಿ ಏರಿಕೆಯಾಗಿದೆ ಎಂದು ಐಎಂಡಿ ಹೇಳಿದೆ. ಆದರೆ ಕನಿಷ್ಠ ತಾಪಮಾನವು 0.31 ಡಿಗ್ರಿ ಸೆಲ್ಸಿಯಸ್ ದರದಲ್ಲಿ ಜಿಗಿದಿದೆ.
ವಿಡಿಯೊ ನೋಡಿ: ಮೃಣಾಲ್ ಸೆನ್ 100 : ಒಕ ಊರಿ ಕಥಾ ದಲ್ಲಿ ಕಾಣುವ ತೆಲಂಗಾಣ ಊಳಿಗಮಾನ್ಯ ವ್ಯವಸ್ಥೆ Janashakthi Media