ಬೆಂಗಳೂರು: ನಗರದ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷ ಅಧಿಕಾರಿಗಳು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿಯ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ರಾಜ್ಯದ ಒಂಬತ್ತು ಸಾವಿರ ನರ್ಸ್‌ಗಳು ಧರಣಿ ಆರಂಭಿಸಿದ್ದು, ಇದರಿಂದ ರಾಜ್ಯಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಿದೆ.
ಇದನ್ನೂ ಓದಿ: ರಾಜ್ಯದ 9 ವಿಶ್ವವಿದ್ಯಾನಿಲಯ ಮುಚ್ಚುವುದು ಸುಲಭದ ಕೆಲಸವಲ್ಲ: ಅಶ್ವಥ್ ನಾರಾಯಣ್
15 ವರ್ಷ ಸೇವೆ ಸಲ್ಲಿಸಿದರೂ ಸಂಬಳ 14,000 ರೂ. ದಾಟಿಲ್ಲ. ಸೇವೆ ಕಾಯಂಗೊಳಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನಾನಿರತ ನರ್ಸ್‌ಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ನೋಡಿ: ಭೂಗಳ್ಳರ ಪಾಲಾದ ಬೆಂಗಳೂರಿನ ಹುಳಿಮಾವು ಕೆರೆ Janashakthi Media