ಒಳಮೀಸಲಾತಿ | ಆಗಸ್ಟ್‌ 15ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್

ಆಗಸ್ಟ್‌ 15ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್
ಬೆಂಗಳೂರು: ಕಳೆದ 30 ವರ್ಷಗಳ ಪರಿಶಿಷ್ಟ ಜಾತಿಗಳ ಸಾಂವಿಧಾನಿಕ ಹಕ್ಕುಗಳಿಗಾಗಿ ಆಗ್ರಹಿಸಿ ಅಂದು ಪ್ರೊ ಬಿ. ಕೃಷ್ಣಪ್ಪನವರು ಹೋರಾಟ ಆರಂಭಿಸಿದ್ದರು. ಅಂದಿನಿಂದ ಇಂದಿನವರೆಗೆ ಒಳಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ನಡೆಸಿದ ಎಲ್ಲಾ ಹೋರಾಟಗಾರರು ಇಂದಿನ ಸನ್ನಿವೇಶದಲ್ಲಿ 11 ಆಗಸ್ಟ್ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಆಹೋರಾತ್ರಿ ಸತ್ಯಾಗ್ರಹದಲ್ಲಿ ಪಾಲುದಾರರಾಗಿದ್ದಾರೆ.

ಬಹಳ ಮುಖ್ಯವಾಗಿ ಬಸವರಾಜ್ ಕೌತಾಳ್, ಎಸ್ ಮಾರೆಪ್ಪ, ಅಂಬಣ್ಣ ಅರೋಲಿಕರ್, ಜೆ. ಬಿ. ರಾಜು, ಕರಿಯಪ್ಪ ಗುಡಿಮನಿ, ಕೇಶವಮೂರ್ತಿ, ಶಿವರಾಯ ಅಕ್ಕರಕಿ, ಸಣ್ಣ ಮಾರೆಪ್ಪ, ಪಾವಗಡ ಶಿವರಾಮ್, ಹೇಮರಾಜ್ ಹಸ್ಕಿಹಾಳ, ವೆಂಕಟೇಶ್ ದೀಪಾಂಜಲಿನಗರ ಮುಂತಾದವರು. ಇದಕ್ಕೆ ನೆನ್ನೆಯ ಹೋರಾಟವೇ ಸಾಕ್ಷಿ.

ಭಾರತ ಬ್ರಿಟಿಷರ ಗುಲಾಮಗಿರಿಯಿಂದ ಬಿಡುಗಡೆಗೊಂಡು ಸ್ವತಂತ್ರಗೊಂಡರೂ ಇಂದಿನವರೆಗೂ ಶೋಷಿತ ಸಮುದಾಯಗಳ ಹಕ್ಕುಗಳು ದಕ್ಕಿಲ್ಲ. ಅದರಲ್ಲಿ 3 ದಶಕಗಳ ಒಳಮೀಸಲಾತಿ ಹಕ್ಕೂ ಒಂದಾಗಿದೆ. ಎಲ್ಲ ಹಂತದ ವರದಿಗಳು, ಆಯೋಗಗಳು ರಚನೆಗೊಂಡರೂ ಒಳಮೀಸಲಾತಿ ಜಾರಿಯಾಗುತ್ತಿಲ್ಲ. ಮಾನ್ಯ ಸುಪ್ರೀಂ ಕೋರ್ಟ್‌ ತೀರ್ಪಿನ ಆಧಾರವಾಗಿ ಕರ್ನಾಟಕದಲ್ಲಿ ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಸಮೀಕ್ಷೆ ನಡೆಸಿ ತಮ್ಮ ವರದಿಯನ್ನು ಸರ್ಕಾರಕ್ಕೆ ನೀಡಿದೆ.

ಇದನ್ನೂ ಓದಿ: ಚುನಾವಣಾ ಆಯೋಗ ಅನುಮಾನಗಳನ್ನು ನಿವಾರಿಸಬೇಕು

ಎಲ್ಲಾ ವರದಿಗಳಂತೆಯೇ ಈ ವರದಿಯಲ್ಲೂ ಅಲೆಮಾರಿ ಸಮುದಾಯಗಳು ಮತ್ತು ಮಾದಿಗ ಮತ್ತು ಸಂಬಂಧಿತ ಸಮುದಾಯಗಳು ಅತಿ ಹಿಂದುಳಿದಿವೆ ಎಂಬುದನ್ನು ಸಾಕ್ಷೀಕರಿಸಿಲಾಗಿದೆ. ಈ ವರದಿಯನ್ನು ಜಾರಿಮಾಡದೇ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಯಾವುದೇ ನೈತಿಕ ಹಕ್ಕು ಇರುವುದಿಲ್ಲ. ಹಾಗಾಗಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಅಂದು ಉಸ್ತುವಾರಿ ಸಚಿವರಿಗೆ ಹಾಗೂ ಸ್ಥಳೀಯ ಶಾಸಕರುಗಳ ಕಾರ್ಯಕ್ರಮಗಳಿಗೆ ಕಪ್ಪು ಬಾವುಟ ಪ್ರದರ್ಶನ ಹಾಗೂ ಫೇರಾವ್ ಹಾಕಲಾಕುವುದು.

ಸಾಮಾಜಿಕ ನ್ಯಾಯ ಸಿಗಲೇಬೇಕು ಎಂದು ಆಳವಾಗಿ ಆಶಿಸಿದ್ದ ಜಸ್ಟೀಸ್ ನಾಗಮೋಹನ್ ದಾಸ್ ರವರು ತಮ್ಮ ವರದಿಯನ್ನು ನೀಡಿ ಇದು ಅಂತಿಮವಲ್ಲ. ಯಾವುದೇ ಸಮೀಕ್ಷೆಗಳು ಪರಿಪೂರ್ಣವಲ್ಲ ಎಂಬುದನ್ನೂ ತಮ್ಮ ವರದಿಯಲ್ಲಿ ತಿಳಿಸಿದ್ದರೂ ಕೆಲವು ಸಮುದಾಯಗಳು ಬಗೆಹರಿಸಿಕೊಳ್ಳಬಹುದಾದ ದೋಷಗಳನ್ನು ಮುಂದಿಟ್ಟುಕೊಂಡು ಬಹಳ ಕಟುವಾಗಿ ಜಸ್ಟೀಸ್ ನಾಗಮೋಹನ್‌ದಾಸ್‌ರವರನ್ನು ವಿರೋಧಿಸುತ್ತಿರುವುದು ಬಾಬಾ ಸಾಹೇಬರು ಆಶಿಸಿದ್ದ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇದು ಸಂವಿಧಾನಕ್ಕೆ ಮಾಡುವ ಅಪಚಾರ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್‌ರಿಗೆ ಮಾಡುತ್ತಿರುವ ದ್ರೋಹ.

ಜಸ್ಟೀಸ್ ನಾಗಮೋಹನ್‌ದಾಸ್‌ರವರು ನೀಡಿದ ವರದಿಯಲ್ಲಿ ಅಲೆಮಾರಿ ಹಾಗೂ ಮಾದಿಗ, ತ್ರಿಮತಸ್ಥ ಚರ್ಮಕಾರರು ಹಾಗೂ ಸಂಬಂಧಿತ ಸಮುದಾಯಗಳು ಎಲ್ಲಾ ರೀತಿಯಲ್ಲೂ ಹಿಂದುಳಿದಿದ್ದಾರೆ ಎಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೂ ಕೆಲವು ದೋಷಗಳು ಉಳಿದುಕೊಂಡಿವೆ. ಪರಾಯ್, ಮೊಗೇರಾ ಜಾತಿಗಳು ಹೊಲೆಯ ಜಾತಿಗೆ ಸಂಬಂಧಿಸಿದ ಜಾತಿಗಳು, ಮಾದಿಗ ಜಾತಿಗಳ ಪಟ್ಟಿಯಲ್ಲಿ ಅವರ ಹಿಂದುಳಿದಿರುವಿಕೆ ಆಧಾರದಲ್ಲಿ ಸೇರಿಸಲಾಗಿದೆ ಎಂಬುದನ್ನು ಅವರ ಅಭಿವೃದ್ಧಿ ಅಂಕಿಅಂಶಗಳನ್ನು ನೋಡಿದರೆ ತಿಳಿದುಬರುತ್ತದೆ.

ಸರ್ಕಾರ ಹಾಗೂ ಸಮುದಾಯಗಳು ತಾವು ಯಾವ ಪಟ್ಟಿಯಲ್ಲಿರಬೇಕೆಂದು ಬಯಸುತ್ತಾರೋ ಅವರನ್ನು ಅಲ್ಲಿಗೆ ಸೇರಿಸಲು ಯಾರದ್ದೂ ಅಭ್ಯಂತರವಿಲ್ಲ. ಇಂತಹ ಸಣ್ಣ ಪುಟ್ಟ ಲೋಪಗಳನ್ನು ಸರಿಪಡಿಸಿಕೊಂಡು ಒಳಮೀಸಲಾತಿಯನ್ನು ಜಾರಿ ಮಾಡಲು ಸಹಕರಿಸಬೇಕು.

ಒಳಮೀಸಲಾತಿ ಕುರಿತು ಚರ್ಚಿಸಲು ಆಗಸ್ಟ್ 16ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಕುರಿತಂತೆ ಯಾವುದೇ ಸಮಿತಿ ರಚಿಸದೆ ವರದಿಯನ್ನು ಜಾರಿಮಾಡಬೇಕು. ಒಂದುವೇಳೆ ಇದನ್ನು ಮುಂದೂಡಿದರೆ ಸಾಮಾಜಿಕ ನ್ಯಾಯ ಮುಂದೂಡಿದಂತೆ. ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸಿದಂತೆ.
ಕೂಡಲೇ ಜಸ್ಟೀಸ್ ನಾಗಮೋಹನ್‌ ದಾಸ್‌ರವರ ಆಯೋಗದ ವರದಿಯನ್ನು ಜಾರಿಮಾಡಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ.

ಅನಿರ್ಧಿಷ್ಟಾವಧಿ ಅಹೋರಾತ್ರಿ ಸತ್ಯಾಗ್ರಹದಲ್ಲಿರುವ ರಾಜ್ಯ ಮಟ್ಟದ ನಾಯಕರುಗಳು

ಬಸವರಾಜ್ ಕೌತಾಳ್, ಅಂಬಣ್ಣ ಅರೋಲಿಕರ್, ಎಸ್ ಮಾರೆಪ್ಪ, ಜೆ ಬಿ ರಾಜು, ಪ್ರೊ. ದೊರೆರಾಜು, ಶಿವರಾಯ ಅಕ್ಕರಕಿ, ಕರಿಯಪ್ಪ ಗುಡಿಮನಿ, ಕೇಶವಮೂರ್ತಿ, ಹೆಣ್ಣೂರು ಶ್ರೀನಿವಾಸ್, ಸಣ್ಣ ಮಾರೆಪ್ಪ, ಡಿ.ಟಿ ವೆಂಕಟೇಶ್, ಚಾವಡಿ ಲೋಕೇಶ್, ಉಮಾದೇವಿ, ಪಿಚ್ಚಳ್ಳಿ ಶ್ರೀನಿವಾಸ್, ಸಿದ್ದಲಿಂಗಯ್ಯ ಕಮಲಾನಗರ, ಶಿವಲಿಂಗಮ್, ಭೀಮನಕೆರೆ ಶಿವಮೂರ್ತಿ, ಶಿವಲಿಂಗಣ್ಣ, ಪಾರ್ತಿಭನ್, ಮಂಜು PTCL, ಡಾ ಹುಲಿಕುಂಟೆ ಮೂರ್ತಿ, ಮುತ್ತುರಾಜ್, ನರಸಿಂಹಮೂರ್ತಿ, ಓಬಳೇಶ್, ಚಂದ್ರು ತರಹುಣಿಸೆ.

ಇದನ್ನೂ ನೋಡಿ: ವಚನಾನುಭವ – 31 | ಅಂಬಿಗರ ಚೌಡಯ್ಯನ ವಚನ – ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ Janashakthi Media

Donate Janashakthi Media

Leave a Reply

Your email address will not be published. Required fields are marked *