ವಿಜಯಪುರ : ಸರ್ಕಾರಿ ಕಾಲೇಜಿನ ಪ್ರಾಂಶುಪಾಲನೊಬ್ಬ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದು, ಬೇಸರಗೊಂಡ ವಿದ್ಯಾರ್ಥಿನಿಯರು ಠಾಣೆಗೆ ಬಂದು ದೂರು ನೀಡಿರುವಂತಹ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ನಡೆದಿದೆ.
ಈ ಗಂಭೀರ ಆರೋಪವು ಮನಗೂಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸಚೀನಕುಮಾರ ಪಾಟೀಲ ವಿರುದ್ಧ ಕೇಳಿಬಂದಿದೆ. ಅದೇ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಂದ ಕೇಸ್ ದಾಖಲಿಸಿದ್ದಾರೆ. ದೂರಿನಲ್ಲಿ ದಿನನಿತ್ಯ ಕಾಲೇಜಿನಲ್ಲಿ ನನ್ನೊಂದಿಗೆ ಸಹಕರಿಸುವಂತೆ ಕಿರಿಕಿರಿ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ಜೊತೆಗೆ ಚಾಟಿಂಗ್ ಮಾಡಿ ಸಹಕರಿಸುವಂತೆ ಕೇಳುತ್ತಿದ್ದ ಎಂಬ ವಿಚಾರವಾಗಿ ಸಹಿತ ದೂರಿನಲ್ಲಿ ಉಲ್ಲೇಸಲಾಗಿದೆ.
ಇದನ್ನೂ ಓದಿ : ಮತ್ತು ಬರುವ ಔಷಧಿ ಬೇರಸಿ ಮಹಿಳಾ ಭದ್ರತಾ ಸಿಬ್ಬಂದಿ ಮೇಲೆ ಅತ್ಯಾಚಾರ
ಪ್ರೀನ್ಸಿಪಾಲ್ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಪ್ರೀನ್ಸಿಪಾಲ್ ಮಾಡಿದ ಚಾಟಿಂಗ್ ವೇಳೆ ವಿಡಿಯೋ ಕಾಲು ಮಾಡಿ ಅಂತಾ ವಿದ್ಯಾರ್ಥಿನಿಗೆ ಪೀಡಿಸಿದ್ದಾರೆ, ಜೊತೆಗೆ ಚಾಟಿಂಗ್ ನಲ್ಲಿ ನಿನ್ನ ಬಹಳಷ್ಟು ಹಚ್ಚಿಕೊಂಡಿರುವ ಅಡ್ಡೆಸ್ಟ್ ಆಗು ಎಂದಲ್ಲ ಮೆಸೇಜ್ ಮಾಡಿದ್ದಾನೆ. ಇನ್ನೂ ವಿದ್ಯಾರ್ಥಿ ನಿಯರು ತಮ್ಮ ತಮ್ಮ ಮದ್ಯ ಚರ್ಚೆ ಮಾಡುವಾಗ ಈ ಪ್ರಿನ್ಸಿಪಾಲ್ ನ ನಿಜ ಬಣ್ಣ ಬಯಲಾಗಿದೆ.
ಆತ ತನ್ನ ಕೊಠಡಿಗೆ ಕರೆದು ಲೈಂಗಿಕ ದೌರ್ಜನ್ಯ ನಡೆಸಿರುವ ವಿಚಾರ ಸಹಿತ ದೂರಿನಲ್ಲಿ ದಾಖಲು ಮಾಡಿದ್ದಾರೆ. ಇನ್ನೂ ಆತನಿಗೆ ಸಹಕರಿಸದಿದ್ದರೆ ಅವರಿಗೆ ಫೇಲ್ ಕೂಡಾ ಮಾಡುತ್ತಿದ್ದ ಎನ್ನಲಾಗುತ್ತಿದೆ. ಇನ್ನೂ ಮನಗೂಳಿ ಠಾಣೆಯಲ್ಲಿ ಈ ವಿಚಾರದಲ್ಲಿ ದೂರು ದಾಖಲಾಗುತ್ತಲೇ ಪೋಲಿಸರು ಎಚ್ಚೆತ್ತುಕೊಂಡು ಆತನನ್ನು ಬಂಧಿಸಿದ್ದಾರೆ.
ಮಹಿಳೆಯ ವಿಚಾರವಾದ ಕಾರಣ ಸುಪ್ರೀಂ ಕೋರ್ಟ್ ಗೈಡ್ ಲೈನ್ಸ್ ಪುಕಾರ ನಾನು ಮಾತನಾಡಲು ಬರಲ್ಲ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಈ ಪುಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೋಲಿಸರು ಪ್ರೀನ್ಸಿಪಾಲ್ ಸಚೀನಕುಮಾರ ಪಾಟೀಲ್ ನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಪೋಲಿಸರ ವಿಚಾರಣೆ ಬಳಿಕ ಈ ಪ್ರಕರಣದ ಇನ್ನಷ್ಟು ಸತ್ಯಾಂಶ ಹೊರ ಬರಲಿದೆ.
ಇದನ್ನೂ ನೋಡಿ : ಸದನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಆಕ್ಷೇಪಾರ್ಹ ಪದಬಳಸಿದ ಸಿಟಿ ರವಿ Janashakthi Media