ಕೊನೆಗಾಣದ ಭಾರತೀಯ ಸಂಸತ್ತಿನ ಕೆಟ್ಟ ಕನಸು !

ಕೃಪೆ : ದಿ ವೈರ್‌, ಮೂಲ ಲೇಖನ – ಮಾನಸಿ ವರ್ಮಾ, ಕನ್ನಡಕ್ಕೆ : ಟಿ. ಸುರೇಂದ್ರರಾವ್
ಜನ ಸಮುದಾಯದ  ಕಲ್ಪನೆಗಳಲ್ಲಿ  ಸಂಸತ್ತನ್ನು  ಅನಗತ್ಯವೆಂದು  ಭಾವಿಸುವಂತೆ  ಮಾಡಿದ್ದು ಸರ್ಕಾರದ  ಅತಿ ದೊಡ್ಡ  ಅಪಚಾರ.  ಒಂದು  ಮಗುವನ್ನು  ಬೆಳೆಸಲು  ಇಡೀ  ಹಳ್ಳಿಯೇ  ತೊಡಗಿಕೊಂಡರೆ,  ಪ್ರಜಾಪ್ರಭುತ್ವವನ್ನು  ನಿರಂತರವಾಗಿ  ನಡೆಯುವಂತೆ  ನೋಡಿಕೊಳ್ಳಲು  ಇಡೀ ದೇಶವೇ  ತೊಡಗಿಕೊಳ್ಳಬೇಕಾಗುತ್ತದೆ.  ಆ ವಿಚಾರದಲ್ಲಿ ನಾವು ಸೋತಿದ್ದೇವೆ, ಸಾಮೂಹಿಕವಾಗಿ ಹಾಗೂ ತ್ವರಿತವಾಗಿ. ಕೊನೆಗಾಣದ

ಪ್ರಜಾಪ್ರಭುತ್ವ  ಸೋಲುತ್ತಿರುವುದರ  ಖಚಿತವಾದ  ಸಂಕೇತವೆಂದರೆ  ಅದರ  ಸಂಸ್ಥೆಗಳಿಗೆ ಅನಾರೋಗ್ಯವಾದಾಗ.  ಬಹಳ  ಮುಖ್ಯವಾಗಿ  ಅದರ  ಅಧಿಕಾರವನ್ನು ನಿಯಂತ್ರಿಸಲು ರೂಪುಗೊಂಡಿರುವ  ಸಂಸ್ಥೆಗಳು.  ಸಂಸತ್ತು  ಅಂತಹ  ಒಂದು ಸಂಸ್ಥೆ. ನಮ್ಮ ಕಲ್ಪನೆಯ ಪ್ರಕಾರ ಸಂಸತ್ತಿನ ಉದ್ದೇಶ ಏನೇ ಇರಬಹುದು, ನಮ್ಮ ಸಂವಿಧಾನದ ಪ್ರಕಾರ ಅದು ಪ್ರಾತಿನಿಧಿಕವಾದದ್ದು, ಶಾಸನಗಳನ್ನು ರೂಪಿಸುವುದು ಮತ್ತು ಉತ್ತರದಾಯಿತ್ವವನ್ನು ಬಯಸುವುದಾಗಿದೆ. ಇವೆಲ್ಲವುಗಳನ್ನು ಸರಿಯಾಗಿ ಈಡೇರಿಸಲು ಅದು ಹೆಣಗಾಡುತ್ತಿದೆ.

ನಮ್ಮ ಸಂಸತ್ತು ತನ್ನ ಸಾಂವಿಧಾನಿಕ ಪಾತ್ರ ವಹಿಸುವುದನ್ನು ಯಾವುದು ಮತ್ತು ಯಾರು ತಡೆಹಿಡಿಯುತ್ತಿದ್ದಾರೆ? ಪ್ರಥಮತಃ ಸರ್ಕಾರ ಆದರೆ ನಾವು ಭಾರತದ ಜನರೂ ಕೂಡ ಅದಕ್ಕೆ ಜವಾಬ್ದಾರರು.

ಸಂಸತ್ತಿನ ಘನತೆಯನ್ನು ಸರ್ಕಾರ ಬಲಿಕೊಡುತ್ತಿದೆ

ಪ್ರಸಕ್ತ ಸರ್ಕಾರದ ಹಿಂದಿನ ಸಂಸತ್ ಅಧಿವೇಶನದ ಸಂದರ್ಭದಲ್ಲಿ, ಈ ಸರ್ಕಾರವು ತನ್ನ ಅವಧಿಯಲ್ಲಿ ಮಾಡಿದ ‘ತಪ್ಪುಗಳ’ ಬಗ್ಗೆ ‘ಎಕ್ಸ್’ (ಹಿಂದಿನ ಟ್ವಿಟರ್) ವೇದಿಕೆಯಲ್ಲಿ ಒಂದು ಎಳೆಯನ್ನು ಹಂಚಿಕೊಂಡಿದ್ದೆ. ಆ ಪಟ್ಟಿಯಲ್ಲಿ ಎಲ್ಲಾ ತಪ್ಪುಗಳನ್ನೂ ಹೇಳದೆ ಕೆಲವು ಪ್ರಮುಖವಾದ ಮತ್ತು ಸಂಬಂಧಪಟ್ಟ ನಾಗರಿಕರು ಚಿಂತಿಸಬೇಕಾದ ಎದ್ದುಕಾಣುವ ತಪ್ಪುಗಳನ್ನು ಮಾತ್ರ ನಮೂದಿಸಿದ್ದೆ.

ಆರಂಭದಲ್ಲಿ ಲೋಕಸಭಾ ಉಪಾಧ್ಯಕ್ಷರ (ಡೆಪ್ಯುಟಿ ಸ್ಪೀಕರ್) ಸ್ಥಾನ ಖಾಲಿ ಇರುವ ವಿಚಾರವನ್ನು ಹೇಳಿದ್ದೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಉಪ ಸಭಾಧ್ಯಕ್ಷರನ್ನು ಹೊಂದಬೇಕು ಎಂದು ಸ್ಪಷ್ಟ ಮಾತುಗಳಲ್ಲಿ ಸಂವಿಧಾನದ ಪರಿಚ್ಛೇದ 93 ನಿರ್ದೇಶಿಸುತ್ತದೆ. ಈಗ ನಾಲ್ಕು ವರ್ಷಗಳು ಕಳೆಯುತ್ತಾ ಬಂದಿದೆ. ಪಾರಂಪರಿಕವಾಗಿ ಆ ಸ್ಥಾನವನ್ನು ವಿರೋಧ ಪಕ್ಷದವರೊಬ್ಬರು ಅಲಂಕರಿಸಬೇಕು, ಆದರೆ ಉಪಾಧ್ಯಕ್ಷರಿಲ್ಲದೆಯೂ ಅಧಿವೇಶನವು ನಡೆಯಬಲ್ಲುದು ಎಂದು ಸರ್ಕಾರ ವಾದಿಸುವುದು ಮುಖ್ಯವಾಗುವುದಿಲ್ಲ. ಯಾವುದು ಮುಖ್ಯವಾಗುತ್ತದೆಯೆಂದರೆ ಒಂದು ಸಾಂವಿಧಾನಿಕ ನಿರ್ದೇಶನವನ್ನು ಈ ಸರ್ಕಾರ ಎಷ್ಟು ಉದಾಸೀನ ಧೋರಣೆಯಿಂದ ಪರಿಗಣಿಸುತ್ತದೆ ಎಂಬ ಸಂಗತಿ ಬಹಳ ಮುಖ್ಯವಾಗುತ್ತದೆ. ಏಕೆ ಹೀಗೆ? ಏಕೆಂದರೆ, ಅದರಿಂದ ತಪ್ಪಿಸಿಕೊಳ್ಳಬಹುದೆಂದು ಸರ್ಕಾರ ಭಾವಿಸುತ್ತದೆ. ನಾವು ಕೂಡ ಹಾಗೆಯೇ ಬಿಟ್ಟಿದ್ದೇವೆ.

ನಂತರ ಬರುವುದು ಬಹಳ ಮುಖ್ಯ ವಿಷಯವಾದ ಅತಿ ಕಡಿಮೆಯ ಹಾಗೂ ಅತಿ ಸಣ್ಣ ಅವಧಿಯ ಸಂಸತ್ ಅಧಿವೇಶನಗಳು. ಸರ್ಕಾರವು ಸಂಸತ್ತನ್ನು ಕಡೆಗಣಿಸುವ ನಿದರ್ಶನಗಳು ಇದಕ್ಕಿಂತ ಬೇರೆ ಏನಿರಲು ಸಾಧ್ಯ. ಏಕೆಂದರೆ ಸಂಸತ್ತಿನ ಅಧಿವೇಶನವನ್ನು ಯಾವಾಗ ಕರೆಯಬೇಕು ಮತ್ತು ಎಷ್ಟು ಅವಧಿಯ ಕಾಲ ಇರಬೇಕು ಎನ್ನುವುದನ್ನು ತೀರ್ಮಾನಿಸುವ ಅಧಿಕಾರ ಸರ್ಕಾರಕ್ಕಿದೆ. ಸ್ವತಂತ್ರ ಭಾರತದಲ್ಲಿ ಯಾವ ಸಂದರ್ಭದಲ್ಲೂ ಕಾರ್ಯಾಂಗವು ಶಾಸನ ಸಭೆಯನ್ನು ನಡೆಸುವಾಗ ಅದನ್ನು ಉಪೇಕ್ಷೆ ಮಾಡುವುದಿಲ್ಲ ಅಥವಾ ತಾತ್ಸಾರ ಧೋರಣೆಯನ್ನು ತಳೆಯಲಾರದು ಎಂಬ ವಿಶ್ವಾಸವನ್ನು ಸಾಂವಿಧಾನಿಕ ಸಭೆಯಲ್ಲಿ ಮಾತನಾಡುವಾಗ ಡಾ. ಬಿ.ಆರ್. ಅಂಬೇಡ್ಕರ್ ಅವರು ವ್ಯಕ್ತಪಡಿಸಿದ್ದರು. ವಿಷಾದವೆಂದರೆ, ಅದು ತಪ್ಪು ಎಂದು ಸಾಬೀತಾಯಿತು. ಸಂಸತ್ ಅಧಿವೇಶನವನ್ನು ಶಾಸನಸಭೆಗೆ ಉತ್ತರದಾಯಿತ್ವದ ಕಾರಣಕ್ಕಾಗಿ ಸೇರಿಸದೆ ರಾಜಕೀಯ ಅವಶ್ಯಕತೆಯ ಲೆಕ್ಕಾಚಾರದ ಆಧಾರದಲ್ಲಿ ಕರೆಯಲಾಗುತ್ತಿದೆ. ನಿರ್ಣಾಯಕ ರಾಜ್ಯ ವಿಧಾನ ಸಭೆ ಚುನಾವಣೆಗಳಿದ್ದರೆ, ಸಂಸತ್ ಅಧಿವೇಶನ ಕಾಯಬೇಕಾಗುತ್ತದೆ. ಕೋವಿಡ್-19 ಬಂತು, ಆ ಮಹಾರೋಗದ ಅವಧಿಯಲ್ಲಿ ಸರ್ಕಾರವನ್ನು ಪ್ರಶ್ನಿಸಲು ಸಂಸತ್ ಅಧಿವೇಶನವನ್ನು ಕರೆಯುವ ಅಗತ್ಯವೇನಿದೆ? ಎಷ್ಟು ಕಾಲ ಸಾಧ್ಯವೋ ಅಷ್ಟು ದಿನಗಳು ಅದನ್ನು ಮುಚ್ಚುವುದು ಅಷ್ಟೆ. ನಾನು ಬೇರೆಲ್ಲೋ ಚರ್ಚೆ ಮಾಡಿದಂತೆ ಆ ಮಹಾರೋಗದ ಸಮಯದಲ್ಲಿ ಸಂಸತ್ತನ್ನು ನಡೆಸುವುದು ಬೇರೆ ಯಾವ ಸಮಯಕ್ಕಿಂತಲೂ ಹೆಚ್ಚು ಅಗತ್ಯವಾಗಿತ್ತು.

ಕಡಿಮೆ ಅವಧಿಯ ಹಾಗೂ ಕಡಿಮೆ ಅಧಿವೇಶನಗಳ ಅರ್ಥವೇನೆಂದರೆ ಸರ್ಕಾರದ ಕಾರ್ಯಸೂಚಿಯನ್ನು ಕೇಂದ್ರೀಕರಿಸಿ ಆದ್ಯತೆ ಕೊಟ್ಟು ಸಂಸತ್ತಿನ ಸಮಯವನ್ನು ನಿಗದಿ ಮಾಡುವುದು. ಕಡಿಮೆ ಸಮಯದ ಲಭ್ಯತೆ ಇದ್ದರೆ, ಬೇರೆಲ್ಲಾ ವಿಷಯಗಳನ್ನು ಕೈಬಿಟ್ಟು ಮಸೂದೆಗಳನ್ನು ಅಂಗೀಕರಿಸುವುದು. ವಿರೋಧ ಪಕ್ಷಗಳು ಚರ್ಚೆ ಬೇಕೆಂದು ಒತ್ತಾಯಿಸಿದರೆ, ಸರ್ಕಾರದ ಕಾರ್ಯಸೂಚಿಗೆ ತೊಂದರೆಯಿಲ್ಲವೆAದಾದರೆ ಮಾತ್ರ ಆ ಅಧಿವೇಶನದಲ್ಲಿ ಚರ್ಚೆ ನಡೆಸುವುದು. ತಮ್ಮ ಬೇಡಿಕೆಗಳನ್ನು ಪರಿಗಣಿಸುತ್ತಿಲ್ಲ ಎಂದು ವಿರೋಧ ಪಕ್ಷಗಳು ಪ್ರತಿಭಟಿಸಿದರೆ, ಆ ಅಡೆತಡೆಗಳಿಂದ ಉಂಟಾದ ‘ಸಮಯ ನಷ್ಟ’ವನ್ನು ಸರಿದೂಗಿಸಲು ಮಸೂದೆಗಳನ್ನು ಚರ್ಚೆಯಿಲ್ಲದೇ ಹಾಗೆಯೇ ಅಂಗೀಕರಿಸುವುದು. ಪ್ರಾಯಶಃ, ಸಮಯ ನಷ್ಟದ ಭೀತಿಯಿಂದಾಗಿಯೇ ಪರಿಶೀಲನೆ, ವಿಮರ್ಶೆ ಹಾಗೂ ಸಾರ್ವಜನಿಕ ಸಮಾಲೋಚನೆಗಾಗಿ ಮಸೂದೆಗಳನ್ನು ಸಂಸದೀಯ ಸಮಿತಿಗಳಿಗೆ ಕಳಿಸುವುದನ್ನೂ ಸರ್ಕಾರ ತಡೆಹಿಡಿಯುತ್ತಿದೆ. ಕಡಿಮೆ ಅವಧಿಯ ಹಾಗೂ ಕಡಿಮೆ ಅಧಿವೇಶನಗಳು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಆಡಳಿತ ನಡೆಸುವ ಅವಕಾಶವನ್ನು ಒದಗಿಸುತ್ತದೆ ಹಾಗೂ ಆ ಮೂಲಕ ಸಂಸದೀಯ ಶಾಸನ ಮಾಡುವ ಪ್ರಕ್ರಿಯೆಯನ್ನು ತಪ್ಪಿಸಿಕೊಳ್ಳಬಹುದು ಕೂಡ. ಕೊನೆಗಾಣದ

ಮತ್ತು ಅಂತಿಮವಾಗಿ, ಸಂಸದೀಯ ಪ್ರಶ್ನೆಗಳಿಗೆ ಉತ್ತರಿಸಬೇಕಾದ ನಿರ್ಣಾಯಕ ವಿಷಯವಿದೆ. ಪ್ರಶ್ನೆಗಳ ಬಗ್ಗೆ ಸರ್ಕಾರಕ್ಕೆ ಮುಜುಗರವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು, ಆದಾಗ್ಯೂ ಅದು ವಿಶಿಷ್ಟವಾದುದು. ಪ್ರಶ್ನೆಗಳಿಗೆ ಉತ್ತರ ನೀಡುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಸರ್ಕಾರ ಯಾವ ಮಟ್ಟಕ್ಕೂ ಹೋಗಬಹುದು, ಕೆಲವು ವೇಳೆ ವಿರೋಧಿ ಸಂಸದರನ್ನು ಸಂಸತ್ತಿನಿAದ ಉಚ್ಛಾಟಿಸುವುದಕ್ಕೂ ಹೇಸುವುದಿಲ್ಲ. ಹಾಗೆ ಅಮಾನತುಗೊಂಡ ವಿರೋಧಿ ಸಂಸದರ ಪ್ರಶ್ನೆಗಳನ್ನು ತೆಗೆದುಹಾಕುವಂತಹ ಸಂಶಯಾಸ್ಪದ ಕೆಲಸಕ್ಕೂ ಇಳಿಯುತ್ತಾರೆ. ಉತ್ತರ ನೀಡದೇ ಗತ್ಯಂತರವಿಲ್ಲವೆAದು ಅನಿಸಿದಾಗ ಪ್ರಶ್ನಗಳಿಂದ ನುಣುಚಿಕೊಳ್ಳುತ್ತಾರೆ ಅಥವಾ ಕಡೆಗಣಿಸುತ್ತಾರೆ, ಹಾದಿ ತಪ್ಪಿಸುವ ಅಥವಾ ಅಪೂರ್ಣ ಉತ್ತರಗಳನ್ನು ನೀಡುತ್ತಾರೆ. ಮತ್ತು ಇವೆಲ್ಲವೂ ವಿಫಲವಾದಾಗ ದತ್ತಾಂಶ ಲಭ್ಯವಿಲ್ಲ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ.

ಆದರೆ ಸರ್ಕಾರ ಎಸಗುತ್ತಿರುವ ಅತ್ಯಂತ ದೊಡ್ಡ ಅಪಚಾರವೆಂದರೆ ಸಂಸತ್ತಿನ ಬಗ್ಗೆ ಜನರಿಗಿರುವ ಕಲ್ಪನೆಗಳನ್ನು ಅನಗತ್ಯವಾಗಿಸುತ್ತಿರುವುದು.

ಇದನ್ನೂ ಓದಿಸಂಸತ್ತು ಕಣ್ಮರೆಯಾಗುವ ಅಪಾಯ

ಜನರು ಸಂಸತ್ತನ್ನು ತೊರೆದಿದ್ದಾರೆ

ಸರ್ಕಾರ ಮಾಡುತ್ತಿರುವ ‘ತಪ್ಪುಗಳನ್ನು’ ನಾನು ಪ್ರಚುರಪಡಿಸಿದಾಗ, ಬಹಳ ಜನರು ಒಪಿಕೊಳ್ಳಲಿಲ್ಲ. ಭಿನ್ನಾಭಿಪ್ರಾಯ ಹಾಗೂ ನಿರಾಕರಣೆ ಪ್ರಜಾಪ್ರಭುತ್ವದ ಅಡಿಪಾಯಗಳು, ಅವರ ವಾದಗಳಲ್ಲಿನ ಹಲವಾರು ಅಸಂಬದ್ಧತೆಗಳನ್ನು ಅವರಿಗೆ ತಿಳಿಸುವುದು ಬಹಳ ಮುಖ್ಯವಾಗುತ್ತದೆ.

ಸರ್ಕಾರ ಕೆಲಸ  ಮಾಡಿದ್ದಕ್ಕಾಗಿ ಅದನ್ನು ಈಕೆಮಾಡುತ್ತಿದ್ದಾರೆ ಎಂದು ಒಬ್ಬ ನಾಗರಿಕ ವಾದ ಮಾಡಿದರು. ಮೇಲ್ನೋಟಕ್ಕೆ ಯಾವುದೇ ಸರಿಯಾದ ಚರ್ಚೆ, ಕಲಾಪಗಳು ಹಾಗೂ ಪರಿಶೀಲನೆ ಏನೂ ಆಗದೆ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸುವ ಪ್ರಕ್ರಿಯೆಯನ್ನು ಸರ್ಕಾರವು ತನ್ನ ಕಾರ್ಯವನ್ನು ಸರಿಯಾಗಿ ಮಾಡುತ್ತಿರುವುದರ ಸಂಕೇತ. ಬಹಳ ಕಡಿಮೆ ಅವಧಿಯಲ್ಲಿ ದೊಡ ಸಂಖ್ಯೆಯ ಮಸೂದೆಗಳನ್ನು ಅಂಗೀಕರಿಸಿದರೆ ಆಗ ಸಂಸತ್ ಅಧಿವೇಶನವನ್ನು ‘ಉತ್ಪಾದಕ’ ಎಂದು ಮಾಧ್ಯಮಗಳು ಘೋಷಿಸುವುದು ಅಪರೂಪವೇನಲ್ಲ. ಸಂಸತ್ತು ಮಸೂದೆಗಳನ್ನು ಸೃಷ್ಟಿಸುವ ಕಾರ್ಖಾನೆಯಲ್ಲ. ಒಂದು ಅಧಿವೇಶನದಲ್ಲಿ ಹೆಚ್ಚು ಸಂಖ್ಯೆಯ ಮಸೂದೆಗಳನ್ನು ಅಂಗೀಕರಿಸುವುದು ಸಂಸತ್ತಿನ ಕಾರ್ಯದಕ್ಷತೆಯ ಮಾನದಂಡವಲ್ಲ. ಸರ್ಕಾರ ಬಯಸಿದ್ದನ್ನೆಲ್ಲಾ ಸಂಸತ್ತಿನ ಮುಂದೆ ಮಂಡನೆ ಮಾಡಿ ಎಲ್ಲವನ್ನೂ ಕಾನೂನಾಗುವಂತೆ ಮಾಡುವುದು ಅದರ ಕೆಲಸವಲ್ಲ. ಅದಕ್ಕೆ ಬದಲಾಗಿ, ಕಾನೂನು ಮಾಡುವುದು ಸಾವಧಾನವಾಗಿ ನಿಧಾನ ಪ್ರಕ್ರಿಯೆಯಲ್ಲಿ ಆಗಬೇಕಾದ್ದು, ಹಲವಾರು ಬಾರಿ ಅದನ್ನು ಓದಬೇಕಾಗುತ್ತದೆ, ಸಮಿತಿಗಳ ಒಳಗಡೆ ಆಳವಾದ ಚರ್ಚೆಯನ್ನು ಮಾಡಬೇಕಾಗುತ್ತದೆ, ನಂತರ ಸಂಸತ್ತಿನಲ್ಲಿ ಎಲ್ಲಾ ಸದಸ್ಯರೂ ಅನಿರ್ಬಂಧಿತವಾಗಿ ಚರ್ಚೆ ಮಾಡಬೇಕಾಗುತ್ತದೆ. ಅದು ನಿಜವಾದ ನಿಯಮ ಹಾಗೂ ವಿಧಾನ ಎಂದು ಸಂವಿಧಾನದಲ್ಲಿ ಹೇಳಲಾಗಿದೆ.

ಹಲವಾರು ಸಂಬಂಧಪಟ್ಟವರಿಂದ ಅಥವಾ ಆಸಕ್ತರಿಂದ ಸಾಧ್ಯವಾದಷ್ಟೂ ಮಾಹಿತಿಗಳನ್ನು ಕಾನೂನು ಮಾಡುವವರಿಗೆ ತಿಳಿಸಬೇಕು ಎನ್ನುವುದು ಅದರ ಉದ್ದೇಶವಷ್ಟೆ. ಏಕೆಂದರೆ ಕಾನೂನು ಮಾಡುವುದು ದುಬಾರಿಯ ಪ್ರಕ್ರಿಯೆ. ಕಾನೂನು ಮಾಡುವುದರ ವೆಚ್ಚವಿದೆ, ಮತ್ತು ಕಾನೂನು ಜಾರಿಮಾಡುವ ವೆಚ್ಚ ಕೂಡ ಇದೆ.  ಕೇವಲ ತೆರಿಗೆದಾರರಿಗೆ ಹಣಕಾಸಿನ ವೆಚ್ಚ ಮಾತ್ರವಲ್ಲ, ಅದರಲ್ಲಿ ಮಾನವೀಯ, ಸಾಮಾಜಿಕ, ಪರಿಸರದ ವೆಚ್ಚವೂ ಒಳಗೊಂಡಿರುತ್ತದೆ. ಕೆಟ್ಟ ಕಾನೂನು ಜನರ ಹಕ್ಕುಗಳನ್ನು ಉಲ್ಲಂಘಿಸುತ್ತವೆ, ಅದು ಪ್ರತಿಭಟನೆಗೆ ಕಾರಣವಾಗಬಹುದು ಮತ್ತು ಸಮಾಜದಲ್ಲಿ ಕ್ಷೋಭೆಯನ್ನು ಉಂಟುಮಾಡಬಹುದು. ಆದ್ದರಿಂದಲೇ ಕಾನೂನು ಮಾಡುವ ಪ್ರಕ್ರಿಯೆಯಲ್ಲಿ ವಿವಿಧ ರೀತಿಯ ಆಸಕ್ತರನ್ನು ಹಾಗೂ ಅವರ ಪ್ರತಿನಿಧಿಗಳನ್ನು ಒಳಗೊಳ್ಳಬೇಕು. ಅದನ್ನು ಬಳಕೆಯಲ್ಲಿರುವ ಪರ್ಯಾಲೋಚನೆಯ ಪ್ರಜಾಪ್ರಭುತ್ವ ಎನ್ನಬಹುದು. ಚರ್ಚೆಯಿಲ್ಲದೇ ಅಥವಾ ಪ್ರತಿಭಟನೆಗಳ ಮಧ್ಯೆ, ಅಥವಾ ವಿವಿಧ ಅಭಿಪ್ರಾಯಗಳನ್ನು ಕೇಳದೇ ಮಸೂದೆಗಳನ್ನು ತರಾತುರಿಯಲ್ಲಿ ಅಂಗೀಕರಿಸುವುದು ಪ್ರಜಾಪ್ರಭುತ್ವ ವಿರೋಧಿಯಾಗುತ್ತದೆ. ನಾನು ಈ ಹಿಂದೆಯೇ ಪ್ರತಿಪಾದಿಸಿದಂತೆ, ಈ ರೀತಿಯಲ್ಲಿ ಮಸೂದೆಗಳನ್ನು ಅಂಗೀಕರಿಸುವುದು ‘ಕಾನೂನು ಬಾಹಿರ’ವಾಗುತ್ತದೆ ಮತ್ತು ಸಂವಿಧಾನಕ್ಕೆ ವಿರುದ್ಧವಾಗುತ್ತದೆ. ಅದಕ್ಕೆ ಸಮರ್ಥನೆಯೇ ಇಲ್ಲ. ಕೊನೆಗಾಣದ

ಕಡಿಮೆ ಅವಧಿಯ ಸಂಸತ್ತು ಅಂತಹ ಸಮಸ್ಯಾತ್ಮಕವೇನಲ್ಲ, ಏಕೆಂದರೆ ವಿರೋಧ ಪಕ್ಷದವರು ಹಲವಾರು ವಿಷಯಗಳಿಗಾಗಿ ಅಧಿವೇಶನಗಳನ್ನು ಪ್ರತಿಭಟನೆಗಳಿಗೆ ಬಳಸುತ್ತಾರೆ ಮತ್ತು ತಡೆಯುಂಟುಮಾಡುತ್ತಾರೆ ಎಂದು ಮತ್ತೊಬ್ಬ ನಾಗರಿಕ ವಾದಿಸುತ್ತಾನೆ. ವಿರೋಧ ಪಕ್ಷದವರ ನಡವಳಿಕೆಗಳನ್ನು ಹಲವಾರು ನಾಗರಿಕರು ಪ್ರಶ್ನಿಸುತ್ತಾರೆ. ಇಲ್ಲಿ, ಮುಖ್ಯ ವಿಷಯವನ್ನು ನೆನಪಿಸಿಕೊಳ್ಳುವುದು ಮುಖ್ಯವಾಗುತ್ತದೆ. ಕೇವಲ ಸರ್ಕಾರಕ್ಕೆ ಮಾತ್ರ ಆಡಳಿತ ಮಾಡುವ ‘ಜನಾದೇಶ’ ಸಿಕ್ಕಿರುವುದಿಲ್ಲ, ಸಂಸತ್ತಿನ ಪ್ರತಿಯೊಬ್ಬ ಸದಸ್ಯನಿಗೂ, ವಿರೋಧ ಪಕ್ಷದ ಸದಸ್ಯರನ್ನೂ ಒಳಗೊಂಡAತೆ ಎಲ್ಲರಿಗೂ ತಮ್ಮ ಕ್ಷೇತ್ರವನ್ನು ಪ್ರತಿನಿಧಿಸುವ, ಕಾನೂನು ಮಾಡುವ ಮತ್ತು ಸರ್ಕಾರವನ್ನು ಹದ್ದುಬಸ್ತಿನಲ್ಲಿಡುವ ‘ಜನಾದೇಶ’ ಇರುತ್ತದೆ. ನಮ್ಮ ಸಂಸದ ಯಾರಾಗಬೇಕೆನ್ನುವುದನ್ನು ನಾವು ಮತ ಹಾಕಿ ಆಯ್ಕೆ ಮಾಡುತ್ತೇವೆ, ಸಚಿವರನ್ನು ಅಥವಾ ಪ್ರಧಾನ ಮಂತ್ರಿಗಳನ್ನು ನಾವು ಆರಿಸುವುದಿಲ್ಲ. ಆದ್ದರಿಂದ ಸಚಿವರು ಮತ್ತು ಪ್ರಧಾನ ಮಂತ್ರಿಗಳು ನಮ್ಮ ಸಂಸದರ ಮೂಲಕ ನಮಗೆ ಉತ್ತರದಾಯಿತ್ವ ಹೊಂದಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಸಂಸದರ ಅದರಲ್ಲೂ ವಿರೋಧಿ ಸಂಸದರ ಪಾತ್ರ ಬಹಳ ನಿರ್ಣಾಯಕವಾದುದು. ವಿರೋಧ ಪಕ್ಷದವರ ಸಂಸತ್ತಿನೊಳಗಡೆಯ ಪರಿಣಾಮಕಾರಿಯಾದ ಹಾಗೂ ಸತತವಾಗಿ ಭಾಗವಹಿಸುವಿಕೆಯು ಪ್ರಜಾಪ್ರಭುತ್ವದ ಒರೆ ಹಚ್ಚಿದ ಪರೀಕ್ಷೆಯಂತೆ, ಏಕೆಂದರೆ ವಿರೋಧಿಗಳಿಲ್ಲದೇ ಕೆಲಸ ಮಾಡುವುದು ಸುಲಭ, ಆದರೆ ವಿರೋಧಿಗಳನ್ನೂ ಒಟ್ಟಿಗೇ ಕೊಂಡೊಯ್ಯುವುದು ಸರ್ಕಾರದವರಿಗೆ ಕಾಫಿ ಕುಡಿದಷ್ಟು ಸುಲಭವಲ್ಲ.

ಇನ್ನೊಬ್ಬ ನಾಗರಿಕೆ ಹೇಳುತ್ತಾನೆ, ಕಡಿಮೆ ಅವಧಿಯ ಸಂಸತ್ತು ಸಮಸ್ಯಾತ್ಮಕವಲ್ಲ ಏಕೆಂದರೆ ವಿರೋಧಿಗಳೂ ಅಲ್ಲಿ ಗೌರವಯುತವಾಗಿ ನಡೆದುಕೊಳ್ಳಬೇಕು, ಅದರೆ ವಿರೋಧಿಗಳಿಗೆ ಯಾವುದೇ ಅಧಿಕಾರವಿರುವುದಿಲ್ಲ ಎಂಬುದನ್ನು ನಾವು ಮರೆಯುತ್ತೇವೆ. ಸರ್ಕಾರ ಬಯಸದಿದ್ದರೆ, ಸಂಸತ್ ಅಧಿವೇಶನವನ್ನು ಕರೆಯಲು ವಿರೋಧ ಪಕ್ಷಗಳು ಸರ್ಕಾರವನ್ನು ಬಲವಂತ ಮಾಡುವಂತಿಲ್ಲ. ಸರ್ಕಾರಕ್ಕೆ ಇಷ್ಟವಿಲ್ಲದಿದ್ದರೆ, ಯಾವುದೋ ಒಂದು ನಿರ್ದಿಷ್ಟ ಸಮಸ್ಯೆಯನ್ನು ಚರ್ಚೆಗೆ ತೆಗೆದುಕೊಳ್ಳಲು ವಿರೋಧಿಗಳು ಸರ್ಕಾರವನ್ನು ಒತ್ತಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಸಂಸತ್ತು ಶಿಸ್ತುಬದ್ಧವಾಗಿ ನಡೆಯುವುದು ಸರ್ಕಾರದ ಒಳ್ಳೆಯ ಬುದ್ಧಿಯ ಮೇಲೆ ಅವಲಂಬಿತವಾಗಿದೆ. ಗತ್ಯಂತರವಿಲ್ಲದೇ ವಿರೋಧ ಪಕ್ಷದವರು ಪ್ರತಿಭಟಿಸಬೇಕಾಗುತ್ತದೆ. ಆದಕಾರಣ ವಿರೋಧ ಪಕ್ಷದವರನ್ನು ಪ್ರತಿಭಟನೆಯ ಮನೋಭಾವದಲ್ಲೇ ಇರುವಂತೆ ಮಾಡುವುದು ಸರ್ಕಾರಕ್ಕೆ ತಂತ್ರಗಾರಿಕೆಯ ದೃಷ್ಟಿಯಿಂದ ಹೆಚ್ಚು ಉಪಯುಕ್ತ. ಆದ್ದರಿಂದ, ಸರ್ಕಾರವನ್ನು ಹದ್ದುಬಸ್ತಿನಲ್ಲಿಡಲು ಸಾಕಷ್ಟು ಪರಿಣಾಮಕಾರಿಯಾದ ಕಾರ್ಯನಿರ್ವಹಿಸಿಲ್ಲ ಎಂದು ವಿರೋಧ ಪಕ್ಷದ ಸಂಸದರನ್ನು ಪ್ರಶ್ನಿಸಬೇಕು. ಸರ್ಕಾರವು ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಸರ್ಕಾರವನ್ನು ನಾವು ಆಕ್ರಮಣಕಾರಿಯಾಗಿ ಪ್ರಶ್ನಿಸಬೇಕಾಗುತ್ತದೆ. ನಮಗೆ ಪ್ರಜಾಪ್ರಭುತ್ವದಲ್ಲಿ ಯಾವ ರೀತಿಯ ಬದ್ಧತೆ ಇದೆ ಎಂಬುದರ ಮೇಲೆ ಸಂಸತ್ತು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ನಾವು ಅದನ್ನು ಮಾಡದಿದ್ದರೆ, ಸಂಸತ್ತು ದುರ್ಬಲವಾಗಿ ಕುಸಿದು ಬೀಳುತ್ತದೆ.

ಕೆಟ್ಟ ಕನಸನ್ನು ಕೊನೆಗೊಳಿಸುವುದು

ಇದಕ್ಕೆ ಉತ್ತರವಾಗಿ, ಹಲವಾರು ನಾಗರಿಕರು ಕೂಡ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ, ಈ ವಿಚಾರದಲ್ಲಿ ಏನಾದರೂ ಮಾಡಲು ಸಾಧ್ಯವೇ, ಈ ಕಳವಳಕಾರಿ ಪ್ರವೃತ್ತಿಗಳನ್ನು ತಡೆಯಲು ಸಾಧ್ಯವೇ ಎಂದು ಕೇಳುತ್ತಿದ್ದಾರೆ. ನಿಜಕ್ಕೂ, ಅದು ಕಷ್ಟಕರ ಕೆಲಸವೇ ಸರಿ. ಆದರೆ ಪರಿಸ್ಥಿತಿ ಅಪಾಯಕಾರಿ ಮಟ್ಟ ತಲುಪಿದೆ ಎಂಬುದನ್ನು ಒಪ್ಪಿಕೊಂಡು ಮುಂದುವರಿಯಬೇಕಿದೆ. ತೀರಾ ಅವನತಿಯ ಸ್ಥಿತಿಯಲ್ಲಿದೆ. ಅದು ಈಗಿನ ಆಡಳಿತದಲ್ಲಿ ಆರಂಭವಾದದ್ದಲ್ಲ, ಆದರೆ ಅದು ವೇಗ ಪಡೆದದ್ದು ಇವರ ಕಾಲದಲ್ಲಿ. ಈ ಪರಿಸ್ಥಿತಿಯನ್ನು ಹೇಗೆ ಸರಿಪಡಿಸಬಹುದು ಎನ್ನುವುದಕ್ಕೆ ಸುಲಭದ ಉತ್ತರವಿಲ್ಲ, ನಾಗರಿಕರು ತಮ್ಮ ಸಂಸ್ಥೆಗಳ ದುಃಸ್ಥಿತಿಯ ಬಗ್ಗೆ ಸ್ವಲ್ಪವಾದರೂ ಕಾಳಜಿ ವಹಿಸಿದರೆ, ಸಾಧ್ಯವಿದೆ. ಚುನಾವಣೆಯ ಸಮಯದಲ್ಲಿ ಮಾತ್ರ ಸರ್ಕಾರವು ಸ್ಪಂದಿಸುತ್ತದೆ. ಸಂಸತ್ತಿನ ಅವನತಿಯ ವಿಷಯವನ್ನು ನಾವು ಒಂದು ರಾಜಕೀಯ ವಿಷಯವನ್ನಾಗಿ ಕೈಗೆತ್ತಿಕೊಂಡರೆ ಸರ್ಕಾರ ಅಷ್ಟು ಸುಲಭವಾಗಿ ಅದನ್ನು ಕಡೆಗಣಿಸಲಾರದು. ಕೊನೆಗಾಣದ

ವಿಡಿಯೋ ನೋಡಿಗಣತಂತ್ರ 75 : ಎತ್ತ ಚಲಿಸುತ್ತಿದೆ ಭಾರತ | ಸಂಸತ್ತು ನಡೆದ ಬಂದ ದಾರಿ – ವಿಶ್ಲೇಷಣೆ : ಬಿ.ಎಲ್. ಶಂಕರ್

 

 

Donate Janashakthi Media

Leave a Reply

Your email address will not be published. Required fields are marked *