‘ಉದ್ಯೋಗ, ವೇತನ ಹಾಗೂ ಅಭಿವೃದ್ಧಿ’ಯ ಗ್ಯಾರೆಂಟಿ ಚೆಕ್

ಬೆಂಗಳೂರು: ದೇಶದಲ್ಲಿ ಪ್ರಸಕ್ತ 25 ವರ್ಷದೊಳಗಿನ ಶೇ.47ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಹಸಿವು ಮತ್ತು ಸಾವಿನ ಭಯದಿಂದ ಸ್ವ-ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ‘ಬಹುತ್ವ ಕರ್ನಾಟಕ ಸಂಘಟನೆ’ಯು ‘ಉದ್ಯೋಗ, ವೇತನ ಹಾಗೂ ಅಸಮತೆ’ ಎಂಬ ಶೀರ್ಷಿಕೆಯಡಿ ‘ಗ್ಯಾರೆಂಟಿ ಚೆಕ್’ ವರದಿಯನ್ನು ಪ್ರಕಟಿಸಿದೆ. ಉದ್ಯೋಗ

ವರದಿಯಲ್ಲಿ ಪ್ರಸ್ತುತಪಡಿಸಲಾದ ಎಲ್ಲ ಅಂಕಿ ಅಂಶಗಳು ಮತ್ತು ವಿಶ್ಲೇಷಣೆಯು ಸಾರ್ವಜನಿಕವಾಗಿ ಲಭ್ಯವಿರುವ ಸರಕಾರಿ ದತ್ತಾಂಶವನ್ನು ಆಧರಿಸಿದೆ. ಪಿರಿಯಾಡಿಕ್ ಲೇಬರ್ ಫೋರ್ಸ್ ಸಮೀಕ್ಷೆ ಮತ್ತು ಈಗ ಸ್ಥಗಿತಗೊಂಡಿರುವ ಉದ್ಯೋಗ-ನಿರುದ್ಯೋಗ ಸಮೀಕ್ಷೆಯಿಂದ ದತ್ತಾಂಶವನ್ನು ಬಳಸಲಾಗಿದೆ ಎಂದು ಬಹುತ್ವ ಕರ್ನಾಟಕ ಸಂಘಟನೆ ಸ್ಪಷ್ಟಪಡಿಸಿದೆ. ಉದ್ಯೋಗ

ಬಿಜೆಪಿ 2019ರ ಚುನಾವಣಾ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಕನಿಷ್ಠ ವೇತನದಲ್ಲಿ ಶೇ.42 ಬೆಳವಣಿಗೆ ಕಂಡುಬಂದಿದ್ದು, ಕಾರ್ಮಿಕರ ಗೌರವಯುತ ಜೀವನವನ್ನು ಖಚಿತಪಡಿಸಿಕೊಳ್ಳಲು ಮುಂದಿನ ಐದು ವರ್ಷಗಳಲ್ಲಿ ಅದೇ ದಾರಿಯಲ್ಲಿ ಸಾಗುತ್ತೇವೆ ಎಂದು ಘೋಷಿಸಿತ್ತು. ಆದರೆ, ವಾಸ್ತವದಲ್ಲಿ ಕಾರ್ಮಿಕರ ವೇತನಗಳು ಸ್ಥಗಿತಗೊಂಡಿವೆ. ಕಾರ್ಮಿಕ ಹಾಗು ಉದ್ಯೋಗ ಸಚಿವಾಲಯವು ನೇಮಿಸಿದ ಅನೂಪ್ ಸತ್ಪತಿ ಸಮಿತಿಯು ಭಾರತದಲ್ಲಿ ಮೂಲ ವೇತನವು ದಿನಕ್ಕೆ ಕನಿಷ್ಠ 375 ರೂ. ಇರಬೇಕೆಂದು ಸೂಚಿಸಿತ್ತು. ಆದರೆ ಈಗಲೂ ಅದು 178 ರೂ. ಇದೆ. ಸುಮಾರು 30 ಕೋಟಿ ಜನರು ಮೂಲ ವೇತನಕ್ಕಿಂತಲೂ ಕಡಿಮೆ ಗಳಿಸುತ್ತಿದ್ದಾರೆ ಎಂದು ವರದಿ ಬಹಿರಂಗಗೊಳಿಸಿದೆ. ಉದ್ಯೋಗ

ವರದಿಯ ಮುಖ್ಯ ಅಂಶಗಳು 

1.ಉದ್ಯೋಗ ಸೃಷ್ಟಿ 

ಒಕ್ಕೂಟ ಸರ್ಕಾರದ ಸಮರ್ಥನೆ 

  • ನಮ್ಮನ್ನು ಆಯ್ಕೆ ಮಾಡಿದರೆ ಪ್ರತಿವರ್ಷ 2 ಕೋಟಿಯಷ್ಟು ಉದ್ಯೋಗಳನ್ನು ಸೃಷ್ಟಿಸುತ್ತೇವೆ
  • ಬಿಜೆಪಿ ಯು 2019 ಪ್ರಣಾಳಿಕೆಯಲ್ಲಿ ಹೇಳಿದ್ದು : ಮಹಿಳೆಯರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನಾವು ಕೈಗಾರಿಕೆಗಳು ಮತ್ತು ಕಾರ್ಪೊರೇಟ್‌ಗಳನ್ನು ಪ್ರೋತ್ಸಾಹಿಸುತ್ತೇವೆ.

ವಾಸ್ತವ 

  • 25 ವರ್ಷದೊಳಗಿನ ಶೇ.47ಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ.
  • 2011-12 ಹಾಗೂ 2022-23 ರ ನಡುವಿನ ಹತ್ತು ವರ್ಷಗಳ ಅವಧಿಯಲ್ಲಿ ಸ್ವಉದ್ಯೋಗಿಗಳ ಪ್ರಮಾಣ ಹೆಚ್ಚಾಗಿದೆ. ಅರ್ಧಕ್ಕಿಂತಲೂ ಹೆಚ್ಚು ಪುರುಷರು ಮತ್ತು ಮೂರರಲ್ಲಿ ಎರಡು ಭಾಗಕ್ಕಿಂತ ಹೆಚ್ಚು ಮಹಿಳೆಯರು ಈಗ ‘ಸ್ವ-ಉದ್ಯೋಗಿಗಳು’- ಇದರಲ್ಲಿ ಗ್ರಾಮೀಣ ನೇಕಾರರು, ಕೃಷಿಕಾರರು, ಕುಂಬಾರರು, ನಗರಗಳ ಬೀದಿ ಬದಿ ವ್ಯಾಪಾರಿಗಳು, ದರ್ಜಿಗಳು, ಕ್ಷೌರಿಕರು ಮೊದಲಾದವರೆಲ್ಲರೂ ಸೇರಿದ್ದಾರೆ. ಜೊತೆಗೆ ಗೃಹಾಧರಿತ ಸಣ್ಣ ಉದ್ಯಮಗಳಲ್ಲಿ ತೊಡಗಿರುವ ವೇತನರಹಿತ ಕೆಲಸಗಾರರೂ ಇದೇ ವರ್ಗಕ್ಕೆ ಬರುತ್ತಾರೆ
  • ಆದಾಯ ಇಲ್ಲದೆ ಕುಟುಂಬದ ಕೆಲಸದಲ್ಲೇ ಸಹಾಯಕರಾಗಿ ತೊಡಗಿಸಿಕೊಂಡ ಮಹಿಳೆಯರ ಪ್ರಮಾಣ ಐದು ವರ್ಷಗಳ ಹಿಂದೆ ಪ್ರತಿ 4 ಮಹಿಳೆಯರಿಗೆ ಒಬ್ಬರಿದ್ದರೆ, ಈಗ ಪ್ರತಿ 3 ಮಹಿಳೆಯರಿಗೆ ಒಬ್ಬರಾಗಿದ್ದಾರೆ
  • ಹಸಿವು ಮತ್ತು ಸಾವಿನ ಭಯದಿಂದ ಸ್ವಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ

2.ವೇತನ 

ಒಕ್ಕೂಟ ಸರ್ಕಾರದ ಸಮರ್ಥನೆ 

  • ಬಿಜೆಪಿ ಯಾ 2019 ಪ್ರಣಾಳಿಕೆಯಲ್ಲಿ ಹೇಳಿದ್ದು – “ನಮ್ಮ ಸರ್ಕಾರದ ಅಡಿಯಲ್ಲಿ, ರಾಷ್ಟ್ರೀಯ ಕನಿಷ್ಠ ವೇತನದಲ್ಲಿ 42% ಬೆಳವಣಿಗೆ ಕಂಡುಬಂದಿದೆ. ಕಾರ್ಮಿಕರ ಗೌರವಯುತ ಜೀವನವನ್ನು ಖಚಿತಪಡಿಸಿಕೊಳ್ಳಲು ನಾವು ಮುಂದಿನ ಐದು ವರ್ಷಗಳಲ್ಲಿ ಅದೇ ದಾರಿಯಲ್ಲಿ ಸಾಗುತ್ತೇವೆ

ವಾಸ್ತವ 

  • ವಾಸ್ತವದಲ್ಲಿ ( ಅಂದರೆ inflation ನ ಸಹ ಗಮನದಲ್ಲಿಟ್ಟುಕೊಂಡು ) ನೋಡಿದರೆ , ವೇತನಗಳು ( ಸ್ವ ಉದ್ಯೋಗ , ಕೂಲಿ ಕಾರ್ಮಿಕರು ಹಾಗು ರೆಗ್ಯುಲರ್ ವೇಜ್ ) ಸ್ಥಗಿತಗೊಂಡಿವೆ
  • ಒಕ್ಕೂಟ ಸರ್ಕಾರದ , ಕಾರ್ಮಿಕ ಹಾಗು ಉದ್ಯೋಗ ಸಚಿವಾಲಯವು ನೇಮಿಸಿದ ಅನೂಪ್ ಸತ್ಪತಿ ಅವರ ನೇತೃತ್ವದ, 2019ರ ಕೂಲಿ/ವೇತನ ಕುರಿತ ತಜ್ಞರ ಸಮಿತಿಯು ಭಾರತದಲ್ಲಿ ಮೂಲ ವೇತನವು ದಿನಕ್ಕೆ ಕನಿಷ್ಠ 375 ರೂಪಾಯಿ ಇರಬೇಕೆಂದು ಸೂಚಿಸಿತ್ತು( national minimum floor wages ), ಆದರೆ ಈಗಲೂ ಸಹ national minimum floor wages ರು 178 ಆಗೇ ಉಳಿದಿದೆ
  • ಸುಮಾರು 30 ಕೋಟಿ ಜನರು ಮೂಲ ವೇತನಕ್ಕಿಂತಲೂ ಕಡಿಮೆ ( ದಿವಸಕ್ಕೆ 375 ರು ಗೂ  ಕಡಿಮೆ ) ಗಳಿಸುತ್ತಿದ್ದಾರೆ
  • 10ರಲ್ಲಿ 9 ಜನ ದಿನಗೂಲಿ ಕೆಲಸಗಾರರು, 5ರಲ್ಲಿ 3 ಜನ ಸ್ವಉದ್ಯೋಗಿಗಳು, ಸುಮಾರು ಅರ್ಧದಷ್ಟು ನಿಗಧಿತ ವೇತನ ಗಳಿಸುವ ನೌಕರರು ಮೂಲ ವೇತನಕ್ಕಿಂತಲೂ ಕಡಿಮೆ ( ದಿವಸಕ್ಕೆ 375 ರು ಗೂ  ಕಡಿಮೆ ) ಗಳಿಸುತ್ತಿದ್ದಾರೆ. ಉದ್ಯೋಗ

3. ಸರ್ವರಿಗೂ ಅಭಿವೃದ್ಧಿ 

ಸರ್ಕಾರದ ಸಮರ್ಥನೆ : ಸಬ್ ಕಾ ಸಾಥ್ ಸಬ್ ಕಾ ವಿಕಾಸ್ 

ವಾಸ್ತವ 

  • ಕಳೆದ 10 ವರ್ಷಗಳಲ್ಲಿ ತಲಾವಾರು GDP 60% ರಷ್ಟು ಹೆಚ್ಚಾಗಿದೆ. ಆದರೆ ಅದರಿಂದ ಶ್ರೀಮಂತರು ಉದ್ದಾರ ಆಗುತ್ತಿದ್ದಾರೆ ಹೊರತು ಬಡವರಲ್ಲ
  • 2012ರಲ್ಲಿ ಅತಿ ಶ್ರೀಮಂತರು  ಶೇ.10%ರಷ್ಟು ಜನರು ದೇಶದ ಒಟ್ಟು ಸಂಪತ್ತಿನಲ್ಲಿ ಶೇ,63% ಅನ್ನು ಹೊಂದಿದ್ದರು. 2022ರಲ್ಲಿ ಈ ಪ್ರಮಾಣ ಶೇ.64.5%ಕೆ ಏರಿದೆ. 2012ರಲ್ಲಿ ಸಾಮಾನ್ಯವರ್ಗಕ್ಕೆ ಸೇರಿದ  ಶೇ.50%ಷ್ಟು ಜನರು ದೇಶದ ಒಟ್ಟು ಸಂಪತ್ತಿನಲ್ಲಿ ಶೇ.6.1% ಭಾಗ ಹೊಂದಿದ್ದರು. 2022ರಲ್ಲಿ ಈ ಪ್ರಮಾಣ ಶೇ.5.6% ಗೆ  ಇಳಿದಿದೆ.

ಪ್ರಜೆಗಳ ಅಭಿವೃದ್ಧಿಗೆ ವಿರುದ್ಧವಾಗಿ ಹೋಗುತ್ತಿರುವ ಸರ್ಕಾರ 

ವೇತನಗಳು ಸ್ಥಗಿತಗೊಂಡ ಸಮಯದಲ್ಲಿ ಸರ್ಕಾರ ಕೆಳಗಿನ ಹಕ್ಕುಗಳ ಪೂರೈಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಿತ್ತು 

1.     ಎಲ್ಲರಿಗೂ ಆಹಾರದ ಹಕ್ಕು

2.     ಎಲ್ಲರಿಗೂ ಉದ್ಯೋಗ, ಜೀವನ ವೇತನ ಮತ್ತು ಸಮಯಕ್ಕೆ ಸರಿಯಾಗಿ ವೇತನ ಪಾವತಿಯ ಹಕ್ಕು

3.     ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳ ಹಕ್ಕು

4.     ಉಚಿತ ಮತ್ತು ಗುಣಮಟ್ಟದ ಶಿಕ್ಷಣದ ಹಕ್ಕು

5.     ನಿವೃತ್ತಿ ವೇತನದ ಹಕ್ಕು

ಕೇಂದ್ರ ಸರಕಾರದ ಈ ವರ್ಷದ ಬಜೆಟ್ ಹಂಚಿಕೆಗಳು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿವೆ. ಐದು ಸಾಮಾಜಿಕ ವಲಯದ ಯೋಜನೆಗಳ(ನರೇಗಾ, ಎನ್‍ಎಸ್‍ಎಪಿ, ಮಧ್ಯಾಹ್ನದ ಊಟ, ಐಸಿಡಿಎಸ್ ಮತ್ತು ಪಿಎಂಎಂವಿವೈ) ಬಜೆಟ್ ಹಂಚಿಕೆಯು ಜಿಡಿಪಿಯ ಶೇ.0.40ರಷ್ಟು ಮಾತ್ರ ಇದೆ ಎಂದು ವರದಿ ತಿಳಿಸಿದೆ.

ವಿಡಿಯೋ ನೋಡಿಕಳೆದ ಹತ್ತು ವರ್ಷಗಳಲ್ಲಿನ ಮತ ಧರ್ಮಾಂದತೆಯ ದ್ವೇಷ, ಹಿಂಸೆ ಘಟನೆಗಳ ವಿವರಗಳು, ಇದು ರಾಮರಾಜ್ಯವೇ ಮೋದೀಜಿ?

 

Donate Janashakthi Media

Leave a Reply

Your email address will not be published. Required fields are marked *