ಹೆಚ್ಚಿದ ಕಾಲರಾ ಪ್ರಕರಣ: ಸಲಹೆ ನೀಡಿದ ವೈದ್ಯರು, ಬಿಬಿಎಂಪಿಯಿಂದ ಆದೇಶ

ಬೆಂಗಳೂರು: ಬೆಂಗಳೂರು ನಗರದಲ್ಲಿ ಕಾಲರಾ ಪ್ರಕರಣಗಳು ಶೇ.40 ರಷ್ಟು ಹೆಚ್ಚಳವಾಗಿದ್ದು, ಮುನ್ನೆಚ್ಚರಿಕೆ ವಹಿಸುವಂತೆಸಾರ್ವಜನಿಕರಿಗೆ ವೈದ್ಯರು ಸಲಹೆ ನೀಡಿದ್ದು, ಇತ್ತ ಕೆಫೆ ಹೊಟೇಲ್‌ಗಳಿಗೆ ಬಿಬಿಎಂಪಿ ಆದೇಶ ನೀಡಿದೆ. ಕಾಲರಾ ಪ್ರಕರಣ

ನೀರಿನ ಕೊರತೆ, ಏರುತ್ತಿರುವ ತಾಪಮಾನ ಬತ್ತುತ್ತಿರುವ ಜಲಮೂಲಗಳ ಪರಿಣಾಮ ಕಲುಷಿತ ನೀರು ನೈರ್ಮಲ್ಯದ ಕೊರತೆಯಾಗಿದೆ. ಇದರ ಪರಿಣಾಮದಿಂದಾಗಿ ಕಾಲರಾ ಪ್ರಕಣಗಳು ಹೆಚ್ಚುತ್ತಿವೆ.ಆರೋಗ್ಯ ಮತ್ತು ಬಿಬಿಎಂಪಿ ಮೂಲಗಳ ಪ್ರಕಾರ ಬೆಂಗಳೂರು ನಗರದಲ್ಲಿ ಶೇ.40ರಷ್ಟು ಪ್ರಕರಣಗಳು ಏರಿಕೆಯಾಗಿವೆ. ಕಾಲರಾ ಪ್ರಕರಣ

ಹೆಚ್ಚಿದ ಕಾಲರಾ ಪ್ರಕರಣ: ಸಲಹೆ ನೀಡಿದ ವೈದ್ಯರು, ಬಿಬಿಎಂಪಿಯಿಂದ ಆದೇಶಕಲುಷಿತ ನೀರು, ನೈರ್ಮಲ್ಯ ಕೊರತೆ ಮತ್ತು ಸ್ವಚ್ಛತೆ ಕಾಪಾಡದೇ ಮಾಡಿದ ಆಹಾರ ಸೇವನೆಯಿಂದ ಕಾಲರಾ ಮತ್ತು ವಾಂತಿಬೇಧಿ ಪ್ರಕರಣಗಳು ಹೆಚ್ಚಾಗುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ತಿಂಗಳಿಗೆ ಒಂದೆರಡು ಪ್ರಕರಣಗಳು ದಾಖಲಾಗುತ್ತಿದ್ದವು. ಈಗ 6-7 ಪ್ರಕರಣಗಳು ದಾಖಲಾಗುತ್ತಿವೆ.ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕಾಲರಾದಿಂದ ಒಂದು ಸಾವಾಗಿರುವುದು ದೃಢಪಟ್ಟಿದ್ದು, ಎರಡು ಶಂಕಿತ ಪ್ರಕರಣಗಳು ಕಂಡು ಬಂದಿವೆ. ಈ ಪ್ರಕರಣಗಳು ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಲೇಶ್ವರಂನ ಪಿಜಿಯಲ್ಲಿರುವ ಬೆಳ್ಳಂದೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಯುವತಿಯೊಬ್ಬರಿಗೆ ಕಾಲರಾ ದೃಢಪಟ್ಟಿದೆ ಎಂದು ಬಿಬಿಎಂಪಿ ಮೂಲಗಳು ಖಚಿತಪಡಿಸಿವೆ. ಕಾಲರಾ ಪ್ರಕರಣ

ಸಂಭವನೀಯ ಕಾಲರಾ ಏಕಾಏಕಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಎಡೆಮಾಡಿದೆ. ಹೀಗಾಗಿ ಮೃತ ಪ್ರಕರಣ ದಾಖಲಾದ ಬಳಿಕ ಬೆಂಗಳೂರು ನಗರದಲ್ಲಿ ಕಾಲರಾ ಭೀತಿ ಉಲ್ಭಣಿಸಿದೆ,ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಗತ್ಯ ತುರ್ತು ಕ್ರಮಕ್ಕೆ ಮುಂದಾಗಿದೆ.ರೋಗ ಹರುಡುವಿಕೆಯನ್ನು ನಿಭಾಯಿಸಲು ವಿಧಾನಸಭಾ ಕ್ಷೇತ್ರವಾರು/ಕ್ಷೇತ್ರ ಮಟ್ಟದಲ್ಲಿ ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ರಚಿಸಲು ಎಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ವೈದ್ಯಾಧಿಕಾರಿಗಳಿಗೆ ಸೂಚಿಸಿದೆ.ಎಲ್ಲಾ ಹೋಟೆಲ್‌ಗಳು/ರೆಸ್ಟೋರೆಂಟ್ಗಳು/ಕೆಫೆಗಳ ಮಾಲೀಕರಿಗೆ, ಗ್ರಾಹಕರಿಗೆ ಕುಡಿಯಲು ಕಾಯಿಸಿದ ನೀರನ್ನು ವಿತರಿಸಲು ಸಲಹೆ ನೀಡಿದೆ.ಪಾಲಿಕೆಯ ವ್ಯಾಪ್ತಿಯ ಎಲ್ಲಾ ಖಾಸಗಿ ಆಸ್ಪತ್ರೆ, ಖಾಸಗಿ ಲ್ಯಾಬ್‌ಗಳು ಮತ್ತು ಸರ್ಕಾರಿ ಆಸ್ಪತ್ರೆಗಳಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕ ಆಸ್ಪತ್ರೆ, ಜನರಲ್ ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಅಡಿಯಲ್ಲಿ ಬರುವ ಆಸ್ಪತ್ರೆಗಳು ಶಂಕಿತ ಪ್ರಕರಣಗಳು ವರದಿಯಾದ್ದಲ್ಲಿ ಸರ್ಕಾರ ನಿಗಧಿಪಡಿಸಿರುವ ಐ.ಹೆಚ್.ಐ.ಪಿ (IHIP) ತಂತ್ರಾಶದಲ್ಲಿ ಕಡ್ಡಾಯವಾಗಿ ವರದಿ ಮಾಡುವಂತೆ ಸೂಚಿಸಿದೆ.ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ವಿಶ್ಲೇಷಣೆಗಾಗಿ ನೀರಿನ ಮಾದರಿಗಳನ್ನು ಹಿರಿಯ ಆರೋಗ್ಯ ಪರಿವೀಕ್ಷಕರು ಸಂಗ್ರಹಿಸಿ PHI ಲ್ಯಾಬ್‌ಗೆ ಪ್ರತಿನಿತ್ಯ ಕಳುಹಿಸಲು ಸೂಚಿಸಲಾಗಿದೆ. ಕಾಲರಾ ಪ್ರಕರಣ

ಇದನ್ನು ಓದಿ : ಈಶ್ವರಪ್ಪ-ಅಮಿತ್ ಶಾ ಭೇಟಿಯಾಗದ ಬಗ್ಗೆ ಪ್ರತಿಕ್ರಿಯಿಸಲು ಸಿ.ಟಿ.ರವಿ ನಕಾರ

ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ORS ಕಾರ್ನರ್‌ ಗಳನ್ನು ಸ್ಥಾಪಿಸುವ ಮೂಲಕ ಆಸ್ಪತ್ರೆಗೆ ಬರುವ ಹೊರರೋಗಿಗಳಲ್ಲಿ ಜಾಗೃತಿ ಮೂಡಿಸುವುದು ಹಾಗೂ ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟುವ ಬಗ್ಗೆ ಆರೋಗ್ಯ ಶಿಕ್ಷಣ ಸಲಹೆ ನೀಡಿದೆ. ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ರಸ್ತೆ ಬದಿಯ ಆಹಾರ ಪದಾರ್ಥಗಳನ್ನು ಸೇವಿಸದೇ ಇರುವದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಕಾಲರಾ ಪ್ರಕರಣ

ಬೇಸಿಗೆಯಲ್ಲಿ ಈ ಪ್ರಕರಣಗಳು ಸರ್ವೇ ಸಾಮಾನ್ಯ. ಬಿಸಿಲು ಸ್ವಾಭಾವಿಕ ಕಾರಣವಾದರೆ ಕಲುಷಿತ ನೀರಿನ ಬಳಕೆ ಮತ್ತು ಆಹಾರ ಪದಾರ್ಥ, ಸಣ್ಣ ಸಣ್ಣ ಹೋಟೆಲ್ ಗಳು, ರಸ್ತೆ ಬದಿಯ ತಳ್ಳುವ ಗಾಡಿಗಳ ಊಟತಿಂಡಿಯಿಂದಲೂ ಕಾಲರಾ ಹರಡುತ್ತಿದೆ. ಸ್ವಚ್ಚ ನೀರು ದುರ್ಲಭವಾಗಿದ್ದು, ಕಲುಷಿತ ನೀರನ್ನೇ ಬಳಸುತ್ತಿದ್ದಾರೆ. ಇದರಿಂದಲೂ ಕಾಲರಾ ಉಲ್ಬಣಗೊಳ್ಳಲು ಸಾಧ್ಯತೆಗಳಿವೆ ಎಂದು ವೈದ್ಯರು ಹೇಳುತ್ತಾರೆ. ಕಾಲರಾ ಪ್ರಕರಣ

ಮುನ್ನೆಚ್ಚರಿಕೆಯ ಕ್ರಮಗಳು

1) ನೀರನ್ನು ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು.
2) ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.
3) ಹಣ್ಣು ಮತ್ತು ತರಕಾರಿಯನ್ನು ತೊಳೆದು ಬಳಸಬೇಕು.
4) ಒಂದು ವೇಳೆ ವಾಂತಿ ಅಥವಾ ಬೇಧಿ ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು

ಇದನ್ನು ನೋಡಿ : 2024ರ ಚುನಾವಣೆಯಲ್ಲಿ BJP ಸೋಲಲಿದೆ, INDIA ಕೂಟ ಅಧಿಕಾರಕ್ಕೆ ಬರುತ್ತದೆ- ಬಿ ಕೆ ಹರಿಪ್ರಸಾದ್ Janashakthi Media

Donate Janashakthi Media

Leave a Reply

Your email address will not be published. Required fields are marked *