ತೋರಣಗಲ್ಲು : ಬಳ್ಳಾರಿ ರೈಲ್ವೆ ನಿಲ್ದಾಣ ದಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ವರಗೆ ಪ್ರಯಾಣಿಕರ ರೈಲುಗಳನ್ನು ಸಮಯ ಬೆಳಿಗ್ಗೆನ ಸಮಯದಲ್ಲಿ ಹೆಚ್ಚಿಸಲು ಮತ್ತು ನಿಲ್ಲದೆಯಿರುವ ರೈಲುಗಳನ್ನು ನಿಲ್ಲುಸಲು ಒತ್ತಾಯಿಸಿ ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ ಹಾಗೂ ರೈಲ್ವೇ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಇದನ್ನೂ ಓದಿ : ಹೊಸಪೇಟೆ | ಜ.19ರಿಂದ ಧರಣಿ: ದೇವದಾಸಿಯರ ವಿಮೋಚನಾ ಸಂಘ
ನಮ್ಮ ಗಣಿ ನಾಡಿನ ಬಳ್ಳಾರಿ ಜಿಲ್ಲೆ ಅದು ತೋರಣಗಲ್ಲು ಆರ್ ಎಸ್ ಸುತ್ತಮುತ್ತಲಿನ ಹಳ್ಳಿಗಳು ಕೈಗಾರಿಕಾ ಪ್ರದೇಶಗಳಿಂದ ಕೂಡಿದ್ದು ಗುಂತಕಲ್ ಯಿಂದ ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ ಮಾರ್ಗವಾಗಿ ಹೊರಡುವ ರೈಲು ಕೇವಲ ಬೆಳಗಿನ ಸಮಯ ಬೆಳಿಗ್ಗೆನ 8.00 ಗಂಟೆ ಕೊನೆಯ ರೈಲು ಮಾತ್ರ ಸಂಚರಿಸುತ್ತದೆ. ಇದರಿಂದ ದಿನಗೂಲಿ ಕಾರ್ಮಿಕರು, ನೌಕರರು, ವ್ಯಾಪಾರಿಗಳು ಸೇರಿದಂತೆ ಜನಸಾಮಾನ್ಯರಿಗೆ ಪ್ರಯಾಣ ಮಾಡಲು ನಂತರದಲ್ಲಿ ಯಾವುದೇ ರೈಲುಗಳು ಇರುವುದಿಲ್ಲ. ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸಮಯ ಬೆಳಿಗ್ಗೆ 11.00 ವೇಳೆ ರೈಲುಗಳ ಸಂಚಾರ ಹೆಚ್ಚು ಮಾಡಬೇಕು. ಪ್ರಯಾಣಿಕರಿಗೆ ಅನುಕೂಲಕವಾಗುವಂತೆ ವ್ಯವಸ್ಥೆ ಮಾಡಿಕೊಡಬೇಕು ಈಗಾಗಲೇ ಮನಗುರ್ ಯಿಂದ ಕೋಲ್ಲಾಪುರ ಡೈಲಿ ರೈಲು ರದ್ದು ಮಾಡಲಾಗಿದ್ದು ಇದನ್ನು ಪುನ ಪ್ರಾರಂಭ ಮಾಡಬೇಕು ಯಶವಂತಪುರ to ನಿಜಾಮುದ್ದಿನ ಸಂಪರ್ಕ ಕ್ರಾಂತಿ ರಾತ್ರಿ 12 ಗಂಟೆ ಹುಬ್ಬಳ್ಳಿ to ಚೆನ್ನೆ ರಾತ್ತಿ 1 ಡೈಲಿ ಶಿರಡಿ ರೈಲುಗಳನ್ನು ಸ್ಟಾಪ್ ಮಾಡಬೇಕೆಂದು ಈ ಮೂಲಕ ಮಾನ್ಯ ಸಂಸದರು ಸೋಮಣ್ಣ ಮತ್ತು ಈ ತುಕರಾಂ ಇವರಲ್ಲಿ ಹಾಗೂ ರೈಲ್ವೆ ಅಧಿಕಾರಿಗಳು SMR ಪಿ.ಶಿವಶಂಕರರೆಡ್ಡಿ ಗೆ ಮನವಿ ಮಾಡಲಾಯಿತು..
ಈ ಸಂದರ್ಭದಲ್ಲಿ ವಿ.ದೇವಣ್ಣ CWFI ಜಿಲ್ಲಾ ಸಂಚಾಲಕರು, ಸ್ವಾಮಿ DYFI ಜಿಲ್ಲಾ ಕಾರ್ಯದರ್ಶಿ, ಲೋಕೇಶ್ ಗ್ರಾಮ ಘಟಕದ ಕಾರ್ಯದರ್ಶಿ, ದಲಿತ ಯುವಕರ ಸಂಘದ ಅಧ್ಯಕರು ನಾಗಭೂಷಣ, ಕಾರ್ಯದರ್ಶಿ ಪಾಲ್ ಪಕ್ಕೀರ್, Kprs ತಾಲ್ಲೂಕು ಅಧ್ಯಕ್ಷರು ಪಂಪನಗೌಡ, CITU ತಾಲ್ಲೂಕು ಮುಖಙಡರಾದ ಕೆ.ದೇವಣ್ಣ,CD ಹಾಲ ಸ್ವಾಮಿ ಇತರರು ಭಾಗವಹಿಸಿದ್ದರು.
ಇದನ್ನೂ ನೋಡಿ : ಸಾವಿತ್ರಿಬಾಯಿ ಫುಲೆ ಹುಟ್ಟಿದ ದಿನ : ಅವ್ವ ಕವಿತೆ | ಕವಿ : ಆದಿತ್ಯ , ವಾಚನ : ರಾಗಿಣಿ ಮಾಲೂರು Janashakthi Media
