ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಹೆಚ್ಚಳ: ಶೇ. 10 ಅಥವಾ 20ರಷ್ಟು ಶುಲ್ಕ ಹೆಚ್ಚಿಸಿದ್ದೇವೆ – ದಿನೇಶ್ ಗುಂಡೂರಾವ್

ಬೆಂಗಳೂರು: ಬಿಎಂಸಿಆರ್‌ಐ ಅಡಿಯಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಈಗ ಸೇವಾ ಶುಲ್ಕ ಪಾವತಿಸಬೇಕೆಂದು ಎಂದು ಹೇಳಲಾಗಿದ್ದು, ಹಿಂದಿದ್ದ ದರದಲ್ಲಿ ಬದಲಾವಣೆ ತಂದಿರುವ ಆರೋಗ್ಯ ಇಲಾಖೆ, ವೈದ್ಯಕೀಯ ಶುಲ್ಕವನ್ನು ಹೆಚ್ಚಿಸಿದೆ .

ಈ ಪರಿಷ್ಕೃತ ದರಗಳು ವಿಕ್ಟೋರಿಯಾ ಆಸ್ಪತ್ರೆ, ವಾಣಿ ವಿಲಾಸ್ ಆಸ್ಪತ್ರೆ, ಮಿಂಟೋ ಹಾಸ್ಪಿಟಲ್‌, ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‌ ಮತ್ತು ಟ್ರಾಮಾ ಕೇರ್ ಕೇಂದ್ರಗಳು ಸೇರಿದಂತೆ ಪ್ರಮುಖ ಆಸ್ಪತ್ರೆಗಳಿಗೆ ಅನ್ವಯಿಸಲಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರಾಯಚೂರು | ಸರ್ಕಾರಿ ಶಾಲೆಗೆ ಮೀಸಲಿರಿಸಿದ ಜಾಗವನ್ನು ದೇವರ ಹೆಸರಲ್ಲಿ ಅಕ್ರಮ ಕಟ್ಟಡ ನಿರ್ಮಾಣ

ಕರ್ನಾಟಕ ಸರ್ಕಾರವು ನವೀಕರಿಸಿದ ಶುಲ್ಕಗಳನ್ನು ವಿವರಿಸುವ ಸುತ್ತೋಲೆಯನ್ನು ಈಗಾಗಲೇ ಹೊರಡಿಸಿದ್ದು, ತಕ್ಷಣವೇ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಪ್ರಮುಖ ಬದಲಾವಣೆಗಳು ಹೊರರೋಗಿ ವಿಭಾಗದ  ನೋಂದಣಿ ಪುಸ್ತಕ ಶುಲ್ಕ(OPD)ವನ್ನು 10 ರೂ.ನಿಂದ 20 ರೂ.ಗೆ ದ್ವಿಗುಣಗೊಳಿಸುವುದು ಮತ್ತು ಒಳರೋಗಿಗಳ ಪ್ರವೇಶ ಶುಲ್ಕವನ್ನು 25 ರೂ. ಬದಲಿಗೆ 50 ರೂ.ಗೆ ಹೆಚ್ಚಿಸಿದೆ. ರಕ್ತ ಪರೀಕ್ಷೆಯ ಶುಲ್ಕವು 70ರಿಂದ 120 ರೂ.ಗೆ ಏರಿಸಿದೆ. ವಾರ್ಡ್ ಶುಲ್ಕವನ್ನು 25ರಿಂದ 50 ರೂ.ಗೆ ಹೆಚ್ಚಿಸಲಾಗಿದೆ ಮತ್ತು ಆಸ್ಪತ್ರೆಯ ತ್ಯಾಜ್ಯ ನಿರ್ವಹಣೆ ಶುಲ್ಕಗಳು ಕಡಿದಾದ ಏರಿಕೆ ಕಂಡಿದೆ.

ಈ ಹೆಚ್ಚಳವು ಎಲ್ಲಾ ಸರ್ಕಾರಿ ಹಾಸ್ಪಿಟಲ್‌ಗಳ ವೈದ್ಯಕೀಯ ಸೇವಾ ಶುಲ್ಕಗಳಲ್ಲಿ ರಾಜ್ಯದ ಆದೇಶದಂತೆ ಶೇ.10ರಿಂದ 15ರಷ್ಟು ಹೆಚ್ಚಳದ ಭಾಗವಾಗಿದೆ. ಪರಿಷ್ಕೃತ ದರಗಳನ್ನು ಜಾರಿಗೆ ತಂದ ಸಾಲಿನಲ್ಲಿ ಬಿಎಂಸಿಆರ್‌ಐ ಸಂಸ್ಥೆಗಳು ಮೊದಲಿಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ‘ಹಲವು ವರ್ಷಗಳ ಹಿಂದೆಯೇ ನಿರ್ಧರಿಸಿದ ಬಳಕೆದಾರರ ಶುಲ್ಕವನ್ನು ಈಗ ಪರಿಷ್ಕರಿಸುತ್ತಿದ್ದೇವೆ. ಕೆಲವು ಪ್ರದೇಶಗಳಲ್ಲಿ ಶೇ. 10 ಅಥವಾ 20ರಷ್ಟು ಹೆಚ್ಚಿಸಿದ್ದೇವೆ’ ಎಂದಿದ್ದಾರೆ.

‘ಉದಾಹರಣೆಗೆ, 10 ರೂ.ಗಳಿದ್ದ ಶುಲ್ಕವನ್ನು 20 ರೂ.ಗೆ ಪರಿಷ್ಕರಿಸಲಾಗಿದೆ. 20 ರೂ.ಗಳಿದ್ದ ಶುಲ್ಕಗಳು ಈಗ 50 ರೂ., ಇವು ಕೈಗೆಟುಕುವ ಬೆಲೆಗಳು. ಆದ್ದರಿಂದ, ಇದೇನು ದೊಡ್ಡ ಸಮಸ್ಯೆಯೇನಲ್ಲ. ಹಿಂದಿನ ಸರ್ಕಾರಗಳು ಸಹ ನೀರಿನ ಬಿಲ್‌ಗಳು, ವಿದ್ಯುತ್ ಬಿಲ್‌ಗಳು ಮತ್ತು ಇತರ ಹಲವು ಸೇವೆಗಳಿಗೆ ಶುಲ್ಕವನ್ನು ಪರಿಷ್ಕರಿಸಿವೆ. ಈ ಹೋಲಿಕೆಯು ಅವಸ್ತುತವಾಗಿದೆ. ಏಕೆಂದರೆ ದರಗಳು ಹಲವು ವರ್ಷಗಳಿಂದ ಬದಲಾಗದೆ ಉಳಿದಿವೆ. ನಾವು ಅವುಗಳನ್ನು ಸ್ವಲ್ಪ ಹೆಚ್ಚಿಸಿದ್ದೇವೆ, ಅಷ್ಟೆ’ ಎಂದು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ನೋಡಿ : ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *