ರಾಯಚೂರು: ತರಾತುರಿಯಲ್ಲಿ ಅಪೂರ್ಣ ರಾಮಮಂದಿರ ಉದ್ಘಾಟನೆ ಮಾಡಲು ಹೊರಟಿರುವುದು ರಾಮನಿಗೂ ನೋವು ತಂದಿದೆ ಎಂದು ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. ಅಪೂರ್ಣ
ಇದನ್ನು ಓದಿ : ವಿಡಿಯೋ | ರಾಮ, ಸೀತೆ, ಲಕ್ಷಣ & ಹನುಮಂತನ ವೇಷ ಧರಿಸಿದ ಇಂಡಿಗೋ ವಿಮಾನದ ಕ್ಯಾಬಿನ್ ಸಿಬ್ಬಂದಿ!
ದೇವದುರ್ಗ ತಾಲೂಕಿನ ಸಂಸ್ಥಾನ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ವಿಚಾರದಲ್ಲಿ ಶಂಕರಾಚಾರ್ಯ ಪೀಠಗಳು ಅಪಸ್ವರ ಎತ್ತಿರುವುದು ಸರಿ ಎನಿಸುತ್ತದೆ’ ಎಂದು ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರುಪೀಠದ ಸಿದ್ಧರಮಾನಂದ ಸ್ವಾಮೀಜಿ ಹೇಳಿದರು. ‘ಯಾವುದೇ ದೇವಸ್ಥಾನ ಪೂರ್ಣವಾಗಿ ನಿರ್ಮಾಣವಾದ ನಂತರ ಉದ್ಘಾಟನೆ ಮಾಡಬೇಕು. ತರಾತುರಿಯಲ್ಲಿ ಉದ್ಘಾಟನೆ ಮಾಡಿದರೆ ಬೇರೆ ಉದ್ದೇಶ ಹೊಂದಿರುವುದು ಕಾಣುತ್ತದೆ’ ಎಂದು ದೇವದುರ್ಗ ತಾಲ್ಲೂಕಿನ ಸಂಸ್ಥಾನ ಮಠದಲ್ಲಿ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ‘ಬೇರೆ ಉದ್ದೇಶದಿಂದ ರಾಮಮಂದಿರ ಉದ್ಘಾಟನೆ ಮಾಡಲು ಹೊರಟಿರುವುದು ರಾಮನಿಗೂ ನೋವು ತಂದಿದೆ. ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕನಕ ಗುರುಪೀಠಕ್ಕೂ ಆಹ್ವಾನ ಬಂದಿದೆ’ ಎಂದು ತಿಳಿಸಿದರು. ಅಪೂರ್ಣ
ರಾಮ ಮಂದಿರವನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿರುವ ಬೆನ್ನಲ್ಲೆ ಸ್ವಾಮೀಜಿಗಳು ಕೂಡ ಆಕ್ಷೇಪವನ್ನು ಎತ್ತುತ್ತಿರುವುದು ಹಲವು ಪ್ರಶ್ನೆಗಳನ್ನು ಎತ್ತಿ ತೋರಿಸುತ್ತಿದೆ. ಜನರ ಭಾವನೆಗಳನ್ನು ಕೆರಳಿಸಿ ಬಿಜೆಪಿ ತನ್ನ ಹಿಂದುತ್ವ ಅಜೆಂಡಾವನ್ನು ಜನರ ಮೇಲೆ ಹೇರುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಇದನ್ನು ನೋಡಿ : ಬಹುತ್ವದ ಭಾರತದ ಉಳಿವಿಗಾಗಿ ಸಂವಿಧಾನವೇ ದಾರಿ – ಜಸ್ಟೀಸ್ ಎಚ್.ಎನ್. ನಾಗಮೋಹನ್ ದಾಸ್ Janashakthi Media