ಒಳಮೀಸಲಾತಿ ವಿರೋಧಿಸಿ ಬಿಜೆಪಿ ಧ್ವಜ ತೆರವು, ತಾಂಡಾಗಳಿಗೆ ಪ್ರವೇಶಿಸದಂತೆ ಮುಖಂಡರುಗಳಿಗೆ ತಡೆ

ಬೆಳಗಾವಿ : ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಘೋಷಿಸಿರುವುದನ್ನು ಖಂಡಿಸಿ ಲಂಬಾಣಿ ಸಮುದಾಯವು ನಡೆಸುತ್ತಿರುವ ಪ್ರತಿಭಟನೆಯು ಗಂಭೀರ ಸ್ವರೂಪ ಪಡೆದುಕೊಂಡಿದೆ.

ಬಾಲಗಕೋಟೆ ಸುತ್ತಮುತ್ತಲಿನ ಲಂಬಾಣ ತಾಂಡಾಗಳಲ್ಲಿ ಸಮುದಾಯದ ಹಲವು ವರ್ಗಗಳ ಯುವ ಮುಖಂಡರು ಬ್ಯಾನರ್ಗಳನ್ನು ಕಟ್ಟಿದು  ಬಿಜೆಪಿ ಮುಖಂಡರ ತಾಂಡಾಗಳ ಪ್ರವೇಶಕ್ಕೆ ತಡೆ ಒಡ್ಡಿದ್ದಾರೆ.  ಬಾಗಲಕೋಟೆ ಸಮೀಪದ ಮುಚ್ಚಂಡಿ ತಾಂಡಾದಲ್ಲಿ ಪ್ರತಿಭಟನಾಕಾರರು ರಾಜ್ಯದ ಬಿಜೆಪಿ ಸರ್ಕಾರದ ನಿರ್ಧಾರವನ್ನು ಖಂಡಿಸಿ ಹಲವಾರು ಕಂಬಗಳು ಮತ್ತು ಮನೆಗಳಲ್ಲಿ ಬಿಜೆಪಿ ಧ್ವಜಗಳನ್ನು ತೆರವುಗೊಳಿಸಿದರು.

ಇದನ್ನೂ ಓದಿ ಟಿಕೆಟ್ ಘೋಷಣೆಯಾಗುವ ಮುನ್ನವೇ ರಾಜ್ಯಾದ್ಯಂತ ಬಿಜೆಪಿ ವಿರುದ್ಧ ತೀವ್ರ ಅಸಮಾಧಾನ

ಆಚನೂರ, ನೀಲಾನಗರ, ಜಡ್ರಾಮಕುಂಟಿ, ಲವಲೇಶ್ವರ, ಗುಲ್ಬಾಳ್, ಶಿರಗುಪ್ಪಿ, ಅಮೀನಗಡ, ಕಮತಗಿ, ಬಿಳಗಿ ಸೇರಿದಂತೆ ನಾನಾ ತಾಂಡಾಗಳಿಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರವೇಶ ಮಾಡದಂತೆ ತಡೆಯಲು ನಿರ್ಧರಿಸಿ ಬ್ಯಾನರ್ ಹಾಕಲಾಗಿದೆ ಮತ್ತು ಬಿಜೆಪಿ ಮುಖಂಡರನ್ನು ತಾಂಡಾ ಪ್ರವೇಶಿಸದಂತೆ ತಡೆಯಲು ಅವುಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಲಂಬಾಣಿ ತಾಂಡಾಗಳ ಹಲವಾರು ಯುವ ಮುಖಂಡರು ತಿಳಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *