ಹಳೆಯ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷ ಕಟ್ಟುವ ಧಮ್ಮು, ತಾಕತ್ತೂ ಯಾರಿಗೂ ಇಲ್ಲ….

– ವಿಶೇಷ ವರದಿ: ಸಂಧ್ಯಾ ಸೊರಬ

ಬೆಂಗಳೂರು: ಹಳೆಯ ಮೈಸೂರು ಭಾಗವನ್ನು ಹೇಗಾದರೂ ಮಾಡಿ ವಶಪಡಿಸಿಕೊಳ್ಳಲೇಬೇಕೆಂಬ ಹಠಹೊತ್ತಿರುವ ಕಮಲ ಕಳೆದ ನಾಲ್ಕೈದು ವರ್ಷಗಳಿಂದ ಮುಗ್ಗರಿಸುತ್ತಲೇ ಇದೆ. ಹಠ ಇದ್ದರಷ್ಟೇ ಇದಕ್ಕೆ ಸಾಕೇ? ಅದಕ್ಕೆ ಅಲ್ಲಿ ದುಡಿಯುವ ಹುಮ್ಮಸ್ಸು ಗೆಲ್ಲುವ ಧಮ್ಮು ತಾಕುತ್ತು ಬೇಕಲ್ಲವೇ? ಆದರೆ, ಬಿ.ಎಸ್.ಯಡಿಯೂರಪ್ಪಗೆ ಬಿಟ್ಟರೆ ಇನ್ಯಾರಿಗೂ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಕಟ್ಟುವ ಧೈರ್ಯವಾಗಲೀ, ಆಸಕ್ತಿಯಾಗಲೀ, ಅಂತಹ ನಡೆಗಳಾಗಲೀ ಇಲ್ಲ ಎಂದು ಬಿಜೆಪಿಯ ಬಲ್ಲಮೂಲಗಳೇ ಜನಶಕ್ತಿ ಮೀಡಿಯಾಕ್ಕೆ ಸ್ಪಷ್ಟಪಡಿಸಿವೆ.

ತೆನೆಹೊತ್ತ ಮಹಿಳೆಯ ಮೈತ್ರಿ ಕಮಲಕ್ಕೆ ಹೊಡೆತ ಕೊಟ್ಟಿದ್ದೇ ಹೆಚ್ಚು:-

ಕರ್ನಾಟಕದ ಬಿಜೆಪಿ ಹೊಸ ಸಾರಥಿಯಾಗಿ ಬಿ.ವೈ.ವಿಜಯೇಂದ್ರ ಚುಕ್ಕಾಣಿಯನ್ನು ಹಿಡಿದಿದ್ದಾರೆಯೇ ಹೊರತು? ನಿರೀಕ್ಷಿತ ಮಟ್ಟಕ್ಕಾಗಲೀ ಅವರು ದುಡಿದೇ ಇಲ್ಲ. ಹಳೇ ಮೈಸೂರು ಭಾಗದಲ್ಲಿ ವಿಜಯೇಂದ್ರ ಸಭೆ ಸಮಾರಂಭಗಳನ್ನು ಮಾತ್ರವೇ ಮಾಡಿದರೇ ಹೊರತು, ಅಲ್ಲಿನ ಯಾವೊಬ್ಬ ಒಕ್ಕಲಿಗ ನಾಯಕನ ಮನಸನ್ನು ಬಿಜೆಪಿಯತ್ತ ಆಕರ್ಷಿಸಲೇ ಇಲ್ಲ. ಹಳೆ ಮೈಸೂರು ಭಾಗದಲ್ಲಿ ಅವರೇನೂ ಸಾಧನೆ ಮಾಡಲೇ ಇಲ್ಲ. ಇನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಳೆಮೈಸೂರು ಭಾಗದಲ್ಲಿ ಕಮಲವನ್ನು ಅರಳಿಸಲೆಂದು ಜೆ.ಪಿ.ನಡ್ಡಾ, ಅಮಿತ್‌ ಷಾ ಅವರ ಹತ್ತಿರವೂ ಹೋದರೂ ಅವರನ್ನೂ ಕರೆಸಿದರೂ, ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರನ್ನು ಸಂಪೂರ್ಣ ತಮ್ಮ ತೆಕ್ಕೆಗೆ ಕಮಲವನ್ನು ತೆಗೆದುಕೊಳ್ಳಲು ಆಗಲೇ ಇಲ್ಲ.

ಗಮನಾರ್ಹವೆಂದರೆ, ಈ ಭಾಗದ ಬಿಜೆಪಿಯ ಕೆಲವರಿಗೆ ಹಳೆ ಮೈಸೂರು ಭಾಗದಲ್ಲಿ ಕಮಲವನ್ನು ಅರಳಿಸುವುದು ಬೇಕಾಗೇಯಿಲ್ಲ. ತೆನೆಹೊತ್ತ ಮಹಿಳೆಯ ಸಖ್ಯಮೈತ್ರಿಯಿಂದಾಗಿ ಕಮಲ ಕೊಂಚ ಚಿಗುರಿದಂತೆ ಕಂಡುಬಂದರೂ ಚಿಗುರುತ್ತಲೇ ಅದು ಬಾಡಿಹೋಯಿತು. ಇದಕ್ಕೆ ಪ್ರಜ್ವಲ್‌ರೇವಣ್ಣ ಕೇಸು ಕಾರಣವೇ ಎಂದು ಪ್ರಶ್ನಿಸಿದಾಗ? “ಪ್ರಜ್ವಲ್‌ ಇದು ಹಳೇ ಕೇಸು. ಜೆಡಿಎಸ್‌ ಯಾವಾಗ ಬಿಜೆಪಿ ಸೇರಿತೋ ಆಗಲೇ ಬಿಜೆಪಿಯೂ ಮುಗಿದೇ ಹೋಯಿತು. ಸ್ವಲ್ಪ ಇಂಪ್ರೂ ಆಗಿತ್ತು. ಈಗ ಅದೂ ಹಾಳಾಯಿತು.ಕುಮಾರಸ್ವಾಮಿ ಬಿಜೆಪಿಯವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ” ಎಂಬುದು ಮೂಲಗಳ ಮಾತಿನಿಂದಲೇ ಸ್ಪಷ್ಟವಾಯಿತು.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ : ವಿದೇಶಕ್ಕೆ ಹಾರಿದ್ರಾ ಎಚ್‌ಡಿ ರೇವಣ್ಣ?!

ಜೆಡಿಎಸ್‌ ಪ್ರೈವೇಟ್‌ ಲಿಮಿಟೆಡ್:-‌

ಕುಟುಂಬ ರಾಜಕಾರಣ ಈಗ ಎಲ್ಲಾ ಪ್ರಮುಖ ಪಕ್ಷಗಳಲ್ಲಿ ಸರ್ವೇಸಾಮಾನ್ಯ ಅಂತ ಕಂಡುಬಂದರೂ, ಅದಕ್ಕೆ ಬುನಾದಿ ಹಾಕಿ, ಅಪ್ಪಮಕ್ಕಳ ಪಕ್ಷವೆಂಬ ಕುಖ್ಯಾತಿಯ ಹಣೆಪಟ್ಟಿಯನ್ನು ತೆನೆಹೊತ್ತ ಮಹಿಳೆಗೆ ಪ್ರಾದೇಶಿಕ ಪಕ್ಷದ ಹೆಸರಿನಲ್ಲಿ ಅಂಟಿಸಿದ್ದು ಹೆಚ್.ಡಿ.ದೇವೇಗೌಡರ ಕುಟುಂಬ. ಇದಕ್ಕೆ ಅಂದಿದ್ದು,” ಜೆಡಿಎಸ್‌ ಪ್ರೈವೇಟ್‌ ಲಿಮಿಟೆಡ್‌” ಎಂದು. ಇದು ನಮ್ಮ ಮಾತಲ್ಲ ಮಂಡ್ಯದ ಮಾಜಿ ಸಂಸದ ನಾನಮಂಗಲದಿಂದ ಎರಡು ಬಾರಿ ಪಕ್ಷೇತರವಾಗಿ ಗೆದ್ದುಬಂದಿದ್ದ ಜೆಡಿಎಸ್‌ನ ಅದೇ ಒಕ್ಕಲಿಗ ಬೆಲ್ಟಿಗೆ ಸೇರಿರುವ ಜೆಡಿಎಸ್‌ನಿಂದ ಬಿಜೆಪಿಗೆ ಬಂದಿರುವ ಎಲ್.ಆರ್.ಶಿವರಾಮೇಗೌಡರ ರೊಚ್ಚಿಗೆದ್ದ ‍ಧ್ವನಿ. ಅಪ್ಪ-ಮಕ್ಕಳಷ್ಟೇ ಒಕ್ಕಲಿಗರ ನಾಯಕರೆಂದಾದರೆ ಹೊರತು,ಬೇರೆ ಯಾರೊಬ್ಬರನ್ನು ಒಕ್ಕಲಿಗ ನಾಯಕರನ್ನಾಗಿ ಬೆಳೆಯಲು ಬಿಡಲೇಯಿಲ್ಲ. ಇನ್ನು ಯಾವುದೇ ಒಕ್ಕಲಿಗರಿಗೆ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವ ಧೈರ್ಯವಾಗಲೀ, ಸಾಹಸವಾಗಲೀ ಇಲ್ಲ. ನಾನೀಗ ಇದನ್ನು ಮಾಡುತ್ತಿದ್ದೇನೆ. ಹಿಂದೆ ಪಕ್ಷವೊಂದರಿಂದ ಮಂಡ್ಯ ಜಿಲ್ಲಾಧ್ಯಕ್ಷನಾಗಿದ್ದೆ, ಮಾಜಿ ಸಂಸದ, ಶಾಸಕ ಎಲ್ಲವೂ ಆಗಿದ್ದರೂ ನನ್ನನ್ನು ಅತ್ತ ಬಿಜೆಪಿಯಾಗಲೀ, ಇತ್ತ ಜೆಡಿಎಸ್‌ ಆಗಲೀ ಯಾರೂ ಕೂಡ ಹತ್ತಿರಕ್ಕೆ ತೆಗೆದುಕೊಳ್ಳಲೇ ಇಲ್ಲ. ಅಷ್ಟೇ ಅಲ್ಲ, ಮಂಡ್ಯದಲ್ಲಿ 28ಸಾವಿರ ಮತಗಳನ್ನು ಪಡೆದಿದ್ದ ಅಶೋಕ್‌ ಜಯರಾಮ್‌ ಅವನನ್ನೇ ಕ್ಯಾರೇ ಎಂದು ಯಾರೂ ಕೇಳಲೇಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅದೇನೇ ಇರಲೀ, ಹಳೆ ಮೈಸೂರು ಭಾಗ ಒಕ್ಕಲಿಗರ ಬೆಲ್ಟ್‌ ಎನ್ನುವುದು ಜನಜನಿತ. ಇಲ್ಲಿ ಪಕ್ಷ ಸೊರಗಿದಂತೆ ಜೆಡಿಎಸ್‌ ಕಂಡುಬಂದರೂ ಅದರ ನಾಯಕರ ಕುಟುಂಬ ಮಾತ್ರ ತೆನೆಹೊತ್ತ ಮಹಿಳೆಯಿಂದ ಬಲಪಡಿದಿದ್ದಂತೂ ಸುಳ್ಳಲ್ಲ. ಪಕ್ಷದ ಹಿತ ಕಾರ್ಯಕರ್ತರ ಹಿತವೆಲ್ಲಿ? ಎಂಬ ಪ್ರಶ್ನೆಯನ್ನು ಭವಿಷ್ಯತ್ತಿಗೆ ಬಿಡಲಾಗಿದೆ.

ಇದನ್ನೂ ನೋಡಿ: ಪೆನ್‌ಡ್ರೈವ್‌ ಪ್ರಕರಣ : ರಾಜಕೀಯ ಕೆಸರೆರಚಾಟ ಮತ್ತು ಕಾನೂನು – ಕೆ.ಎಸ್ ವಿಮಲಾ ವಿಶ್ಲೇಷಣೆ

Donate Janashakthi Media

Leave a Reply

Your email address will not be published. Required fields are marked *