ಸಮಾಜವನ್ನು-ದೇಶವನ್ನು ಪ್ರಗತಿಯ ದಿಕ್ಕಿನಲ್ಲಿ ರೂಪಿಸುವವರು ಎಂಜಿನಿಯರ್ ಗಳು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಎಂಜಿನಿಯರ್ ಗಳು ದೇಶದ, ಸಮಾಜದ ನಿರ್ಮಾತೃಗಳು. ಸಮಾಜವನ್ನು-ದೇಶವನ್ನು ಪ್ರಗತಿಯ ದಿಕ್ಕಿನಲ್ಲಿ ರೂಪಿಸುವವರು ಎಂಜಿನಿಯರ್ ಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ಇಂಜಿನಿಯರ್‌ಗಳ ಸಂಸ್ಥೆ (ಭಾರತ) ಶುಕ್ರವಾರ ಸೆ-15 ಆಯೋಜಿಸಿದ್ದ 56ನೇ ಎಂಜಿನಿಯರ್‌ಗಳ ದಿನಾಚರಣೆಯಲ್ಲಿ  ಮಾತನಾಡಿದರು ಅವರು, ಇಂದು ಇಂಜಿನಿಯರ್‌ಗಳ ದಿನ ಮತ್ತು ವಿಶ್ವ ಪ್ರಜಾಪ್ರಭುತ್ವ ದಿನ ಈ ಎರಡರ ಉದ್ದೇಶವು ಉತ್ತಮ ಸಮಾಜವನ್ನು ನಿರ್ಮಿಸುವುದಾಗಿದೆ. ಸರ್ ಎಂ ವಿಶ್ವೇಶ್ವರಯ್ಯನವರು ಭವಿಷ್ಯದ ಸಮಾಜ ಹೇಗಿರಬೇಕು ಎಂಬ ದೃಷ್ಟಿಯನ್ನು ಹೊಂದಿದ್ದರು ಮತ್ತು ನಮ್ಮಲ್ಲೂ ಅದೇ ದೂರದೃಷ್ಟಿ ಇರಬೇಕು. ಇವರು ಮೈಸೂರು ರಾಜರ ಬಳಿ ದಿವಾನರಾಗಿದ್ದ ಕಾರಣದಿಂದಲೇ ಮೈಸೂರಿನ‌ ಅಭಿವೃದ್ಧಿಯಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ ಎಂದರು.

ಇದನ್ನೂ ಓದಿ:ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಿ ಜನರ ನಿರೀಕ್ಷೆಗೆ ಸ್ಪಂದಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಮಾತನಾಡಿ, ಎಂಜಿನಿಯರ್‌ಗಳಿಲ್ಲದೆ ಜಗತ್ತಿಲ್ಲ. ನಮ್ಮ ಸಮಾಜದ ಪ್ರತಿಯೊಂದು ಅಂಶಗಳಲ್ಲಿ ಎಂಜಿನಿಯರ್‌ಗಳು ಅವಿಭಾಜ್ಯ ಪಾತ್ರವನ್ನು ವಹಿಸುತ್ತಾರೆ. ವಿಶ್ವದ ಇತರ ಶಾಲಾ-ಕಾಲೇಜುಗಳಿಗೆ ಸಮಾನವಾದ ಎಂಜಿನಿಯರಿಂಗ್ ಸಂಸ್ಥೆಗಳನ್ನು ನಾವು ವಿನ್ಯಾಸಗೊಳಿಸಬೇಕಾಗಿದೆ ಮತ್ತು ನಿರ್ಮಿಸಬೇಕಾಗಿದೆ ಎಂದು ತಿಳಿಸಿದರು.

ಕಲಾತ್ಮಕ ಕಟ್ಟಡಗಳನ್ನು ನಿರ್ಮಿಸುವ ಕುರಿತು ಮಾತನಾಡಿ, ಎಂಜಿನಿಯರ್‌ಗಳು ಖಾಸಗಿ ಸಂಸ್ಥೆಗಳಿಗೆ ಮಾತ್ರವಲ್ಲದೆ, ಸರ್ಕಾರಿ ಕಟ್ಟಡಗಳು ಮತ್ತು ಯೋಜನೆಗಳಿಗೆ ಉತ್ತಮ ವಿನ್ಯಾಸ ರಚನೆಗಳನ್ನು ನಿರ್ಮಿಸಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಇಂಜಿನಿಯರ್ ಕ್ಷೇತ್ರಕ್ಕೆ ಅಸಾಧಾರಣ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ 15 ಖ್ಯಾತ ಇಂಜಿನಿಯರ್‌ಗಳನ್ನು ಪುರಸ್ಕರಿಸಲಾಯಿತು. ಎಂಜಿನಿಯರ್‌ಗಳು ಸಮಾಜದ ಬೆನ್ನೆಲುಬು: ಸಿಎಂ ಸಿದ್ದರಾಮಯ್ಯ

ವಿಡಿಯೋ ನೋಡಿ:ಕೆಲಸದ ಅವಧಿ ಹೆಚ್ಚಳ ವಿರೋಧಿಸಿ ಕಾರ್ಮಿಕರಿಂದ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *