ಬೆಂಗಳೂರು | ನರೇಗಾ ಕಾಯ್ದೆ ಮರು ಜಾರಿಗಾಗಿ ಜನಾಂದೋಲನ – ಮುಖ್ಯಮಂತ್ರಿ ಸಿದ್ಧರಾಮಯ್ಯ

ಬೆಂಗಳೂರು: ರಾಜ್ಯ ಕಾಂಗ್ರೆಸ್, ಯುಪಿಎ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಕಾಯ್ದೆ ಮರು ಜಾರಿ ಆಗುವವರೆಗೆ ಹೋರಾಟ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿ ನರೇಗಾ ಬಚಾವೊ ಅಭಿಯಾನ’ವನ್ನು ಜನಾಂದೋಲನವಾಗಿ ಪರಿವರ್ತಿಸುವುದಾಗಿ ಘೋಷಿಸಿದೆ.

ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಮಂಗಳವಾರ ನಡೆದ ‘ನರೇಗಾ ಬಚಾವೊ ಸಂಗ್ರಾಮ’ ಕಾರ್ಯಕ್ರಮದ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ನರೇಗಾ ಕಾಯ್ದೆ ಮರು ಜಾರಿ ಆಗುವವರೆಗೆ ಗ್ರಾಮಮಟ್ಟದಿಂದ ರಾಜ್ಯಮಟ್ಟದವರೆಗೆ ಹೋರಾಟ ಮುಂದುವರಿಸಬೇಕು’  ‘ನರೇಗಾ ಕಾಯ್ದೆಯ ಬದಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೊಸತಾಗಿ ಜಾರಿಗೆ ತಂದಿರುವ ‘ವಿಬಿ ಜಿ ರಾಮ್‌ ಜಿ’ ಕಾಯ್ದೆ ರದ್ದು ಆಗಲೇಬೇಕು.

ಇದನ್ನೂ ಓದು : ಫೆಬ್ರುವರಿ 1, ಭಾನುವಾರವೇ ಕೇಂದ್ರ ಬಜೆಟ್‌ ಮಂಡನೆ ನಿಗದಿ

ನರೇಗಾ ಬಚಾವೊ  ಈ ಆಂದೋಲನ ನರೇಗಾ ಕಾಯ್ದೆ ಮತ್ತೆ ಜಾರಿಗೆ ಬರುವವರೆಗೆ ಮುಂದುವರಿಯಬೇಕು. ಉತ್ತರ ಭಾರತದಲ್ಲಿ ರೈತರು ಕಾಯ್ದೆ ಬದಲಾವಣೆಗೆ ಹೋರಾಟ ಮಾಡಿದ ರೀತಿಯಲ್ಲಿಯೇ ನಾವೂ ಹೋರಾಟ ಮಾಡಬೇಕು’ ಎಂದರು.

‘ನರೇಗಾ ಕಾಯ್ದೆಯ ಬದಲು ಹೊಸ ಕಾಯ್ದೆ ಜಾರಿಗೆ ಬಂದರೆ, ಕೇಂದ್ರ ಸರ್ಕಾರ ಅಧಿಸೂಚನೆಯ ಮೂಲಕ ಸೂಚಿಸಿದ ಸ್ಥಳದಲ್ಲಿ ಕೆಲಸ ಮಾಡಬೇಕಾಗುತ್ತದೆ. ಹಳೆ ಕಾಯ್ದೆಯ ಪ್ರಕಾರ ನಾವು ಶೇ 10ರಷ್ಟು ಹಣ ಮಾತ್ರ ಕೊಡುತ್ತಿದ್ದೆವು. ಹೊಸ ಕಾಯ್ದೆಯಲ್ಲಿ ಶೇ 40ರಷ್ಟು ರಾಜ್ಯ ಕೊಡಬೇಕು. ಶೇ 60ರಷ್ಟು ಕೇಂದ್ರ ಸರ್ಕಾರ ಕೊಡುತ್ತದೆ. ಇದರಿಂದ ರಾಜ್ಯಕ್ಕೆ ಸುಮಾರು ₹ 2,500 ಕೋಟಿ ಹೊರೆ ಬೀಳಲಿದೆ’ ಎಂದರು.

ಇದನ್ನೂ ನೋಡಿ : ವೆನೆಜುವೇಲಾದ ಮೇಲೆ ಯುದ್ದ ಹೂಡಿದರೆ ,ಯು.ಎಸ್ ಗೆ ಅದು ಇನ್ನೊಂದು ವಿಯೇಟ್ನಾಂ ಆಗುತ್ತದೆ! ಇರಾಕ್, ಲಿಬ್ಯ ಅಲ್ಲ !

Donate Janashakthi Media

Leave a Reply

Your email address will not be published. Required fields are marked *