ಇತ್ತೀಚೆಗೆ ಪೊಲೀಸ್ ಅಧಿಕಾರಿಯ ಮೇಲೆ ಅನೈತಿಕ ಪೊಲೀಸ್‌ಗಿರಿ ನಡೆಸಿದ್ದ ಸಂಘಪರಿವಾರದ ದುಷ್ಕರ್ಮಿಗಳು, ಅವರ ಪತ್ನಿ ಮತ್ತು ಪತ್ನಿಯ ತಂಗಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದರು
ದಕ್ಷಿಣ ಕನ್ನಡ: ಕಳೆದೊಂದು ವಾರದಲ್ಲಿ ಕರಾವಳಿಯ ಅವಳಿ ಜಿಲ್ಲೆಯಲ್ಲಿ ಹಲವು ಅನೈತಿಕ ಪೊಲೀಸ್‌ಗಿರಿ ಪ್ರಕರಣಗಳು ದಾಖಲಾಗಿವೆ. ಅಷ್ಟೆ ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಅನೈತಿಕ ಪೊಲೀಸ್‌ಗಿರಿಗೆ ಎಚ್ಚರಿಕೆ ನೀಡಿದ್ದರು. ಅದಾಗಿಯೂ ಜಿಲ್ಲೆಯ ಧರ್ಮಸ್ಥಳದಲ್ಲಿ ಸಂಘಪರಿವಾರದ ದುಷ್ಕರ್ಮಿಗಳು ಮತ್ತೆ ಅನೈತಿಕ ಪೊಲೀಸ್‌ಗಿರಿ ಮೆರೆದಿದ್ದು, ಹಿಂದೂ ಯುವತಿಯನ್ನು ಹತ್ತಿಸಿದ್ದಾರೆ ಎಂದು ಮುಸ್ಲಿಂ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಆಟೋ ಚಾಲಕ ಮುಹಮ್ಮದ್ ಆಶಿಕ್ ಅವರ ಮೇಲೆ ನಾಲ್ವರ ತಂಡವೊಂದು ಧರ್ಮಸ್ಥಳದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ರಾತ್ರಿ ಧರ್ಮಸ್ಥಳದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ರಿಕ್ಷಾದಲ್ಲಿ ಬಾಡಿಗೆಗೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಈ ಘನಟೆ ನಡೆದಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಮಾರಣಾಂತಿಕ ಹಲ್ಲೆಗೊಳಗಾದ ಮುಹಮ್ಮದ್ ಆಶಿಕ್ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಾರ್ತಾಭಾರತಿ ವರದಿ ಮಾಡಿದೆ.
ಇದನ್ನೂ ಓದಿ: ಕರಾವಳಿಯ ಅನೈತಿಕ ಪೊಲೀಸ್‌ಗಿರಿ ಸರಣಿ ಮುಂದುವರಿಕೆ | ಸಂಘಪರಿವಾರದ ದುಷ್ಕರ್ಮಿಗಳಿಂದ ವೈದ್ಯರ ಮೇಲೆ ದೌರ್ಜನ್ಯ
ಘಟನೆಯೇನು? ಧರ್ಮಸ್ಥಳದ ಬಳಿಯ ಉಜಿರೆಯ ಹಳೆ ಪೇಟೆ ನಿವಾಸಿಯಾಗಿರುವ ಮಹಮ್ಮದ್ ಆಶಿಕ್ ಉಜಿರೆಯಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದಾರೆ. ಅವರು ಬುಧವಾರ ರಾತ್ರಿ ಬಸ್ಸಿನಲ್ಲಿ ಬೆಂಗಳೂರಿಗೆ ಹೋಗಬೇಕಾಗಿದ್ದ ಯುವತಿಯೊಬ್ಬಳನ್ನು ತನ್ನ ರಿಕ್ಷಾದಲ್ಲಿ ಬಾಡಿಗೆಗೆ ಕರೆದೊಯ್ದಿದ್ದಾರೆ. ಧರ್ಮಸ್ಥಳದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕರೆದೊಯ್ದು ಬಿಟ್ಟು, ಅಲ್ಲಿಂದ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ. ದುಷ್ಕರ್ಮಿಗಳ ತಂಡವು ಬಸ್ ನಿಲ್ದಾಣದ ಸಮೀಪ ರಿಕ್ಷಾವನ್ನು ತಡೆದು ಆಶಿಕ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದೆ ಎಂದು ದೂರಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಠಾಣ ಅಪರಾಧ ಕ್ರಮಾಂಕ: 48/2023 ಕಲಂ: 143.147.341.323.504.506.R/W 149 IPCಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ ಎಂದು ವಾರ್ತಾಭಾರತಿ ವರದಿ ಹೇಳಿದೆ.
#ದಕ್ಷಿಣ_ಕನ್ನಡ: #ಅನೈತಿಕ_ಪೊಲೀಸ್‌ಗಿರಿ ಮಾಡುವವರಿಗೆ ಸಿಎಂ #ಸಿದ್ದರಾಮಯ್ಯ ಎಚ್ಚರಿಕೆ ನೀಡಿದ ಒಂದೇ ದಿನದಲ್ಲಿ ಮತ್ತೊಂದು ಘಟನೆ #ಧರ್ಮಸ್ಥಳ ಬಳಿ ನಡೆದಿದೆ. #ಹಿಂದೂ ಯುವತಿಯೊಬ್ಬಳನ್ನು ಡ್ರಾಪ್ ಮಾಡಿದ ಆಟೋ ಚಾಲಕ ಮುಹಮ್ಮದ್ ಆಶಿಕ್ ಮೇಲೆ ಹಿಂದುತ್ವವಾದಿಗಳ ಗುಂಪು ಹಲ್ಲೆ ನಡೆಸಿದೆ. ಪ್ರಕರಣ ದಾಖಲಾಗಿದೆ. #moralpolicing #Hindutva pic.twitter.com/5WYf4aP46l
— Baapu Ammembala (@BaapuAmmembala) August 3, 2023
ಕಳೆದ ಒಂದು ವಾರದಲ್ಲಿ ಕರಾವಳಿಯ ನಾಲ್ಕು ಕಡೆ ಅನೈತಿಕ ಪೊಲೀಸ್‌ಗಿರಿ ಪ್ರಕರಣಗಳು ವರದಿಯಾಗಿವೆ. ಮೊದಲ ಪ್ರಕರಣದಲ್ಲಿ, ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ NIA ಪೊಲೀಸ್ ಸಿಬ್ಬಂದಿಯೊಬ್ಬರ ಮೇಲಿನ ಹಲ್ಲೆ ನಡೆಸಿದ ಸಂಘಪರಿವಾರದ ದುಷ್ಕರ್ಮಿಗಳು, ಅವರ ಪತ್ನಿ ಮತ್ತು ಪತ್ನಿಯ ತಂಗಿಯ ಜೊತೆಗಿನ ಅಸಭ್ಯವಾಗಿ ವರ್ತಿಸಿದ್ದರು. ಇದರ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಪತ್ರಕರ್ತರಿಬ್ಬರನ್ನು ಬೆದರಿಸಿ, ನಿಂದಿಸಿದ ಪ್ರಕರಣ ವರದಿಯಾಗಿತ್ತು. ಅದಾಗಿ ಜೂನ್ 31 ರಂದು ಕಾರಿನಲ್ಲಿ ತೆರಳುತ್ತಿದ್ದ ವೈದ್ಯರನ್ನು ತಡೆದು ನಿಂದಿಸಲಾಗಿತ್ತು.
ಆಗಸ್ಟ್ 1ರ ಮಂಗಳವಾರ ಕರಾವಳಿಯ ಅವಳಿ ಜಿಲ್ಲೆಗಳಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ, “ಕಾನೂನು ಕೈಗೆತ್ತಿಕೊಂಡವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ಹೇಳಿದ್ದರು.
ವಿಡಿಯೊ ನೋಡಿ: ಮಲ್ಲಿಕಾರ್ಜುನ ಖರ್ಗೆ ಮೈಬಣ್ಣದ ಬಗ್ಗೆಅವಹೇಳನಕಾರಿ ಹೇಳಿಕೆ ನೀಡಿದಮಾಜಿ ಸಚಿವ ಆರಗ ಜ್ಞಾನೇಂದ್ರ Janashakthi Media