ಮುನಾವರ್ ಫರೂಕಿ ಕಾರ್ಯಕ್ರಮ ರದ್ದು; ದ್ವೇಷ ಗೆದ್ದಿದೆ, ವಿದಾಯ ಎಂದ ಕಲಾವಿದ

ಬೆಂಗಳೂರು: ಇಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ‘ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಮುನಾವರ್ ಫರೂಕಿ’ ಯವರ ಕಾರ್ಯಕ್ರವನ್ನು ರದ್ದು ಮಾಡುವಂತೆ ಪೊಲೀಸರು ಆಯೋಜಕರಿಗೆ ಒತ್ತಡ ಹಾಕಿದ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

ಬೆಂಗಳೂರು ಕಾರ್ಯಕ್ರಮವನ್ನು ರದ್ದುಗೊಳಿಸಿದ ನಂತರ ಇನ್‌ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ ಫರೂಕಿ , “ನಫ್ರತ್ ಜೀತ್ ಗಯೀ ಆರ್ಟಿಸ್ಟ್ ಹಾರ್ ಗಯಾ (ದ್ವೇಷ ಗೆದ್ದಿದೆ ಕಲಾವಿದ ಸೋತ) I’m done, goodbye. Injustice.” ಎಂದು ಬರೆದಿದ್ದಾರೆ.

ಬಲಪಂಥೀಯ ಗುಂಪುಗಳ ಬೆದರಿಕೆಗಳಿಂದಾಗಿ ಕಳೆದ ಎರಡು ತಿಂಗಳಲ್ಲಿ ಕನಿಷ್ಠ 12 ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ಮುನಾವರ್ ಫರೂಕಿ ಇನ್ನುಮುಂದೆ ಯಾವುದೇ ಪ್ರದರ್ಶನಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಮುನಾವರ್ ಫರೂಕಿ ಅವರು ಗುಡ್ ಶೆಫರ್ಡ್ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ‘ಡೋಂಗ್ರಿ ಟು ನೋವೇರ್’ (Dongri to Nowhere) ಎಂಬ ಶೀರ್ಷಿಕೆಯೊಂದಿಗೆ ಪ್ರದರ್ಶನ ನೀಡುವವರಿದ್ದರು.

ಆಯೋಜಕರು ನವೆಂಬರ್ 15 ರಂದು ಪ್ರದರ್ಶನಕ್ಕಾಗಿ ಪೊಲೀಸ್ ರಕ್ಷಣೆ ಕೋರಿ ಪತ್ರವನ್ನು ನೀಡಿದರು ನಾವು ಅದನ್ನು ರದ್ದುಗೊಳಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಪೊಲೀಸರು ಸಂಘಟಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಮತ್ತು ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಹಿತಿ ಪಡೆಯುವ ನಾಗರಿಕರ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಕಾರ್ಯಕರ್ತ ವಿನಯ್ ಶ್ರೀನಿವಾಸ್ ಹೇಳಿದ್ದಾರೆ.

600 ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಆದರೆ ವಿರೋಧಿಗಳು ಪ್ರದರ್ಶನ ಸ್ಥಳವನ್ನು ಧ್ವಂಸಗೊಳಿಸುವ ಬೆದರಿಕೆಯನ್ನು ಹಾಕಿದ್ದರು. ಪೊಲೀಸರು ಕಾರ್ಯಕ್ರಮ ರದ್ದು ಪಡಿಸುವಂತೆ ಒತ್ತಡಹಾಕುತ್ತಿದ್ದರು ಹಾಗಾಗಿ, ರದ್ದುಪಡಿಸಲಾಗಿದೆ ಎಂದು ಸಂಘಟಕಿರು ತಿಳಿಸಿದ್ದಾರೆ.

Donate Janashakthi Media

One thought on “ಮುನಾವರ್ ಫರೂಕಿ ಕಾರ್ಯಕ್ರಮ ರದ್ದು; ದ್ವೇಷ ಗೆದ್ದಿದೆ, ವಿದಾಯ ಎಂದ ಕಲಾವಿದ

  1. ಇಂದು ಮುನಾವರ್ ಫರೂಕಿ….
    ನಾಳೆಯ ಸರದಿ ಯಾರೋ?
    ಕೋಮು ದ್ವೇಶ, ಮತಾಂಧತೆ ಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಬಲಿಯಾಗುತ್ತಿವೆ….
    ದ್ವೇಶ ಗೆಲ್ಲುತ್ತಿದೆ, ಕಲಾವಿದ ಸೋಲುತ್ತಿದ್ದಾನೆ…

Leave a Reply

Your email address will not be published. Required fields are marked *