ರಾಯಚೂರು: ಚೆಕ್ ಪೋಸ್ಟ್ ನಲ್ಲಿ ಅಕ್ರಮ ಮರಳು ಸಾಗಣೆಯನ್ನ ತಡೆದ ಪೊಲೀಸ್ ಹೆಡ್ ಕಾನ್ಸಟೇಬಲ್ ಮೇಲೆ ಹಲ್ಲೆ ನಡೆದ ಘಟನೆ ಬಳಿಕವೂ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚೀಕಲಪರ್ವಿ ಬಳಿ ಅಕ್ರಮ ಮರಳು ಸಾಗಾಟ ನಿಂತಿಲ್ಲ.ಯಾರ ಭಯ ಇಲ್ಲದೇ ಅಕ್ರಮವಾಗಿ ಮರಳು ಸಾಗಾಟ ನಡೆದಿದೆ.
ತುಂಗಭದ್ರಾ ನದಿ ಪಾತ್ರದ ಜಮೀನುಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮಾಡಿ ಟ್ರ್ಯಾಕ್ಟರ್ ,ಲಾರಿಗಳ ಮೂಲಕ ಅಕ್ರಮವಾಗಿ ಹಾಡುಹಗಲೇ ಸಾಗಾಟ ಮಾಡಲಾಗುತ್ತಿದೆ. ರಾಯಲ್ಟಿಯಿಲ್ಲದೆ ಹಗಲು ರಾತ್ರಿ ಎನ್ನದೇ ತುಂಗಭದ್ರಾ ನದಿ ಒಡಲಿಗೆ ಕನ್ನ ಹಾಕುತ್ತಿರುವ ದಂಧೆಕೋರರು ಎಗ್ಗಿಲ್ಲದೆ ಅಕ್ರಮವಾಗಿ ಮರಳು ಸಾಗಣೆ ನಡೆಸಿದ್ದಾರೆ.
ಇತ್ತೀಚಗಷ್ಟೇ ಮಾನ್ವಿಯ ಚೀಕಲಪರ್ವಿ ಬಳಿ ಅಕ್ರಮ ಮರಳು ಸಾಗಾಟ ತಡೆಯಲು ಹೋಗಿದ್ದ ಮಾನ್ವಿ ಪೊಲೀಸ್ ಠಾಣೆ ಮುಖ್ಯಪೇದೆ ಲಕ್ಷ್ಮಣ ಮೇಲೆ ಹಲ್ಲೆ ನಡೆದಿತ್ತು. ಪ್ರಕರಣ ಹಿನ್ನೆಲೆ ಆರೋಪಿಗಳಾದ ದೇವರಾಜ್ ,ಈರಣ್ಣ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ. ಈ ಘಟನೆ ಬಳಿಕವೂ ಅಕ್ರಮ ಮರಳು ಸಾಗಣೆ, ಸಂಗ್ರಹ ಮುಂದುವರೆದಿದೆ.
ಜಿಲ್ಲೆಗೆ ಇಬ್ಬರು ಸಚಿವರಿದ್ದರೂ ಅಕ್ರಮ ಮರಳುಗಾರಿಕೆಗೆ ಬೀಳದ ಬ್ರೇಕ್ ಬಿದ್ದಿಲ್ಲ. ಅಧಿಕಾರಿಗಳ ವರ್ಗಾವಣೆ ಗಲಾಟೆಯಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಎನ್.ಎಸ್.ಬೋಸರಾಜು ಬ್ಯುಸಿಯಾಗಿದ್ದಾರೆ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕಲಬುರಗಿ| ಗುತ್ತಿಗೆದಾರರನ್ನು ಕಾಮಗಾರಿಗೆ ಸಂಬಂಧ ನಾಯಾಲಯ ವಿಚಾರಣೆ