ಕಲುಷಿತ ನೀರು ಕುಡಿದು ಸಾವಿರಾರು ಮಂದಿ ಅಸ್ವಸ್ಥ: ಉಡುಪಿಯಲ್ಲಿ ಘಟನೆ

ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪಂದ ಗ್ರಾಪಂ ವ್ಯಾಪ್ತಿಯಲ್ಲಿ ಕಲುಷಿತ ನೀರು ಕುಡಿದು ಸಾವಿರಾರು ಮಂದಿ ವಾಂತಿ ಭೇದಿಯಿಂದ ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಪ್ರತಿ ಮನೆಯಲ್ಲೂ ಜನರು ವಾಂತಿಭೇದಿಯಿಂದ ಬಳಲುತ್ತಿದ್ದಾರೆ.

ಬೈಂದೂರು ತಾಲೂಕಿನ ಉಪ್ಪಂದ ಗ್ರಾಪಂ ವ್ಯಾಪ್ತಿಯ 6 ಮತ್ತು 7ನೇ ವಾರ್ಡ್‌ನಲ್ಲಿ ಕುಡಿಯುವ ನೀರು ಕಲುಷಿತಗೊಂಡ ಪರಿಣಾಮ ಈ ದುರಂತ ಸಂಭವಿಸಿದೆ. ಕರ್ಕಿಹಳ್ಳಿಯಲ್ಲಿ ಸುಮಾರು 600ಕ್ಕೂ ಅಧಿಕ ಜನರು ಅಸ್ವಸ್ಥರಾಗಿದ್ದಾರೆ. ಇನ್ನೂ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುವ ಆತಂಕ ಎಲ್ಲರಲ್ಲೂ ಮೂಡಿದೆ.

ಈ ವಾರ್ಡ್‌ಗಳಿಗೆ ಉಪ್ಪುಂದದ ಕಾಸನಾಡಿ ಪರಿಸರದ ಬಾವಿಯಿಂದ ನೀರು ಸರಬರಾಜು ಆಗುತ್ತಿದೆ. ಆ ನೀರನ್ನೇ ಕುಡಿದಿದ್ದರಿಂದ ವಾಂತಿ ಭೇದಿ ಶುರುವಾಗಿದೆ. ಕಳೆದ ಒಂದು ವಾರದಿಂದ ನೂರಕ್ಕೂ ಅಧಿಕ ಜನರಲ್ಲಿ ವಾಂತಿ ಭೇದಿ ಅನಾರೋಗ್ಯ ಕಾಣಿಸಿಕೊಂಡಿದೆ. ಈ ರೋಗಿಗಳ ಪರೀಕ್ಷೆ ಮಾದರಿ ಪ್ರಯೋಗಾಲಯದ ವರದಿ ಕೈಸೇರಿದೆ. ವರದಿ ಪ್ರಕಾರ, ಮಡಿಕಲ್, ಕರ್ಕಿಕಳಿ ಗ್ರಾಮಸ್ಥರಲ್ಲಿ ಆಮಶಂಕೆ ಭೇದಿ ರೋಗದ ಗುಣಲಕ್ಷಣ ಕಂಡುಬಂದಿದೆ.

ಇದನ್ನು ಓದಿ : ಬಿಬಿಎಂಪಿಗೆ ವಂಚನೆ ಮಾಡಿರುವ ಸಹಾಯಕ ಪ್ರಾಧ್ಯಾಪಕ ಚಿರಾಗ್ ಎಸ್ ಬಂಧಿಸಿ: ದಲಿತ ಪರ ಸಂಘಟನೆಗಳು ಆಗ್ರಹ

ಈವರೆಗೂ ಬಾವಿಯಿಂದ ನೀರು ಸರಬರಾಜು ಆಗುತ್ತಿತ್ತು, ಆದರೆ ಇದೀಗ ಅದನ್ನು ನಿಲ್ಲಿಸಿ, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್ ನೀರು ಸರಬರಾಜು ಮಾಡಿದ ಬಳಿಕ ರೋಗಿಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಡಿಎಚ್‌ಒ ಐಪಿ ಗಡಾದ್ ಹೇಳಿದ್ದಾರೆ.

ಶುಕ್ರವಾರ ಕೇವಲ ಓರ್ವ ವ್ಯಕ್ತಿಯಲ್ಲಿ ಕಾಣಿಸಿಕೊಂಡ ಆಮಶಂಕೆ ಭೇದಿ. ಈ ಆಮಶಂಕೆ ಹಬ್ಬಲು ಏನು ಕಾರಣ ಎನ್ನುವುದನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚುತ್ತಿದೆ. ಕುಡಿಯುವ ನೀರಿನಿಂದ ರೋಗ ಹಬ್ಬಿದೆಯಾ ಅಥವಾ ಬೇರೆ ಕಾರಣಗಳಿವೆಯಾ ಎಂಬ ಬಗ್ಗೆ ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ.

ಸಪ್ಟೆಂಬರ್ 30ಕ್ಕೆ 78 ಆಮಶಂಕೆ ಪ್ರಕರಣಗಳು ಪತ್ತೆಯಾಗಿವೆ. ಬಳಿಕ ಅಕ್ಟೋಬರ್ 1 ರಂದು 24 ಪ್ರಕರಣಗಳು, ಅ.2 ರಂದು 15 ಪ್ರಕರಣಗಳು ಪತ್ತೆಯಾಗಿವೆ. ಸಧ್ಯ ಪರಿಸ್ಥಿತಿ ಹತೋಟಿಗೆ ಬಂದಿದೆ. ಎಲ್ಲ ರೀತಿ ತಪಾಸಣೆ ನಡೆಸಲಾಗುತ್ತಿದೆ ಎಂದು ಡಿಎಚ್‌ಒ ಐಪಿ ಗಡಾದ್ ಮಾಹಿತಿ ನೀಡಿದ್ದಾರೆ.

ಇದನ್ನು ನೋಡಿ : ಜೀವ ತೆಗೆದವನು ತಾನೂ ಸತ್ತ…ಸಿಕ್ಕೀತೆ ನ್ಯಾಯ…? – ಕೆ.ಎಸ್ ವಿಮಲಾ Janashakthi Media

 

Donate Janashakthi Media

Leave a Reply

Your email address will not be published. Required fields are marked *