ಮನ್ ಕಿ ಬಾತ್‌ ಅಧ್ಯಯನದ ಬಗ್ಗೆ ಯಾವುದೆ ಮಾಹಿತಿ ಇಲ್ಲ ಎಂದ ಐಐಎಂ | ಸುಳ್ಳು ಹೇಳಿದರೆ ಪ್ರಧಾನಿ ಮೋದಿ?

ಬೆಂಗಳೂರು: ಪ್ರಧಾನಿ ಮೋದಿ ಅವರು ಹಂಚಿಕೊಂಡಿರುವ ಮನ್ ಕಿ ಬಾತ್‌ ಅಧ್ಯಯನದ ಬಗ್ಗೆ ತಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಐಐಎಂ ಬೆಂಗಳೂರು ಹೇಳಿದೆ ಎಂದು ಸುದ್ದಿ ಮಾಧ್ಯಮ ನ್ಯೂಸ್‌ ಮಿನಿಟ್ ವರದಿ ಹೇಳಿದೆ. ಮನ್ ಕಿ ಬಾತ್ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಬೆಂಗಳೂರು ಅಧ್ಯಯನ ನಡೆಸಿದೆ ಎಂದು ಪ್ರಧಾನಿ ಮೋದಿ ಅವರು ಅಕ್ಟೋಬರ್ 3 ರಂದು ಟ್ವೀಟ್(ಆರ್ಕೈವ್) ಮೂಲಕ ತಿಳಿಸಿದ್ದರು.

ಈ ಅಧ್ಯಯನ ಕುರಿತ ವಿವರಗಳನ್ನು ಅವರು ತಮ್ಮ ವೆಬ್‌ಸೈಟ್‌ನಲ್ಲಿ ಪೋಸ್ಟ್(ಆರ್ಕೈವ್) ಕೂಡಾ ಮಾಡಿದ್ದರು. ಅದರಲ್ಲಿ ತಮ್ಮ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್‌ನ ಪ್ರಭಾವದ ಕುರಿತು ಅಧ್ಯಯನದ ವಿವರಗಳನ್ನು ನೀಡಲಾಗಿತ್ತು. ಈ ಅಧ್ಯಯನವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಬೆಂಗಳೂರು ನಡೆಸಿದೆ ಎಂದು ಪ್ರಧಾನಿ ಉಲ್ಲೇಖಿಸಿದ್ದರು.

ಇದನ್ನೂ ಓದಿ: ಹೈಕಮಾಂಡ್ ಓಕೆ ಅಂದ್ರೆ ನಾನು ಸಿಎಂ ಆಗಲು ಸಿದ್ದ | ಸಚಿವ ಪ್ರಿಯಾಂಕ್ ಖರ್ಗೆ

ಅವರು ಈ ಬಗ್ಗೆ ಹೇಳಿದ ಸುಮಾರು ಒಂದು ತಿಂಗಳ ನಂತರ ಇದರ ಬಗ್ಗೆ ಸತ್ಯಾಸತ್ಯತೆ ಹೊರಗೆ ಬಂದಿದೆ. ಈ ಕುರಿತು ಮಾಹಿತಿ ಹಕ್ಕಿನ ಮೂಲಕ ಕೇಳಲಾದ ಪ್ರತಿಕ್ರಿಯೆಯಲ್ಲಿ ಇಂತಹ ಯಾವುದೆ ಅಧ್ಯಯನದ ಮಾಹಿತಿ ಲಭ್ಯವಿಲ್ಲ ಎಂದು ಐಐಎಂ ಬೆಂಗಳೂರು ಉತ್ತರಿಸಿದೆ.

ಅಕ್ಟೋಬರ್ 3ರಂದು ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ ಪ್ರತಿ ತಿಂಗಳು ನಡೆಯುವ ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನ ಒಂಬತ್ತನೇ ವಾರ್ಷಿಕೋತ್ಸವದ ಬಗ್ಗೆ ಬರೆದಿದ್ದರು ಹಾಗೂ ಅಧ್ಯಯನ ವಿವರಗಳು ಎಂದು ತಮ್ಮ ವೆಬ್‌ಸೈಟ್‌ನ ಲಿಂಕ್ ಒಂದನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ತೆಲಂಗಾಣ | ಕಾಂಗ್ರೆಸ್ ಜೊತೆ ಸೀಟು ಹೊಂದಾಣಿಕೆ ವಿಫಲ; 17 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದ ಸಿಪಿಐ(ಎಂ)

“ಇಂದು, ಮನ್‌ ಕಿ ಬಾತ್ 9 ವರ್ಷಗಳನ್ನು ಪೂರೈಸುತ್ತಿದೆ. ಅದರ ಬಗ್ಗೆ ಎಸ್‌ಬಿಐ ಮತ್ತು ಐಐಎಂ ಬೆಂಗಳೂರು ನಡೆಸಿರುವ ಆಸಕ್ತಿದಾಯಕ ಅಧ್ಯಯನವು ಇಲ್ಲಿದೆ. ಈ ಅಧ್ಯಯನವು ಮನ್‌ ಕಿ ಬಾತ್ ಒಳಗೊಂಡಿರುವ ಕೆಲವು ವಿಷಯಗಳು ಮತ್ತು ಅವುಗಳ ಸಾಮಾಜಿಕ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ಇದು ಅದ್ಭುತವಾಗಿದೆ. ಈ ಮಾಧ್ಯಮದ ಮೂಲಕ ನಾವು ಹಲವಾರು ಜೀವನ ಪ್ರಯಾಣಗಳನ್ನು ಮತ್ತು ಸಾಮೂಹಿಕ ಪ್ರಯತ್ನಗಳನ್ನು ಆಚರಿಸಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದ್ದರು.

ಅವರು ಹಂಚಿಕೊಂಡಿರುವ ತನ್ನ ವೆಬ್‌ಸೈಟ್‌ನ ಲೇಖನವು, ‘ಮನ್ ಕಿ ಬಾತ್‌ನ ಪರಿವರ್ತನೆಯ ಪರಿಣಾಮ: ಎಸ್‌ಬಿಐ ಮತ್ತು ಐಐಎಂ ಬೆಂಗಳೂರು ಮೂಲಕ ವಿಶ್ಲೇಷಣೆ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಕಟವಾಗಿದೆ.

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಾದ ‘ಬೇಟಿ ಬಚ್ಚಾವೋ ಬೇಟಿ ಪಢಾವೋ’, ‘ಯೋಗ’ ಮತ್ತು ‘ಖಾದಿ’ ಪ್ರಚಾರ ಮತ್ತು ರೇಡಿಯೋ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದ ಮಿಲೆಟ್ ಬಳಕೆಯನ್ನು ಅಧ್ಯಯನವು ಉಲ್ಲೇಖಿಸಿದೆ ವೆಬ್‌ಸೈಟ್‌ನ ಲೇಖನವು ಹೇಳಿದೆ.

ಆದಾಗ್ಯೂ, ಅಧ್ಯಯನದ ಶೀರ್ಷಿಕೆ ಮತ್ತು ದಿನಾಂಕ, ಅದಕ್ಕೆ ಖರ್ಚು ಮಾಡಿದ ಹಣ, ಎಸ್‌ಬಿಐ ಜೊತೆಗಿನ ಒಪ್ಪಂದ ಮತ್ತು ಇತರ ವಿವರಗಳ ಕುರಿತು ಆರ್‌ಟಿಐ ಮೂಲಕ ಕೇಳಲಾದ ಪ್ರಶ್ನೆಗಳಿಗೆ ತಮ್ಮ ಬಳಿಯ ದಾಖಲೆಯಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಐಐಎಂ ಬೆಂಗಳೂರು ಉತ್ತರಿಸಿದೆ.

ವಿಡಿಯೊ ನೋಡಿ: ನವೆಂಬರ್ 1 ರಂದು ಯಾವೆಲ್ಲ ರಾಜ್ಯಗಳು ರಾಜ್ಯೋತ್ಸವವನ್ನು ಆಚರಿಸುತ್ತವೆ? ಇಲ್ಲಿದೆ ಸಂಕ್ಷಿಪ್ತ ವಿವರಣೆ

Donate Janashakthi Media

Leave a Reply

Your email address will not be published. Required fields are marked *