ಕಾಡ್ಗಿಚ್ಚು ಕಂಡುಬಂದರೆ ಈ ಅರಣ್ಯ ಸಹಾಯವಾಣಿಗೆ ಕೂಡಲೇ ಕರೆ ಮಾಡಿ

ದಾವಣಗೆರೆ: ನಗರದ ಪ್ರಾದೇಶಿಕ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಕಂಡುಬಂದರೆ ಅರಣ್ಯ ಸಹಾಯವಾಣಿ 1926 ಸಂಖ್ಯೆಗೆ ಕೂಡಲೇ ಕರೆ ಮಾಡಲು ಕೋರಲಾಗಿದೆ. ಅಜಾಗರೂಕತೆಯಿಂದ ಬೆಂಕಿಕಡ್ಡಿಗಳು, ಬೀಡಿ ಹಾಗೂ ಸಿಗರೇಟ್ ತುಂಡುಗಳು ಅರಣ್ಯ ಬೆಂಕಿಗೆ ಕಾರಣವಾಗಿ, ಪರಿಸರಕ್ಕೆ ಹಾನಿಯುಂಟು ಮಾಡಬಹುದು. ಕಂಡು

ಇದರಿಂದ ನೈಸರ್ಗಿಕವಾದ ಅರಣ್ಯ ಸಂಪತ್ತಿಗೆ ಹಾನಿ ಮಾಡುವುದರೊಂದಿಗೆ ನೆಲೆಸಿರುವ ಪ್ರಾಣಿ-ಪಕ್ಷಿ, ಸಸ್ಯ ಸಂಕುಲಗಳ ನಾಶಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: ಪಾಲ್ಘರ್| ಸೇತುವೆಯಿಂದ ಬಿದ್ದ ಟ್ಯಾಂಕರ್; ಚಾಲಕ ಸಾವು

ಸಹಾಯವಾಣಿ ಜೊತೆಗೆ ರತ್ನಾಕರ್ ಓಬಣ್ಣವರ-ವಲಯ ಅರಣ್ಯಾಧಿಕಾರಿ ಮೊ.ಸಂ.9986230824, ರಾಮಚಂದ್ರಪ್ಪ- ಉಪ ವಲಯ ಅರಣ್ಯಾಧಿಕಾರಿ, ಹೆಬ್ಬಾಳ್ ಶಾಖೆ ಮೊ.ಸಂ: 9513474666, ಹಸನ್ ಬಾಷಾ- ಉಪವಲಯ ಅರಣ್ಯಾಧಿಕಾರಿ, ಮಲೇಬೆನ್ನೂರು ಶಾಖೆ ಮೊ.ಸಂ: 8971081044, ಖಾಲೀದ್ ಮುಜ್ತಾಬಾ- ಉಪ ವಲಯ ಅರಣ್ಯಾಧಿಕಾರಿ, ಹರಿಹರ ಶಾಖೆ ಮೊ.ಸಂ:8105559874, ದಿನೇಶ್ ಕುಮಾರ್ ಕೆ.- ಉಪ ವಲಯ ಅರಣ್ಯಾಧಿಕಾರಿ, ದಾವಣಗೆರೆ ನಗರ ಶಾಖೆ ಮೊ.ಸಂ: 9535852070. ಕರೆಮಾಡಬೇಕೆಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ನೋಡಿ: ರಂಗಭೂಮಿ ದಿನ| ಜಲಗಾರ ನಾಟಕ – ರಂಗ ವಿನ್ಯಾಸ ನಿರ್ದೇಶನ – ಮೈಕೋ ಶಿವಶಂಕರ್‌ Janashakthi Media

Donate Janashakthi Media

Leave a Reply

Your email address will not be published. Required fields are marked *