ಬೆಂಗಳೂರು: ‘ದೂರುದಾರರು ಪೊಲೀಸ್ ಠಾಣೆಯಲ್ಲಿ ದೂರನ್ನು ತಿರಸ್ಕರಿಸಿದರೆ ನೇರವಾಗಿ ಹೈಕೋರ್ಟ್ ಮೊರೆಹೋಗಬಹುದು’ ಎಂದು ಪ್ರಕರಣವೊಂದರಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶಿಸಿದೆ.
‘ನಮ್ಮ ದೂರನ್ನು ಪರಿಗಣಿಸಲು ಹುಳಿಮಾವು ಪೊಲೀಸ್ ಠಾಣೆ ಅಧಿಕಾರಿಗೆ ನಿರ್ದೇಶಿಸಬೇಕು’ ಎಂದು ಕೋರಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ಬಿ.ಎಚ್.ನಾಗರಾಜು ಸಲ್ಲಿಸಿದ್ದ ರಿಟ್ ಅರ್ಜಿ ಪುರಸ್ಕರಿಸಿ, ಈ ಕುರಿತಂತೆ ಆದೇಶಿಸಿದೆ.
ಇದನ್ನೂ ಓದಿ: ಯು.ಎಸ್ ಸಾಮ್ರಾಜ್ಯಶಾಹಿ-ವಿರೋಧಿ ‘ಕೆಂಪು ಪುಸ್ತಕ ದಿನ’
‘ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ-2023ರ (ಬಿಎನ್‌ಎಸ್‌ಎಸ್) ಕಲಂ 173(4)ರ ಅಡಿಯಲ್ಲಿ ಸೂಚಿಸಲಾದ ಉನ್ನತ ಅಧಿಕಾರಿ ಮತ್ತು ಮ್ಯಾಜಿಸ್ಟ್ರೇಟ್ ಅವರನ್ನು ಸಂಪರ್ಕಿಸುವ ವಿಧಾನವು ಮಾಹಿತಿಯನ್ನು ದಾಖಲಿಸಲು ನಿರಾಕರಿಸುವ ಪ್ರಕರಣಗಳಿಗೆ ಮಾತ್ರವೇ ಅನ್ವಯಿಸುತ್ತದೆ.
ಹೊರತಾಗಿ ತರ್ಕಬದ್ಧ ಅನುಮೋದನೆಯ ಮೂಲಕ ದೂರನ್ನು ತಿರಸ್ಕರಿಸುವ ಪ್ರಕರಣಗಳಿಗೆ ವಿಸ್ತರಿಸುವುದಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಚ್.ಪವನಚಂದ್ರ ಶೆಟ್ಟಿ ವಾದ ಮಂಡಿಸಿದ್ದರು.
ಇದನ್ನೂ ನೋಡಿ: ಯುಡಿಆರ್‌ನಲ್ಲಿ ಹೂತ ಸತ್ಯಗಳು, ಎಫ್‌ಐಆರ್‌ನಲ್ಲಿ ಹೊರಬರಲಿವೆಯೇ? Janashakthi Media
