ಬೆಂಗಳೂರು: ಮೇ 31ರ ಶುಕ್ರವಾರ ಎಸ್‌ಐಟಿ ಮುಂದೆ ಹಾಜರಾಗುವುದಾಗಿ ಪ್ರಜ್ವಲ್ ರೇವಣ್ಣ ಖುದ್ದು ಹೇಳಿದ್ದು, ಆತ ಬಂದಲ್ಲಿ ಏರ್‌ಪೋರ್ಟ್‌ನಲ್ಲಿಯೇ ಪ್ರಜ್ವಲ್ ರೇವಣ್ಣನನ್ನು ಬಂಧಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ.ಪ್ರಜ್ವಲ್, ಈಗಾಗಲೇ ಪ್ರಜ್ವಲ್ ರೇವಣ್ಣ ಬಂಧಿಸಲು ವಾರೆಂಟ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಭಾರತಕ್ಕೆ ಬರುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು ಬಂಧಿಸಲಿದ್ದಾರೆ ಬಳಿಕ ವಿಚಾರಣೆ ನಡೆಸಲು ಮುಂದಾಗಲಿದ್ದಾರೆ ಎಂದ ಪರಮೇಶ್ವರ್, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಎಂಬ ಆಧಾರದ ಮೇಲೆ ಬಂಧಿಸುತ್ತಿಲ್ಲ.
ಇದನ್ನೂ ಓದಿ: ಮತದಾನದ ಲೈವ್ ವೆಬ್‍ಕಾಸ್ಟಿಂಗ್- ಬಿಜೆಪಿ ನಿಯೋಗ ಮನವಿ
ಎಸ್‌ಐಟಿ ಅಧಿಕಾರಿಗಳಿಗೆ ತನಿಖೆ ವೇಳೆ ಅನುಮಾನ ಬಂದವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂ ನೋಡಿ: ಪ್ರಜ್ವಲ್ ರೇವಣ್ಣ – ಲೈಂಗಿಕ ಹತ್ಯಾಕಾಂಡ ಆರೋಪಿJanashakthi Media