ಮಂಡ್ಯ: ಮಂಡ್ಯ ಗೆದ್ದರೆ ಇಂಡಿಯಾ ಗೆದ್ದಂತೆ. ನೂರಕ್ಕೆ ನೂರು ಬೆಂಗಳೂರು ಗ್ರಾಮಾಂತರ, ಮಂಡ್ಯ,ಹಾಸನ ಗೆಲ್ಲುವುದು ಸತ್ಯ. ಹಿಂದೆ ಮುಖ್ಯಮಂತ್ರಿಯಾದವರು ಮಂಡ್ಯದ ಜನರ ಕಿವಿಗೀಗ ಹೂವು ಇಡಲು ಹೊರಟಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಡಿಸಿಎಂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿಹಾಯ್ದರು.
ಮಂಡ್ಯದಲ್ಲಿ ನಡೆದ ಬೃಹತ್ ಸಮಾವೇಶವ್ನುದ್ದೇಶಿಸಿ ಮಾತನಾಡಿದ ಡಿಕೆಶಿ, ,ಮಂಡ್ಯದಲ್ಲಿ ಒಂದು ಸೀಟ್ ಬಿಟ್ಟರೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ವಿರೋಧ ಪಕ್ಷದ ಅಭ್ಯರ್ಥಿ ಏನನ್ನೂ ಮಂಡ್ಯಕ್ಕೆ ಕೊಟ್ಟಿಲ್ಲ. ಮಂಡ್ಯದ ಜನರ ಬದುಕಿಗೆ ಗ್ಯಾರೆಂಟಿಗಳ ಜೊತೆಗೆ ಕಾಂಗ್ರೆಸ್ ಮೇಕೆದಾಟು ಯೋಜನೆಯನ್ನು ಕಾವೇರಿಗಾಗಿ ಮಾಡೇ ಮಾಡುತ್ತೇವೆ ಎನ್ನುವ ಸಂಕಲ್ಪ ಮಾಡುತ್ತೇವೆ. ಡಬಲ್ ಇಂಜಿನ್ ಸರ್ಕಾರ ಮೇಕೆ ದಾಟು ಯೋಜನೆಗೆ ಮಾತು ಕೊಟ್ಟೇ ಇಲ್ಲ. ನಮ್ಮ ಅವಧಿಯಲ್ಲಿ ಮೇಕೆದಾಟು ಯೋಜನೆಯನ್ನು ಮಾಡೇ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ : ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇಂಡಿಯಾ ಒಕ್ಕೂಟ ಗೆದ್ದೇ, ಗೆಲ್ಲಲಿದೆ: ಡಿಕೆಶಿ
ಮಂಡ್ಯದಿಂದ ಹಿಂದೆ ಮುಖ್ಯಮಂತ್ರಿಯಾದವರು ಜನರ ಕಿವಿಗೀಗ ಹೂವು ಇಡಲು ಹೊರಟಿದ್ದಾರೆ. ರಾಹುಲ್ ಗಾಂಧಿಯ ಕಾಲ್ಗುಣ ರಾಜ್ಯಕ್ಕೆ ಒಳ್ಳೆಯದಾಗಿದೆ. ಭಾರತಕ್ಕೆ ನ್ಯಾಯಯಾತ್ರೆಯನ್ನು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರೆಲ್ಲಾ ದೇಶದ ಒಳಿತಿಗಾಗಿ ದುಡಿಯುತ್ತಿದ್ದಾರೆ. ತೆನೆ ಹೊಲದಲ್ಲಿ ಇದ್ದರೆ ಚೆಂದ, ದಾನ ಧರ್ಮ ಮಾಡುವುದು ಚೆಂದ. ಐದು ಗ್ಯಾರೆಂಟಿ ಸೇರಿ ಕೈ ಸಮೃದ್ಧಿ ಆಗಿದೆ. ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ.
ವಿಜಯೇಂದ್ರ ಗ್ಯಾರೆಂಟಿಗಳು ತಾತ್ಕಾಲಿಕ ಎಂದು ಹೇಳಿರುವ ತಾತ್ಪರ್ಯವೇನೆಂದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರೆಂಟಿಗಳನ್ನು ಕಿತ್ತುಹಾಕುವುದಾಗಿದೆ. ಮಿಸ್ಟರ್ ಯಡಿಯೂರಪ್ಪ, ಮಿಸ್ಟರ್ ವಿಜಯೇಂದ್ರ ಗ್ಯಾರೆಂಟಿಗಳನ್ನು ನಾಶಮಾಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ.ರಾಜ್ಯದ ಜನರ ಬದುಕಿಗಾಗಿ ಕಾಂಗ್ರೆಸ್ ಗ್ಯಾರೆಂಟಿಗಳು ಶಾಶ್ವತವಾಗಿ ಇರಲಿವೆ.ಭಾರತಕ್ಕೆ ನ್ಯಾಯಯಾತ್ರೆ ಮಾಡಿದ್ದಾರೆ. ಮಂಡ್ಯದಲ್ಲಿ ರೈತನ ಮಗನಿಗೆ ಟಿಕೆಟ್ ನೀಡಿದ್ದಾರೆ.ಮಂಡ್ಯಕ್ಕೆ ಚಂದ್ರು ಅಷ್ಟೇ ಅಭ್ಯರ್ಥಿಯಲ್ಲ,ಸಿದ್ದರಾಮಯ್ಯ, ಡಿಕೆಶಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿ ಎಂಬುದನ್ನು ತಿಳಿದು ಕಾಂಗ್ರೆಸ್ ಅನ್ನು ಮಂಡ್ಯದಲ್ಲಿ ಗೆಲ್ಲಿಸಬೇಕೆಂದು ಡಿಕೆಶಿ ಮನವಿ ಮಾಡಿದರು.
ಇದನ್ನೂ ನೋಡಿ: ದಕ್ಷಿಣ ಭಾರತದಲ್ಲಿ ಬಿಜೆಪಿ ಯಾಕೆ ಗೆಲ್ಲುವುದಿಲ್ಲ ಗೊತ್ತೆ ಮೋದೀಜಿ? Janashakthi Media