ಬೆಂಗಳೂರು: ಪೆನ್ ಡ್ರೈವ್ ಹಿಂದೆ ದೊಡ್ಡ ತಿಮಿಂಗಿಲವಿದೆ. ಆ ತಿಮಿಂಗಿಲವನ್ನು ಹಿಡಿದರೆ ಎಲ್ಲವೂ ಗೊತ್ತಾಗಲಿದೆ ಎಂದು ಮಾಜಿ ಸಿಎಂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ. ಹೆಚ್‌ಡಿಕೆ
ನಗರದಲ್ಲಿ ಸುದ್ದಿಗಾರರೊಂದಿಗೆ ಪರಪ್ಪನ ಅಗ್ರಹಾರದಿಂದ ಜೈಲಿನಿಂದ ಷರತ್ತುಬದ್ಧ ಜಾಮೀನಿನ ಮೇಲೆ ಹೊರ ಬಂದಿರುವ ಹೆಚ್.ಡಿ.ರೇವಣ್ಣ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್‌ಡಿಕೆ,
ಆ ತಿಮಿಂಗಿಲದ ಆಡಿಯೋ ಬಿಟ್ಟದ್ದಕ್ಕೇ ಕೇಸ್ ಹಾಕಿದ್ದಾರೆ. ಆ ಆಡಿಯೋ ಬಿಟ್ಟವ ಮೇಲೆಯೇ ಕೇಸ್ ಹಾಕಿ ಒಳಗೆ ಕೂರಿಸಿದ್ದಾರೆ. ದೆಹಲಿಗೆ ತೆರಳಿ ದಾಖಲೆ ಬಿಡುಗಡೆ ಮಾಡುತ್ತಿದ್ದರು.
ಹಾಗಾಗಿ ಅವರನ್ನು ಹಿಡಿಯಲಾಗಿದೆ ಎಂದಿದ್ದಾರೆ. ಯಾವ ದಾಖಲೆ ಬಿಡುಗಡೆಗೆ ಹೊರಟಿದ್ದರು? ಅವರನ್ನು ಹಿಡಿದು ಇವರು ಯಾವ ದಾಖಲೆ ವಶಪಡಿಸಿಕೊಳ್ಳಲು ಹೊರಟಿದ್ದಾರೆ? ಪೆನ್ ಡ್ರೈವ್ ಪ್ರಕರಣದಲ್ಲಿ ಎಸ್ಐಟಿ ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂಬುದನ್ನು ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ : ಬಿಟ್ ಕಾಯಿನ್ ಹಗರಣ: ಡಿಜೆಪಿ ದರ್ಜೆಯ ಅಧಿಕಾರಿಯೊಬ್ಬರ ಮಗನ ವಿಚಾರಣೆ
ಹೋರಾಟಕ್ಕೆ ಇನ್ನೂ ಸಾಕಷ್ಟು ಸಮಯಗಳಿವೆ. ನನ್ನ ಬಳಿಯು ಎಲ್ಲಾ ದಾಖಲೆಗಳಿವೆ. ಸಮಯ ಬಂದಾಗ ಹೋರಾಟ ಮಾಡುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ, ರೇವಣ್ಣಗೆ ಜಾಮೀನು ಸಿಕ್ಕಿದೆ ಎಂದು ಕಾರ್ಯಕರ್ತರು ಸಂಭ್ರಮಿಸಬೇಡಿ, ಇದು ಸಂಭ್ರಮಿಸುವ ಸಮಯವಲ್ಲ. ರಾಜ್ಯದಲ್ಲಿ ಹೀನಾಯ ಘಟನೆ ನಡೆದಿದೆ. ಇದು ರಾಜ್ಯದ ಜನತೆ ತಲೆತಗ್ಗಿಸುವ ಘಟನೆ ಎಂದು ಹೇಳಿದ್ದಾರೆ.
ಆರೋಪಿಗಳನ್ನು ಎಸ್ ಐಟಿ ಈವರೆಗೆ ಬಂಧಿಸಿಲ್ಲ. ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ. ಹೆಚ್‌ಡಿಕೆ
ಇದನ್ನು ನೋಡಿ : 90 ದಿನ ವಿದೇಶದಲ್ಲಿ ಇರ್ತಾರಾ ಪ್ರಜ್ವಲ್ ರೇವಣ‍್ಣ!ಇಂಟರ್ ಪೋಲ್ ಬಂಧಿಸಿ ಭಾರತಕ್ಕೆ ಕರೆ ತರುತ್ತಾ?